ಕೆಸರು ಗದ್ದೆಯಾದ ಕೋರ್ಟ್ ರಸ್ತೆ
ಸಿಂಧನೂರು: ನಗರದ ಕೋರ್ಟ್ ರಸ್ತೆಯಲ್ಲಿ ದಿನವೂ ಓಡಾಡುವ ಜನ ಅಕ್ಷರಶಃ ಜಿಗುಪ್ಸೆಗೊಂಡಿದ್ದಾರೆ. ಕಾರಣ ಈ ರಸ್ತೆಯ ದುರಾವಸ್ಥೆ. ಸಾಮಾನ್ಯ ದಿನಗಳಲ್ಲೇ ನಡೆದಾಡಲು ಕಷ್ಟವಾಗಿರುವ ಈ ರಸ್ತೆ ಮಳೆಗಾಲದಲ್ಲಿ ತಾಳುವ ಅವಸ್ಥೆ ನಿಜಕ್ಕೂ ಹೇಸಿಗೆ ತರಿಸುತ್ತದೆ.
ಕಳೆದ ವಾರದಿಂದ ಬಿಟ್ಟು-ಬಿಟ್ಟು ಅಲ್ಪ ಪ್ರಮಾಣದ ಮಳೆಯಾಗುತ್ತಿರುವುದರಿಂದ ನಗರದ ಬಹುತೇಕ ಒಳರಸ್ತೆಗಳು ಸಂಪೂರ್ಣ ಕೆಸರುಮಯವಾಗಿವೆ. ಆದರೆ ಮಹೆಬೂಬ ಕಾಲೋನಿ, ಸುಟ್ಟ ಏರಿಯಾ ಸೇರಿದಂತೆ ನಾಲ್ಕು ವಾರ್ಡ್‌ಗಳಿಗೆ ಸಂಪರ್ಕ ಕಲ್ಪಿಸುವ ಕೋರ್ಟ್ ಪಕ್ಕದ ರಸ್ತೆ ಉಳಿದೆಲ್ಲ ರಸ್ತೆಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಹಾನಿಗೊಂಡಿದೆ. ರಸ್ತೆ ನಡುವೆ ಮೊಣಕಾಲು ಮಟ್ಟದ ದೊಡ್ಡ-ದೊಡ್ಡ ತಗ್ಗುಗಳು ಬಿದ್ದಿದ್ದು ಮಳೆ ಮತ್ತು ಚರಂಡಿ ನೀರು ನಿಂತು ಕಾಲಿಡಲು ಸಹ ಜಾಗವಿಲ್ಲದ ಮಟ್ಟಿಗೆ ಹಾಳಾಗಿದೆ. ಇನ್ನು ಈ ರಸ್ತೆಯ ಮೂಲಕ ಆರ್ಜಿಎಂ ಶಾಲೆ, ಜ್ಞಾನಜ್ಯೋತಿ ವಿಜ್ಞಾನ ಕಾಲೇಜ್, ಆದಿತ್ಯ ಪದವಿಪೂರ್ವ ಕಾಲೇಜ್, ಗಿರಿಜಾ ಮಹಿಳಾ ಕಾಲೇಜ್‌ಗೆ ಹೋಗಲು ಇದೇ ರಸ್ತೆಯನ್ನು ಅವಲಂಬಿಸಿರುವುದರಿಂದ ವಿದ್ಯಾರ್ಥಿಗಳು ಕೆಸರು ಮೆತ್ತಿಸಿಕೊಂಡೇ ಮುಂದೆ ಸಾಗಬೇಕಾದ ಅನಿವಾರ್ಯತೆ ಎದುರಾಗಿದೆ.
ಎಚ್ಚೆತ್ತುಕೊಳ್ಳದ ನಗರಸಭೆ: ಮಳೆ ನಿಂತು 15 ದಿನಗಳಾದರೂ ಬದಲಾಗದ ಈ ರಸ್ತೆಯ ದುಸ್ಥಿತಿಯ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸುವ ಸಾರ್ವಜನಿಕರ ಬಗ್ಗೆ ನಗರಸಭೆ ಅಧಿಕಾರಿಗಳಾಗಲಿ, ಸಿಬ್ಬಂದಿಯಾಗಲಿ ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ.
ಕಾರಣ ನಗರಸಭೆಯವರು ಈಗಲಾದರೂ ಎಚ್ಚೆತ್ತು ರಸ್ತೆಯನ್ನು ತಾತ್ಕಾಲಿಕ ದುರಸ್ತಿ ಮಾಡಿ ವಿದ್ಯಾರ್ಥಿಗಳು, ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕೆಂದು ಕಾಲೇಜು ವಿದ್ಯಾರ್ಥಿಗಳಾದ ಮಲ್ಲಿಕಾ ಚಳ್ಳೂರು, ಉಮೇಶ, ಶಾರದಾ, ಆಸಿಫಾ ಸುಲ್ತಾನ, ಬಸವರಾಜ ಪಿ., ನಾಗರಾಜ, ಮಂಜುನಾಥಗೌಡ ಮತ್ತಿತರರು ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

