ಕಾಣದ ರಸ್ತೆ, ಕತ್ತಲಲ್ಲಿ ಬದುಕು; ಆಕ್ರೋಶ
ಸಿಂಧನೂರು: ನಗರದ ಹೊರವಲಯದಲ್ಲಿರುವ 14ನೇ ವಾರ್ಡ್ನ ಬಸವನಗರ ಕೂಲಿಕಾರರು, ಕಟ್ಟಡ ಕಾರ್ಮಿಕರು, ಹಮಾಲರು, ಸಣ್ಣಪುಟ್ಟ ವ್ಯಾಪಾರಸ್ಥರು ವಾಸಿಸುತ್ತಿದ್ದು ಸೂಕ್ತ ರಸ್ತೆ, ವಿದ್ಯುತ್ ಇಲ್ಲದೇ ಕತ್ತಲಲ್ಲಿ ಜೀವನ ಸಾಗಿಸುತ್ತಿದ್ದಾರೆ. ಅಲ್ಲಲ್ಲಿ ರಸ್ತೆಗಳ ಮಧ್ಯೆ ಜಾಲಿಗಿಡ ಬೆಳೆದಿದ್ದು, ತಗ್ಗು ದಿನ್ನಿ ಹಾಗೂ ನೀರು ನಿಂತು ಸಂಚಾರಕ್ಕೆ ತೊಂದರೆಯಾಗಿದೆ.
ನಗರಸಭೆ ಸದಸ್ಯೆ ಹುಸೇನ್ಬಿ ಮೋಷನ್ ಅವರಿಗೆ ಹೇಳಿದರೂ ಪ್ರಯೋಜನವಾಗಿಲ್ಲ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರಾದ್ಯಂತ 40 ಲಕ್ಷ ವೆಚ್ಚದಲ್ಲಿ ಮರಂ ಹಾಕಿಸಿದ ಶಾಸಕ ಬಾದರ್ಲಿ ಹಂಪನಗೌಡರು ತಮ್ಮ ಬಡಾವಣೆಗೆ ಮರಂ ಹಾಕಿಸಲಿಲ್ಲ. ಬಿಎಸ್ಆರ್ ಕಾಂಗ್ರೆಸ್, ಕಾಂಗ್ರೆಸ್, ಬಿಜೆಪಿಯನ್ನು ಬಿಟ್ಟು ನಗರಸಭೆ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಬೆಂಬಲ ನೀಡಿದ ಕಾರಣಕ್ಕೆ ತಮಗೆ ಈ ಪರಿಸ್ಥಿತಿ ಬಂದಿದೆ ಎಂದು ದಸ್ತಗೀರ್ಸಾಬ್, ಅಲ್ಲಾಭಕ್ಷ್ ಮತ್ತಿತರರು ಅಳಲು ತೋಡಿಕೊಂಡರು.
ಈ ಹಿಂದೆ ಸುರೇಶಗೌಡ, ಚನ್ನಯಸ್ವಾಮಿ, ಭಾಷಾ ದಸ್ತಗೀರ್ಸಾಬ್, ಗಿರೀಶ್, ಮಲ್ಲನಗೌಡ, ಮಹಾಬಳೇಶ್ವರ, ಶಿವಬಸನಗೌಡ, ಬದ್ರಿ ಕುಂಬಾರ ಮತ್ತಿತರರು ನಗರಸಭೆ ಅಧ್ಯಕ್ಷರಾದ ಜಾಫರ್ ಜಾಗೀರ್ದಾರ್ ಅವರಿಗೆ ಮನವಿ ಸಲ್ಲಿಸಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ಆಪಾದಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

