ಅಂತರ್ ಮಹಾವಿದ್ಯಾಲಯಗಳ ಕ್ರೀಡಾಕೂಟ 28ರಿಂದ ಆರಂಭ
ಕ.ಪ್ರ.ವಾರ್ತೆ ಗುಲ್ಬರ್ಗ ಸೆ.23
ಗುಲ್ಬರ್ಗ ವಿಶ್ವವಿದ್ಯಾಲಯದ 33ನೇ ಅಂತರ ಮಹಾವಿದ್ಯಾಲಯಗಳ ಕ್ರೀಡಾಕೂಟ ನಗರದ ಬಿ. ಶ್ಯಾಮಸುಂದರ ಸ್ಮಾರಕ ದೈಹಿಕ ಶಿಕ್ಷಣ ಮಹಾವಿದ್ಯಾಲಯದಲ್ಲಿ ಅಕ್ಟೋಬರ್ 28 ರಿಂದ 30ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಪಿಪಲ್ಸ್ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮಾರುತಿರಾವ ಡಿ. ಮಾಲೆ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶ್ಯಾಮಸುಂದರ ದೈಹಿಕ ಶಿಕ್ಷಣ ಮಹಾವಿದ್ಯಾಲಯದಲ್ಲಿ ಇದು ಎರಡನೇ ಬಾರಿ ಅಂತರ್ ಮಹಾವಿದ್ಯಾಲಯಗಳ ಕ್ರೀಡಾಕೂಟವನ್ನು ಸಂಘಟಿಸುವ ಅವಕಾಶ ದೊರೆತಿದೆ ಎಂದರು.
ಈ ಕ್ರೀಡಾಕೂಟಕ್ಕೆ ಗುಲ್ಬರ್ಗ ವಿಶ್ವವಿದ್ಯಾಲಯ ವ್ಯಾಪ್ತಿಯ 285 ಮಹಾವಿದ್ಯಾಲಯಗಳಿಂದ ಸುಮಾರು 500ಕ್ಕೂ ಹೆಚ್ಚು ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ. ಆಸಕ್ತರು ಅಕ್ಟೋಬರ್ 15ರೊಳಗೆ ತಮ್ಮ ಹೆಸರನ್ನು ಆಯಾ ಕಾಲೇಜುಗಳಲ್ಲಿಯೇ ನೋಂದಾಯಿಸಬೇಕು ಎಂದರು.
ಸುಮಾರು 31 ವರ್ಷಗಳ ಇತಿಹಾಸವಿರುವ ಶ್ಯಾಮಸುಂದರ ದೈಹಿಕ ಶಿಕ್ಷಣ ಮಹಾವಿದ್ಯಾಲಯದ ವಿಶಾಲವಾದ 25 ಎಕರೆ ಜಮೀನಿರುವ ಮೈದಾನದಲ್ಲ ಕ್ರೀಡೆಯನ್ನು ಸಂಘಟಿಸಲಾಗಿದ್ದು, ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ವಿಜೇತೆ ಅಶ್ವಿನಿ ನಾಚಪ್ಪ ಕ್ರೀಡಾಕೂಟ ಉದ್ಘಾಟಿಸಲಿದ್ದಾರೆ ಎಂದರು.
ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆ ವಹಿಸಲಿದ್ದಾರೆ. ಹೈ.ಕ. ಪ್ರದೇಶದ ಜನಪ್ರತಿನಿಧಿಗಳು, ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ ಕ್ರೀಡಾಚೇತನ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಾಗುವುದು ಎಂದರು.
ಗುಲ್ಬರ್ಗ ಜಿಲ್ಲೆಯ 118 ಕಾಲೇಜುಗಳಿಂದ ಸುಮಾರು 200ಕ್ಕೂ ಹೆಚ್ಚು ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ. ಪಾಲ್ಗೊಳ್ಳುವ ಎಲ್ಲ ಕ್ರೀಡಾಪಟುಗಳಿಗೆ ವಸತಿ ಮತ್ತು ಊಟದ ವ್ಯವಸ್ಥೆಯನ್ನೂ ಕಾಲೇಜಿನಲ್ಲಿಯೇ ಮಾಡಲಾಗಿದೆ. ಹೀಗಾಗಿ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಮಾಲೆ ಹೇಳಿದರು.
ಪ್ರತಿ ಮಹಾವಿದ್ಯಾಲಯಗಳು ಕಡ್ಡಾಯವಾಗಿ 200 ಶುಲ್ಕ ಭರಿಸಬೇಕು. ಪ್ರತಿ ಕ್ರೀಡಾಪಟುವಿಗೆ ಪ್ರತಿ ಕ್ರೀಡೆಗೆ 25, ಪ್ರತಿ ರಿಲೇ ತಂಡಕ್ಕೆ 50 ಹಾಗೂ ಮಹಾವಿದ್ಯಾಲಯದ ನಾಮಫಲಕ್ಕೆ 100 ಪಾವತಿಸಬೇಕು. ಜತೆಗೆ ಪ್ರತಿ ಮಹಾವಿದ್ಯಾಲಯಗಳಿಂದ ಪ್ರಾಂಶುಪಾಲರು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ವಿವಿಯ ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ಡಾ. ಪಾಸೋಡಿ ತಿಳಿಸಿದರು.
ಪ್ರತಿ ಮಹಾವಿದ್ಯಾಲಯಗಳಿಂದ ಕಡ್ಡಾಯವಾಗಿ 5 ವಿದ್ಯಾರ್ಥಿಗಳು ಪಾಲ್ಗೊಳ್ಳುವಂತೆ ಪ್ರಾಂಶುಪಾಲರು ಅಗತ್ಯ ಕ್ರಮ ಕೈಗೊಳ್ಳಬೇಕು. ಮಹಿಳೆಯರನ್ನು ಹೊರತುಪಡಿಸಿ ಒಬ್ಬ ಕ್ರೀಡಾಪಟು ಒಂದು ಕ್ರೀಡಾಪಟು ರಿಲೇ ಹೊರತು ಮೂರಕ್ಕಿಂತ ಹೆಚ್ಚು ಕ್ರೀಡೆಗಳಲ್ಲಿ ಪಾಲ್ಗೊಳ್ಳಲು ಅವಕಾಶ ಇರುವುದಿಲ್ಲ ಎಂದು ಹೇಳಿದರು.
ಪ್ರಾಚಾರ್ಯ ಎಸ್.ಬಿ. ಪಾಟೀಲ್, ಅನಿಲ್ ಪಾಟೀಲ್, ಜಯಗೋಪಾಲ, ಚಂದ್ರಶೇಖರ, ದಿಲೀಪ, ವಿಜಯಕುಮಾರ್ ಮಾಲಿಪಾಟೀಲ್, ಡಾ. ಅರವಿಂದ ಪಾಟೀಲ್ ಇತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

