ರಾಯಚೂರು

'ಮನೆ, ಮನಕ್ಕೆ ವಚನ ಸಾಹಿತ್ಯ ತಲುಪಲಿ'

Published On :

ಆಳಂದ: ಬಸವಾದಿ ಶಿವಶರಣರು 12ನೇ ಶತಮಾನದಲ್ಲಿ ಆಡು ಭಾಷೆಗಳಲ್ಲಿಯೇ ವಚನಗಳನ್ನು ಬರೆದು ವಿಶ್ವಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಹೀಗಾಗಿ ಮನೆ ಮನಗಳಿಗೂ ವಚನ ಸಾಹಿತ್ಯ ಮುಟ್ಟುವಂತಾಗಬೇಕು ಎಂದು ಮಾದನಹಿಪ್ಪರ್ಗಾ ಸರ್ಕಾರಿ ಪಪೂ ಕಾಲೇಜಿನ ಉಪನ್ಯಾಸಕ ರೇವಣಸಿದ್ದಪ್ಪ ನಾಗೋಜಿ ಹೇಳಿದರು.
ತಾಲೂಕಿನ ಸರಸಂಬಾ ಗ್ರಾಮದ ದಯಾಲಿಂಗೇಶ್ವರ ಆಶ್ರಮದಲ್ಲಿ ತಾಲೂಕು ವಚನ ಸಾಹಿತ್ಯ ಅಕಾಡೆಮಿ ಆಯೋಜಿಸಿದ ವಚನ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸರಳತೆ ಇರಲಿ: ಲಿಂಗಪೂಜಾ ನಿಷ್ಠರಾಗಿ ಬದುಕು ನಡೆಸುವಂತಾಗಬೇಕು. ಕಾಲಮಾನಗಳ ತಕ್ಕಂತೆ ಆದರ್ಶ ವಿಚಾರಗಳು ಬದಲಾದರೂ, ಅವುಗಳ ಮೂಲ ಬದಲಾಗುವುದಿಲ್ಲ. ಜೀವನದಲ್ಲಿ ಆಡಂಬರ ಬಿಟ್ಟು, ಸರಳತೆ ಕಡೆಗೆ ಪ್ರತಿಯೊಬ್ಬರೂ ಸಾಗುವಂತಾಗಬೇಕು. ಆಗ ಮಾತ್ರ ಆದರ್ಶ ಬದುಕು ನಮ್ಮದಾಗಲು ಸಾಧ್ಯ ಎಂದರು.
ಅಪ್ಪಾ ಸಾಹೇಬ ತೀರ್ಥೆ ಮುಖ್ಯ ಅತಿಥಿಗಳಾಗಿ ಮಾತನಾಡಿ, ವಚನ ಸಾಹಿತ್ಯಕ್ಕೆ ಶರಣ, ಶರಣಿಯರು ತಮ್ಮದೇ ಆದ ಸಂದೇಶವನ್ನು ಸಾರಿದ್ದಾರೆ ಎಂದರು.
ಪ್ರಗತಿಪರ ರೈತ ಕೆ.ಆರ್. ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಚಿನ್ಮಯಗಿರಿಯ ಮಹಾಂತೇಶ್ವರ ಪಪೂ ಕಾಲೇಜಿನ ಪ್ರಾಚಾರ್ಯ ಲಕ್ಷ್ಮೀಕಾಂತ ಹಿರೇಗೌಡ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಶ್ರೀಶೈಲ ಮಾಡ್ಯಾಳೆ, ಕಸಾಪ ಮಾಜಿ ಅಧ್ಯಕ್ಷ ವಿಶ್ವನಾಥ ಭಕರೆ, ಗ್ರಾಪಂ ಸದಸ್ಯ ಮಹಾಂತಪ್ಪ ಆಲೂರೆ, ದತ್ತಾತ್ರೇಯ ಬಿರಾದಾರ, ಕೋಶಾಧ್ಯಕ್ಷ ಡಿ.ಎಂ.ಪಾಟೀಲ, ಪ್ರಮುಖರಾದ ಮಾಣಿಕ ಘೋಡಕೆ, ಗುಂಡಪ್ಪ ಗುಬ್ಯಾಡೆ, ವಿವೇಕಾನಂದ ಕೇಶೆಗಾಂವ, ಸೋಮನಾಥ ನಿಂಬರ್ಗಿ, ರಮೇಶ ಖಾನಾಪೂರೆ, ರೇವಣಸಿದ್ದಯ್ಯ ಪಾಲ್ಗೊಂಡಿದರು. ಕಲಾವಿದ ಶಿವಶರಣಪ್ಪ ಪೂಜಾರಿ, ಬದ್ರಿನಾಥ ಮುಡಬಿ, ಬಸವರಾಜ ಆಳಂದ ಇವರಿಂದ ವಚನ ಗಾಯನ ನಡೆಯಿತು. ಸತೀಶ ಕೋಗನೂರೆ ಸ್ವಾಗತಿಸಿ, ಶೈಲಜಾ ಜವಳಿ ನಿರೂಪಿಸಿದರು. ಮಲ್ಲಿನಾಥ ಕುಂಬಾರ ವಂದಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.