ರಾಯಚೂರು

ನೆರೆಪೀಡಿತ ಪ್ರದೇಶ ಘೋಷಣೆಗೆ ಆಗ್ರಹ

Published On :

ದೇವದುರ್ಗ: ಪಟ್ಟಣವನ್ನು ನೆರೆ ಪೀಡಿತ ಪ್ರದೇಶವೆಂದು ಘೋಷಿಸಿ ಪರಿಹಾರ ಕಾರ್ಯ ಕೈಗೊಳ್ಳಲು ಅನುದಾನ ಮಂಜೂರಾತಿಗೆ ಆಗ್ರಹಿಸಿ ಪುರಸಭೆಯ ಅಧ್ಯಕ್ಷ ಫಕ್ರೋದ್ದೀನ್ ಗೌರಂಪೇಟ ಒತ್ತಾಯಿಸಿದ್ದಾರೆ.
ತಹಸೀಲ್ದಾರ ಮುಖಾಂತರ ಶುಕ್ರವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಪಟ್ಟಣದಲ್ಲಿ ಸುರಿಯುತ್ತಿರುವ ಸತತ ಮಳೆಯಿಂದಾಗಿ ಪುರಸಭೆ ವ್ಯಾಪ್ತಿಯಲ್ಲಿ ರಸ್ತೆಗಳು ತೀರಾ ಹದಗೆಟ್ಟಿದ್ದು, ವಾರ್ಡುಗಳಲ್ಲಿ ಮಳೆಯ ನೀರು ಹರಿದು ಹಾನಿಯಾಗಿದೆ ಎಂದು ದೂರಿದರು.
ಪಟ್ಟಣದ ಗೋಪಾಲಸ್ವಾಮಿ ಓಣಿ, ಸರೋಜಿನಿ, ರಾಷ್ಟ್ರಪತಿ ಓಣಿ, ಮೋಮಿನಪುರ, ಅಶೋಕ ಓಣಿ, ಗೌತಮ್ಮ ಓಣಿ,  ವಾರ್ಡುಗಳು ತೆಗ್ಗು ಪ್ರದೇಶದಿಂದ ಕೂಡಿದ್ದು, ಪಟ್ಟಣದ ತಿಮ್ಮಪ್ಪನ ಕೆರೆಯಿಂದ ಬರುವ ಹೆಚ್ಚುವರಿ ನೀರು ಈ ವಾರ್ಡುಗಳ ಮುಖಾಂತರ ಹರಿಯುತ್ತಿರುವುದರಿಂದ ನಿವಾಸಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆಂದು ಆತಂಕ ವ್ಯಕ್ತಪಡಿಸಿದರು.
ಸಾಂಕ್ರಾಮಿಕ ರೋಗ ಭೀತಿ: ಪಟ್ಟಣದ ಮುಖ್ಯರಸ್ತೆಗಳು ಹದಗೆಟ್ಟಿದ್ದು, ಚರಂಡಿಗಳು ಮಳೆಯಿಂದಾಗಿ ಕಿತ್ತು ಹೋಗಿವೆ. ನಗರದಲ್ಲಿ ಎಲ್ಲೆಂದರಲ್ಲಿ ರಸ್ತೆ ಮೇಲೆ ನೀರು ನಿಂತು ಪಾದಚಾರಿಗಳಿಗೆ ನಡೆದಾಡಲು ಅವಕಾಶವಿಲ್ಲವಾಗಿದೆ. ತೆಗ್ಗು ಪ್ರದೇಶಗಳಲ್ಲಿ ನೀರು ನಿಂತಿರುವುದರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿಯಿದೆ ಎಂದು ದೂರಿದರು.
ಕೂಡಲೇ ಜಿಲ್ಲಾಧಿಕಾರಿಗಳು ಪಟ್ಟಣಕ್ಕೆ ಭೇಟಿ ನೀಡಿ ವಾಸ್ತವಸ್ಥಿತಿ ಪರಿಶೀಲಿಸಿ ಪಟ್ಟಣವನ್ನು ನೆರೆಪಿಡಿತ ಪ್ರದೇಶವೆಂದು ಘೋಷಿಸಿ ಸೂಕ್ತ ಪರಿಹಾರ ಕೈಗೊಳ್ಳಲು ಅಗತ್ಯ ಅನುದಾನ ಮಂಜೂರು ಮಾಡುವಂತೆ ಒತ್ತಾಯಿಸಿದ್ದಾರೆ.
ಈ ಸಂದರ್ಭ ಪುರಸಭೆ ಉಪಾಧ್ಯಕ್ಷ ನಾಗಪ್ಪ ಉಪ್ಪಾರ, ಸದಸ್ಯರಾದ ಸಿದ್ದಪ್ಪ, ವೆಂಕಟೇಶ ಸೋಮಕಾರ, ರಾಮಕೃಷ್ಣಾ ಎಂ.ಶ್ರೀನಿವಾಸ ಅಬಕಾರಿ, ಚಂದ್ರಶೇಖರ ಚಲುವಾದಿ, ಹನುಮೇಶ ನಾಯಕ, ರಂಗಪ್ಪ ನಾಯಕ, ಹೇಮಣ್ಣ ನಾಯ್ಕ್ ಮತ್ತಿತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.