ಸುತ್ತೂರು ಮಠದ ಶಾಲೆಗೆ ಅರ್ಜಿ ಆಹ್ವಾನ
ರಾಯಚೂರು: ಸುತ್ತೂರು ಜೆಎಸ್ಎಸ್ ಶಾಲೆ ಹಾಗೂ ಉಚಿತ ವಿದ್ಯಾರ್ಥಿ ನಿಲಯ ಪ್ರವೇಶಕ್ಕೆ ಅರ್ಜಿ ಕರೆಯಲಾಗಿದೆ ಎಂದು ಶ್ರೀಮಠ ತಿಳಿಸಿದೆ.
1 ರಿಂದ 7ನೇ ತರಗತಿವರೆಗೆ ಕನ್ನಡ ಮಾಧ್ಯಮಕ್ಕೆ, 1 ರಿಂದ 5ನೇ ತರಗತಿ ವರೆಗೆ ಆಂಗ್ಲ ಮಾಧ್ಯಮಕ್ಕೆ ಹಾಗೂ 8ನೇ ತರಗತಿಗೆ ಕನ್ನಡ ಹಾಗೂ ಆಂಗ್ಲ ಮಾಧ್ಯಮಕ್ಕೆ ಮಾತ್ರ ಪ್ರವೇಶಾವಕಾಶವಿದೆ. ಗ್ರಾಮಾಂತರ ಪ್ರದೇಶದ ಆರ್ಥಿಕವಾಗಿ ಹಿಂದುಳಿದ ಹಾಗೂ ಬಡತನ ರೇಖೆಗಿಂತ ಕೆಳಗಿನ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ನೀಡಲಾಗುವುದು ಎಂದು ತಿಳಿಸಿದೆ. ಏ.10 ರಿಂದ ಅರ್ಜಿ ವಿತರಿಸಲಾಗುತ್ತಿದ್ದು, ಅರ್ಜಿಗಳನ್ನು ಶಾಲೆಯ ಕಚೇರಿಯಲ್ಲಿ ಅಥವಾ ಸಂಸ್ಥೆಯ ವೆಬ್ ಸೈಟ್ ವಿಳಾಸ- ಢಿಢಿಢಿ.ಞಡಡ್ಟಟಿಟ್ಝಟಿಜ.್ಟ್ಠ್ಜ ಅಥವಾ ಢಿಢಿಢಿ.ಞಡಡ್ಞಢ್ಞ.್ಟ್ಠ್ಜ. ಇಲ್ಲಿಂದಲೂ ಪಡೆಯಬಹುದೆಂದು ತಿಳಿಸಿದೆ. ಭರ್ತಿ ಮಾಡಿದ ಅರ್ಜಿಗಳನ್ನು ಮೇ 10ರೊಳಗೆ ಸಲ್ಲಿಸಬೇಕು. ಅಂಚೆ ಮುಖಾಂತರ ಅರ್ಜಿ ಪಡೆಯಲು ಇಚ್ಚಿಸುವವರು ವಿದ್ಯಾರ್ಥಿಯು ಪ್ರವೇಶ ಬಯಸುವ ತರಗತಿಯ ವಿವರ ಹಾಗೂ ಸ್ವವಿಳಾಸವುಳ್ಳ 5 ಪೋಸ್ಟಲ್ ಸ್ಟ್ಯಾಂಪ್ ಅಂಟಿಸಿದ ಲಕೋಟೆಯನ್ನು ಆಡಳಿತಾಧಿಕಾರಿಗಳು, ಜೆಎಸ್ಎಸ್ ಸಂಸ್ಥೆಗಳು, ಸುತ್ತೂರು-ಇಲ್ಲಿಗೆ ಕಳಿಸಿಕೊಡಲು ಕೋರಲಾಗಿದೆ.
ಅರ್ಜಿ ಪಡೆಯಲು ಅಥವಾ ಪ್ರವೇಶ ಪ್ರಕ್ರಿಯೆಯ ಯಾವುದೇ ಸಂದರ್ಭದಲ್ಲಿ ಪೋಷಕರು, ಪಾಲಕರು ಮಧ್ಯವರ್ತಿಗಳನ್ನು ಅವಲಂಬಿಸದೆ ನೇರವಾಗಿ ಸಂಬಂಧಿಸಿದ ಶಿಕ್ಷಣ ಸಂಸ್ಥೆಗೆ ಸಂಪರ್ಕಿಸಲು ಕೋರಿದ್ದು, ಮಾಹಿತಿಗೆ ದೂ.08221- 232323, 232653, 232559 ಕಚೇರಿ ವೇಳೆಯಲ್ಲಿ ಸಂಪರ್ಕಿಸಲು ಕೋರಲಾಗಿದೆ.
ಗುರು ಅನುಗ್ರಹ ಅಗತ್ಯ
ಸಿಂಧನೂರು: ಗುರುಗಳ ಅನುಗ್ರಹವನ್ನು ಅನುಭವಿಸಬೇಕು. ಗುರುವಿನ ಅನುಗ್ರಹವಾದವನಿಗೆ ಪಾರಮಾರ್ಥಿಕ ಪರಮಾನಂದವಾಗುತ್ತದೆ ಎಂದು ದಾಸ ಸಾಹಿತಿ, ಉಪನ್ಯಾಸಕ ಪವನಕುಮಾರ ಗುಂಡೂರು ಹೇಳಿದರು.
ನಗರದ ಶ್ರೀರಾಮಚಂದ್ರ ಕಲ್ಯಾಣ ಮಂಟಪದಲ್ಲಿ ನಡೆದ ಮಂತ್ರಾಲಯದ ಸುಯತೀಂದ್ರತೀರ್ಥರ ಗುರುವಂದನಾ ಕಾರ್ಯಕ್ರಮದಲ್ಲಿ ತಮ್ಮ ಗುರುಗಳ ಸ್ಮರಣೆಯನ್ನು ಭಾವುಕರಾಗಿ ಮಾಡಿದರು.
ಸುಯತೀಂದ್ರ ಗುರುಗಳಲ್ಲಿ ಸಮಯಪ್ರಜ್ಞೆ, ಸ್ಥಿತಪ್ರಜ್ಞತೆ ಇತ್ತು. ವಿಶೇಷವಾಗಿ ಪ್ರವಾಹದ, ಪ್ರವಾಹೋತ್ತರ ಸಂದರ್ಭದಲ್ಲಿ ಶ್ರೀಗಳು ಧೈರ್ಯದಿಂದ ನಡೆದುಕೊಂಡದ್ದು ಸಾಮಾನ್ಯವಲ್ಲ. ನವ ಮಂತ್ರಾಲಯ ನಿರ್ಮಾತೃ ಎಂದೇ ಅವರನ್ನು ಭಕ್ತ ಸಮೂಹ ಈಗಲೂ ಕರೆಯುತ್ತದೆ ಎಂದರು.
ಶ್ರೀಗಳ ಸ್ಥಿತಪ್ರಜ್ಞತೆ ಸ್ಮರಣೆ: ತಾವು ಮಂತ್ರಾಲಯದ ಗುರುಸಾರ್ವಭೌಮ ವಿದ್ಯಾಪೀಠದಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದಾಗ ಸುಯತೀಂದ್ರ ಗುರುಗಳ ಅಣತಿಯಂತೆ ಬೆಳಗಿನ ಜಾವ ವಿದ್ಯಾಪೀಠದ ವಿದ್ಯಾರ್ಥಿಗಳಿಗೆ ಹರಿಕಥಾಮೃತ ಸಾರವನ್ನು ಕಂಠಸ್ಥ್ಯವಾಗಿ ಕಲಿಸಿ ಮಠದಲ್ಲಿ ಹೇಳಬೇಕೆಂದು ಆಜ್ಞೆ ಮಾಡಿದ್ದರು. ಅದರನುಸಾರ ಪ್ರತಿನಿತ್ಯ ಅವರು ಹೇಳಿದ 5 ಸಂಧಿಗಳನ್ನು ವಿದ್ಯಾರ್ಥಿಗಳು ಹೇಳುತ್ತಿದ್ದರು. ಒಮ್ಮೆ ಎರಡು ಸಂಧಿಗಳನ್ನು ಬಿಟ್ಟು ವಿದ್ಯಾರ್ಥಿಗಳು ಹರಿಕಥಾಮೃತಸಾರ ಹೇಳಿದಾಗ ಕಿಟಕಿಯಲ್ಲಿ ಗಮನಿಸಿದ ಶ್ರೀಗಳು ಹೊರಗೆ ಬಂದು ಮರೆತ ಸಂಧಿಗಳನ್ನು ಪುನಃ ಹೇಳಿಸಿದರು ಎಂದು ತಮ್ಮ ಮತ್ತು ಅವರ ಸಂಬಂಧದ ಕುರಿತು ವಿವರಿಸಿದರು. ದಾಸ ಸಾಹಿತಿ ರಾಮಕೃಷ್ಣಾಚಾರ್ಯ ಗೋನವಾರ, ತಾಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ರಾಮರಾವ ಕುಲಕರ್ಣಿ, ನೂತನ ವಿದ್ಯಾ ಸಂಸ್ಥೆಯ ಉಪಾಧ್ಯಕ್ಷ ವೆಂಕಣ್ಣಾಚಾರ್ಯ ದೋಟಿಹಾಳ, ಉಪನ್ಯಾಸಕಿ ಡಾ. ಮಧುಮತಿ ದೇಶಪಾಂಡೆ, ಪ್ರಹ್ಲಾದ ಗುಡಿ ವಕೀಲರು ಸುಯತೀಂದ್ರ ಗುರುಗಳ ಕುರಿತು ಮಾತನಾಡಿದರು. ರಾಘವೇಂದ್ರಸ್ವಾಮಿ ಕಟ್ಟಡ ಸಮಿತಿ ಉಪಾಧ್ಯಕ್ಷ ಡಾ. ಆರ್.ವಿ. ಜೋಶಿ, ಮುಖಂಡರಾದ ಎಂ.ಕೆ. ಗೌರಕರ, ಮನೋಹರರಾವ ಕುಲಕರ್ಣಿ, ತಿರುಮಲರಾವ ಕುಲಕರ್ಣಿ, ಶೇಷಶಯನ, ಕೃಷ್ಣಾ ಕಾನಿಹಾಳ, ಪಾಂಡುರಂಗ ದೇಸಾಯಿ ಇತರರಿದ್ದರು.
ತಾಪ ತಣಿಸಿಕೊಳ್ಳಲು ಬಾವಿಗಳಿಗೆ ಮೊರೆ
ಮುದಗಲ್: ಬೇಸಿಗೆ ಆರಂಭವಾಗುತ್ತಿದ್ದಂತೆ ಎಲ್ಲಡೆ ದಿನೇ ದಿನೇ ಬಿಸಿಲಿನ ತಾಪಕ್ಕೆ ಮಕ್ಕಳು ಹಾಗೂ ವಯೋವೃದ್ಧರು ಬಸವಳಿದಿದ್ದಾರೆ.
ದಿನೇ ದಿನೇ ಹೆಚ್ಚುತ್ತಿರುವ ಬಿಸಿಲಿನ ಧಗೆಯಿಂದ ಪಾರಾಗಲು ಮಕ್ಕಳೆಲ್ಲಾ ಈಜುತ್ತಾ ಬಿಸಿಲಿನ ದಾಹವನ್ನು ನೀಗಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಮಕ್ಕಳ ಪರೀಕ್ಷೆಗಳು ಪೂರ್ಣ ಪ್ರಮಾಣದಲ್ಲಿ ಮುಗಿಸಿ ರಜೆಗೆ ಅಣಿಯಾಗಿದ್ದು ಬಿಸಿಲಿನ ತಾಪಕ್ಕೆ ರೋಸಿ ಹೋದ ಮಕ್ಕಳು ತರಬೇತಿ ಶಿಬಿರಗಳಿಗೆ ತೆರಳದೇ ನಿತ್ಯ ಈಜಾಡಲು ತಾ ಮುಂದು ನಾ ಮುಂದು ಎಂದು ಬಾವಿಗಳ ಮೋರೆ ಹೋಗಿದ್ದಾರೆ.
ಮೊದಲೇ ಪಟ್ಟಣದ ಸುತ್ತೆಲ್ಲಾ ಗಣಿ ಪ್ರದೇಶವಿರುವುದರಿಂದ ಬಿಸಿಲಿನ ಪ್ರಮಾಣ ಹೆಚ್ಚಿದ್ದು ತಾಪದಿಂದ ಪಾರಾಗಲು ಜೊತೆಗಾರರೊಡಗೂಡಿ ಈಜಲು ಬಂದಿರುವುದಾಗಿ ಮಕ್ಕಳು ಪತ್ರಿಕೆಗೆ ತಿಳಿಸಿದರು. ಆರಂಭದ ಬೇಸಿಗೆ ದಿನಗಳೇ ಹೀಗಿರಬೇಕಾದರೆ ಮುಂದೆ ಇನ್ನೂ ಹೇಗೋ ಎಂದು ನಾಗರೀಕರೆಲ್ಲಾ ಚಿಂತಾಕ್ರಾಂತರಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

