ತರಬೇತಿ ಸಿಬ್ಬಂದಿ ಮೇಲೆ ತಹಸೀಲ್ದಾರ್ ಹಲ್ಲೆ: ಮುಷ್ಕರ
ರಾಯಚೂರು: ನಗರದಲ್ಲಿ ಶುಕ್ರವಾರ ನಡೆಯುತ್ತಿದ್ದ ಚುನಾವಣೆ ಸಿಬ್ಬಂದಿಯ ತರಬೇತಿ ಕಾರ್ಯಕ್ರಮದ ವೇಳೆ ರಾಯಚೂರು ತಹಸೀಲ್ದಾರರು ಗ್ರಾಮ ಸಹಾಯಕನ ಮೇಲೆ ಹಲ್ಲೆ ಮಾಡಿದ್ದರಿಂದ ಆಕ್ರೋಶಗೊಂಡ ಸಿಬ್ಬಂದಿ ದಿಢೀರ್ ಮುಷ್ಕರ ನಡೆಸಿದ ಪ್ರಸಂಗ ನಡೆಯಿತು.
ನಗರದ ಬಾಲಕಿಯರ ಸರ್ಕಾರಿ ಕಾಲೇಜಿನಲ್ಲಿ ಆಯೋಜಿಸಿದ್ದ ಚುನಾವಣೆ ತರಬೇತಿಯಲ್ಲಿ ಪಾಲ್ಗೊಂಡಿದ್ದ ಗ್ರಾಮಸಹಾಯಕ ನರಸಪ್ಪ ಎಂಬುವವರ ಮೇಲೆ ತಹಸೀಲ್ದಾರ್ ಬಾಲರಾಜ್ ಅವರು ಹಲ್ಲೆ ಮಾಡಿದ್ದೇ ಘಟನೆಗೆ ಕಾರಣ.
ಗುಂಜಳ್ಳಿಯಿಂದ ತರಬೇತಿಗೆ ಆಗಮಿಸಿದ್ದ ಗ್ರಾಮಸಹಾಯಕ ನರಸಪ್ಪ ಎಂಬುವವರು ಚುನಾವಣೆ ತರಬೇತಿ ವೇಳೆ ಅತಿಯಾದ ದಾಹದಿಂದ ಆತುರದಲ್ಲಿ ಕೊಂಡು ತರಿಸಲಾಗಿದ್ದ ಬಾಟಲಿಯಲ್ಲಿನ ನೀರು ಸೇವಿಸಿದ್ದರಿಂದ ಕೋಪಗೊಂಡ ತಹಸೀಲ್ದಾರ್ ಬಾಲರಾಜ್ ಆತನ ಮೇಲೆ ಹಲ್ಲೆ ಮಾಡಿದರು. ಇದರಿಂದ ಚುನಾವಣೆ ತರಬೇತಿಯಲ್ಲಿ ಗೊಂದಲದ ವಾತಾವರಣ ಉಂಟಾಯಿತು.
ಘಟನೆಯಿಂದ ತೀವ್ರ ಆಕ್ರೋಶಗೊಂಡ ಕೆಳಹಂತದ ಸಿಬ್ಬಂದಿ, ಕೂಡಲೇ ತರಬೇತಿಯಿಂದ ಹೊರನಡೆದು ಮುಷ್ಕರಕ್ಕಿಳಿದರು. ಸಹಾಯಕ ಆಯುಕ್ತ ಎಂ.ಪಿ. ಮಾರುತಿ ಕೂಡಲೇ ಮುಷ್ಕರನಿರತರೊಂದಿಗೆ ಸಂಧಾನ ನಡೆಸಿ ಪರಿಸ್ಥಿತಿ ತಿಳಿಗೊಳಿಸಿದರು. ನಂತರ ತರಬೇತಿ ಮುದುಂವರಿಯಿತು.
ಖಂಡನೆ: ಗ್ರಾಮ ಸಹಾಯಕ ನರಸಪ್ಪ ಎಂಬುವವರ ಮೇಲೆ ತಹಸೀಲ್ದಾರ್ ಬಾಲರಾಜ್ ಹಲ್ಲೆ ಮಾಡಿದ್ದನ್ನು ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ ತೀವ್ರವಾಗಿ ಖಂಡಿಸಿದೆ.
ಈ ಕುರಿತು ಪ್ರಕಟಣೆ ನೀಡಿರುವ ಒಕ್ಕೂಟದ ಉಪಾಧ್ಯಕ್ಷ ಕೆ. ನಾರಾಯಣ, ಕೆಳ ಹಂತದ ಸಿಬ್ಬಂದಿಗೆ ತಿಳಿಹೇಳುವ ಮೂಲಕ ಕೆಲಸ ಪಡೆಯುವ ಕಾರ್ಯ ಆಗಬೇಕೇ ವಿನಾ ಸಿಬ್ಬಂದಿ ಮೇಲೆ ಹಲ್ಲೆ ಮಾಡುವುದು ಸರಿಯಲ್ಲ. ಮುಂದಿನ ದಿನಗಳಲ್ಲಿ ಇಂಥ ಘಟನೆಗಳು ಪುನಾ ನಡೆಯದಂತೆ ಎಚ್ಚರಿಕೆ ವಹಿಸಲು ಮನವಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

