ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ
ಗುಲ್ಬರ್ಗ: ಕರದಳ್ಳಿ ಗ್ರಾಮದ ರತ್ನಮ್ಮ ಮುಕುಂದ ಗುಂಡಗುರ್ತಿ ಅವಳೊಂದಿಗೆ ಹತ್ತು ವರ್ಷದಿಂದ ಅನೈತಿಕ ಸಂಬಂಧ ಹೊಂದಿ, ಅವಳ ಮೇಲೆ ಸೀಮೆಎಣ್ಣೆ ಸುರಿದು ಕೊಲೆ ಮಾಡಿದ ಆರೋಪಿ ಸಾಬಣ್ಣ ಮರೆಣ್ಣ ಬಾನರಗೆ 3ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಿವಣ್ಣಗೌಡ ಜೀವಾವಧಿ ಶಿಕ್ಷೆ ಮತ್ತು 10 ಸಾವಿರ ದಂಡ ವಿಧಿಸಿ ಮಂಗಳವಾರ ಆದೇಶ ಹೊರಡಿಸಿದ್ದಾರೆ. ಆರೋಪಿಯು ಮೃತಳನ್ನು ಗಂಡನ ಸಂಬಂಧದಿಂದ ದೂರ ಮಾಡಿ ಕರದಳ್ಳಿ ಗ್ರಾಮದ ಬಸವರಾಜ ಶಂಕ್ರೆಪ್ಪ ಯರಗಲ್ ಅವರ ಮನೆಯಲ್ಲಿ 10 ವರ್ಷದಿಂದ ಬಾಡಿಗೆಗೆ ಇದ್ದು, ಅನೈತಿಕ ಸಂಬಂಧ ಹೊಂದಿದ್ದರು. ಆರೋಪಿ ಮೃತ ರತ್ನಮ್ಮ 2011ರ ಜುಲೈ 7ರಂದು ರತ್ನಮ್ಮಳ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಓಡಿ ಹೋಗಿದ್ದ. ಚಿಕಿತ್ಸೆ ಫಲಕಾರಿಯಾಗದೆ ರತ್ನಮ್ಮ ಜುಲೈ 18ರಂದು ಮೃತಪಟ್ಟಿದ್ದಳು. ಐಪಿಸಿ ಕಲಂ 302ರ ಅಡಿಯಲ್ಲಿ ಆರೋಪಿಗೆ ಜೀವಾವಧಿ ಶಿಕ್ಷೆ, 10 ಸಾವಿರ ದಂಡ ವಿಧಿಸಿದ್ದಾರೆ.
ಅತ್ಯಾಚಾರಿಗೆ 10 ವರ್ಷ ಜೈಲು ಶಿಕ್ಷೆ
ಗುಲ್ಬರ್ಗ: ಚಿತ್ತಾಪುರ ಪಟ್ಟಣದಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪಿ ರಾಜ್ ಅಹ್ಮದ್ 5ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸುಭಾಷ ಮಲ್ಲಪ್ಪ ಚೆನ್ನಪ್ಪನವರು 10 ವರ್ಷ ಜೈಲು ಶಿಕ್ಷೆ ಮತ್ತು 30 ಸಾವಿರ ದಂಡ ವಿಧಿಸಿದ್ದಾರೆ.
ಆರೋಪಿಯು 2012ರ ಸೆಪ್ಟೆಂಬರ್ 18ರಂದು ಪಟ್ಟಣದ ಸರ್ಕಾರಿ ಕಿರಿಯ ಉರ್ದು ಪ್ರಾಥಮಿಕ ಶಾಲೆಯ 6 ವರ್ಷದ ಬಾಲಕಿಯ ಮೇಲೆ ಶಾಲೆಯ ಶೌಚಾಲಯದಲ್ಲಿ ಅತ್ಯಾಚಾರವೆಸಗಿದ್ದ.
ಎಚ್ಕೆಸಿಸಿಐಗೆ ಆಯ್ಕೆ
ಗುಲ್ಬರ್ಗ: ಇಲ್ಲಿನ ಹೈದ್ರಾಬಾದ್ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷರಾಗಿ ರಾಧಾಕೃಷ್ಣ ರಘೋಜಿ, ಉಪಾಧ್ಯಕ್ಷರಾಗಿ ಸೋಮಶೇಖರ ತೆಂಗಳಿ, ಕಾರ್ಯದರ್ಶಿಯಾಗಿ ಅಮರನಾಥ ಪಾಟೀಲ್, ಜಂಟಿ ಕಾರ್ಯದರ್ಶಿಯಾಗಿ ಆನಂದ ದಂಡೋತಿ, ಖಜಾಂಚಿಯಾಗಿ ರಾಜಶೇಖರ ಪಾಟೀಲ್ ಆಯ್ಕೆಯಾಗಿದ್ದಾರೆ.. ಆಡಳಿತ ಮಂಡಳಿ ಸದಸ್ಯರಾಗಿ ಉಮಾಕಾಂತ ನಿಗ್ಗುಡಗಿ, ಮಂಜುನಾಥ ಜೇವರ್ಗಿ, ಶಿವಾನಂದ ಹೂಲಿ, ಉತ್ತಮ ಬಜಾಜ್, ಗುರುದೇವ ದೇಸಾಯಿ, ಶರಣಬಸಪ್ಪ ಪಪ್ಪಾ ಹಾಗೂ ಹರೀಶ ಬಾವಗಿ ಆಯ್ಕೆಯಾಗಿದ್ದಾರೆ.
ಆಡಳಿತ ಮಂಡಳಿ ಸದಸ್ಯರು: ಭೀಮಾಶಂಕರ ಪಾಟೀಲ್, ಶಿವಾನಂದ ಗುಗವಾಡ, ಸುನೀಲ ರಂಗದಾಳ, ರಾಜು ದೇವಣಿ, ಸಂತೋಷ, ಗೋಪಾಲ, ವಿಜಯಕುಮಾರ್, ರಾಮುಲು ರೆಡ್ಡಿ. ಕಾರ್ಪೋರೇಟ್ ಸೆಕ್ಟರ್ ಮ್ಯಾನೇಜಿಂಗ್ ಕಮೀಟಿ- ಚನ್ನಬಸವಯ್ಯ ನಾದಿಕೋಲ್. ಮ್ಯಾನೇಜಿಂಗ್ ಕಮೀಟಿ ಗ್ರಾಮೀಣ- ಅನಿಲಕುಮಾರ್ ಮರಗೋಳ, ಶಿವಾನಂದ ಪವಾರ, ರಾಮಚಂದ್ರಾ ಕೋಸಗಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

