ರಾಯಚೂರು

'ಅಂಗದ ಮೇಲೆ ಲಿಂಗ ಧರಿಸಿದ ಲಿಂಗಾಯತರು'

Published On :

ಮುದಗಲ್: ಅಂಗದ ಮೇಲೆ ಲಿಂಗವನ್ನು ಧರಿಸಿದವರೆಲ್ಲರೂ ಲಿಂಗಾಯತರು. ಬಸವ ತತ್ವ ನಿಷ್ಠರು ಎಂದು ಮಹಾಂತ ಸ್ವಾಮೀಜಿ ಸಾಲಿಮಠ ಹೇಳಿದರು.
ಪಟ್ಟಣದಲ್ಲಿ ಸತತ ಒಂದು ತಿಂಗಳ ಪರ್ಯಂತರ ನಡೆದ ಬಸವ ಧರ್ಮ ಪ್ರವಚನ ಕಾರ್ಯಕ್ರಮದ ಮುಕ್ತಾಯ ಸಮಾರಂಭದಲ್ಲಿ ಮಾತನಾಡಿ, ಲಿಂಗ ದೀಕ್ಷೆಯಿಂದ ಮನುಷ್ಯನ ಅರಿವು, ಏಕಾಗ್ರತೆ ಹೆಚ್ಚುತ್ತದೆ. ಲಿಂಗ ಪೂಜೆ ಮಾಡಿಕೊಳ್ಳುವುದರಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ದೊರೆಯುತ್ತದೆ ಎಂದರು.
ಶರಣ ಈಶ್ವರ ಮಂಟೂರವರ ಒಂದು ತಿಂಗಳ ಪ್ರವಚನದಿಂದ ಪಟ್ಟಣದ ಜನರಿಗೆ ಶಾಂತಿ, ನೆಮ್ಮದಿ ಸಿಕ್ಕಂತಾಗಿದೆ. ಬಸವಣ್ಣವರ ವಚನಗಳ ಸಾರವನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಮನುಷ್ಯ ಜೀವನ ಸಾರ್ಥಕವಾಗುತ್ತದೆ. ಪ್ರತಿ ತಿಂಗಳು ಶಿವಾನುಭವ ಕಾರ್ಯಕ್ರಮವನ್ನು ನಡೆಸುಬೇಕು ಎಂದು ಸಲಹೆ ನೀಡಿದರು.
ಶಿರೂರು ಬಸವಲಿಂಗ ಸ್ವಾಮೀಜಿ ಮಾತನಾಡಿ, ಯುವಕರು ದುಶ್ಚಟಗಳಿಂದ ದೂರ ಉಳಿಯಬೇಕು. ಲಿಂಗ ಪೂಜಾ ನಿಷ್ಠರಾಗಿ ಕಾಯಕವೇ ಕೈಲಾಸ ಎನ್ನುವ ಬಸವಣ್ಣವರ ವಚನದಂತೆ ನಡೆಯಬೇಕು ಎಂದರು. ಕಾರ್ಯಕ್ರಮದ ಸಾನ್ನಿಧ್ಯವನ್ನು ಇಳಕಲ್ ಡಾ. ವಿಜಯ ಮಹಾಂತಸ್ವಾಮೀಜಿ ವಹಿಸಿದ್ದರು. ಮಹರಿಮಹಾಂತ ಸ್ವಾಮೀಜಿ, ಗುಳೇದಗುಡ್ಡದ ಗುರಬಸವ ದೇವರು, ಖ್ಯಾತ ಪ್ರವಚನಕಾರ ಡಾ. ಈಶ್ವರ ಮಂಟೂರು ಉಪಸ್ಥಿತರಿದ್ದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.