ಅವ್ಯವಸ್ಥೆಗೆ ರಜ್ಜಬಲಿ ನಿಬ್ಬೆರಗು
ಕನ್ನಡಪ್ರಭ ವಾರ್ತೆ, ಮುದಗಲ್, ಸೆ.18
ಸ್ಥಳೀಯ ಪಟ್ಟಣ ಪಂಚಾಯಿತಿಯ ನೂತನ ಅಧ್ಯಕ್ಷ ರಜ್ಜಬಲಿ ಹಾಗೂ ಸದಸ್ಯರು ವಾರ್ಡುಗಳಲ್ಲಿ ಸಂಚರಿಸಿ ಅಲ್ಲಿನ ಅವ್ಯವಸ್ಥೆಗೆ ನಿಬ್ಬೆರಗಾದರು.
ಕಾಯಿಪಲ್ಲೆ ಮಾರುಕಟ್ಟೆಯ ಸ್ಥಿತಿಯನ್ನು ನೋಡಿ ಶೀಘ್ರವೇ ಸ್ವಚ್ಛತೆಗೆ ಖಾಸಗಿ ಕಾರ್ಮಿಕರನ್ನು ತೆಗೆದುಕೊಂಡು
ಕಾರ್ಯಪ್ರವೃತ್ತರಾಗಬೇಕೆಂದು ಮುಖ್ಯಾಧಿಕಾರಿಗಳಿಗೆ ಸೂಚಿಸಿದರು. ಪಟ್ಟಣದಲ್ಲಿಯ ಕಾಯಿಪಲ್ಲೆ ಮಾರುಕಟ್ಟೆ, ರಾಜ್ಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ರಸ್ತೆ, 4ನೇ ವಾರ್ಡಿನಲ್ಲಿ ಚರಂಡಿಗೆ ಶೌಚಾಲಯದ ಸಂಪರ್ಕ ಕಲ್ಪಿಸಿರುವುದು, ಚರಂಡಿಗಳ ಅವ್ಯವಸ್ಥೆ ಕುರಿತು ವೀಕ್ಷಿಸಿದರು.
ನೋಟಿಸ್ಗೆ ಕ್ಯಾರೆ ಎನ್ನದ ಜನತೆ: ಶೌಚಾಲಯಕ್ಕೆ ಇಂಗು ತೆಗ್ಗು ನಿರ್ಮಿಸಿಕೊಳ್ಳುವುದು ಮಾಲೀಕರ ಕರ್ತವ್ಯ, ಇಲ್ಲವಾದರೆ ಕಾನೂನು ಕ್ರಮಕ್ಕೆ ಮುಂದಾಗಬೇಕೆಂದಾಗ ಮುಖ್ಯಾಧಿಕಾರಿಗಳು ಈಗಾಗಲೇ ಹಲವು ನೋಟಿಸ್ ನೀಡಿದರೂ ಯಾವುದೇ ರೀತಿಯಲ್ಲಿ ಮಾಲೀಕರು ಪರ್ಯಾಯ ವ್ಯವಸ್ಥೆ ಮಾಡಿಕೊಂಡಿಲ್ಲ ಎಂದಾಗ ಆಡಳಿತ ಮಂಡಳಿಯ ಸದಸ್ಯರು ತಲೆಯಲ್ಲಾಡಿಸಿ ಹಿಂತಿರುಗಿದರು.
ಕಿಲ್ಲಾದ ಹುಸೆನಪಾಷಾ, ರಾಘವೇಂದ್ರ ಸ್ವಾಮಿ ಮಠದ ಮುಖ್ಯರಸ್ತೆಯಲ್ಲಿ ಚರಂಡಿ ತುಂಬಿ ರಸ್ತೆಗೆ ನೀರು ಹರಿಯುತ್ತಿರುವುದನ್ನು ವೀಕ್ಷಿಸಿ ಕಾರ್ಮಿಕರ ಮುಖೇನ ಸ್ವಚ್ಛತೆಗೆ ದಿಢೀರನೆ ಮುಂದಾಗಬೇಕು. ಪಟ್ಟಣದಲ್ಲಿ ಕಾಯಿಪಲ್ಲೆ ಮಾರುಕಟ್ಟೆ ಅವ್ಯವಸ್ಥೆ, ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜಿಗಾಗಿ ಸಂಗ್ರಹವಾಗುವ ನೀರಿನ ಟ್ಯಾಂಕರ್ ಕೆಳಗಡೆ ಚರಂಡಿ ನೀರು ಸಂಗ್ರಹವಾಗಿದೆ. ಈ ನೀರು ಹರಿದು ಹೋಗಲು ಆಸ್ಪದವಿಲ್ಲದ್ದನ್ನು ಕಂಡ ಸದಸ್ಯರು ಎರಡು ದಿನಗಳಲ್ಲಿ ಈ ಪ್ರದೇಶ ಸ್ವಚ್ಛವಾಗಿರಬೇಕು. ತಾತ್ಕಾಲಿಕ ಚರಂಡಿ ನಿರ್ಮಿಸಿ ಕೊಳಚೆ ನೀರನ್ನು ಕೆರೆಗೆ ಹರಿಸಲು ಸ್ಥಳದಲ್ಲಿದ್ದ ಮುಖ್ಯಾಧಿಕಾರಿಗಳಿಗೆ ನೂತದ ಅಧ್ಯಕ್ಷ ರಜ್ಜಬಲಿ ಸೂಚಿಸಿದರು.
ಸಮರೋಪಾದಿಯಲ್ಲಿ ಮೂಲಸೌಲಭ್ಯ ಕಲ್ಪಿಸಿ: ನೀವು ಯಾವ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತೀರೋ ನಮಗೆ ಗೊತ್ತಿಲ್ಲ, ಪಟ್ಟಣದಲ್ಲಿಯ ಮೂಲ ಸೌಲಭ್ಯಗಳಾದ ಬೀದಿದೀಪ, ಚರಂಡಿ ಸ್ವಚ್ಛತೆಗೆ ಸಮರೋಪಾದಿಯಲ್ಲಿ ಖಾಸಗಿ ಕಾರ್ಮಿಕರನ್ನು ತೆಗೆದುಕೊಂಡು, ಪೌರ ಕಾರ್ಮಿಕರ ಜೊತೆಗೆ ಕಾರ್ಯನಿರ್ವಹಿಸುವಂತೆ ಸೂಚಿಸಿದರು.
ಈ ಸಮಯದಲ್ಲಿ ಪಪಂ ಸದಸ್ಯರಾದ ಎಸ್.ಈರಣ್ಣ, ಮುಖಂಡರಾದ ಡಾ. ಬಸವರಾಜ ಹೊರಪೇಟ, ನಾಗನಗೌಡ, ಚಂದ್ರಶೇಖರ, ಸಂಜೀವಪ್ಪ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

