'ಸನಾತನ ಜೀವನ ಶೈಲಿಯಿಂದ ರೋಗ ಮುಕ್ತಿ'
ಗುಲ್ಬರ್ಗ: ಜೀವನ ಶೈಲಿ ಆಧಾರಿತ ರೋಗಗಳಿಂದ ಮುಕ್ತಿ ಪಡೆಯಲು ಸನಾತನ ಜೀವನ ಶೈಲಿಯನ್ನು ಅನುಸರಿಸುವಂತೆ ಡಾ. ಜೈಕಿಸಾನ್ ಠಾಕೂರ ಕರೆ ನೀಡಿದರು.
ಇಂದು ಭಾರತ ಸರ್ಕಾರದ ಕ್ಷೇತ್ರ ಪ್ರಚಾರ ನಿರ್ದೇಶನಾಲಯ ಗುಲ್ಬರ್ಗ, ಕಿರಣ ರೂರಲ್ ರಿಕನ್ಸ್ ಟ್ರೆಕ್ಸನ್ ಸೋಸೈಟಿ ಗುಲ್ಬರ್ಗ ಹಾಗೂ ಪ್ರಿಯದರ್ಶಿನಿ ಸೇವಾ ಸಂಸ್ಥೆ ಚೌಡಾಪುರ, ಇವರಗಳ ಸಯುಕ್ತ ಆಶ್ರಯದಲ್ಲಿ ಮಹಾಗಾಂವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಶ್ವ ಆರೋಗ್ಯ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ವಿಶೇಷ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ವಿಶ್ವ ಆರೋಗ್ಯ ಸಂಸ್ಥೆಯು ಪ್ರತಿವರ್ಷ ಒಂದೊಂದು ಹೊಸ ಘೋಷಣೆಯನ್ನು ಪ್ರಕಟಿಸುತ್ತಾ ಬಂದಿದೆ. 2014 ರ ಘೋಷಣೆ ಎಲ್ಲರಿಗೂ ಸಮಾನ ಆರೋಗ್ಯ ಎಂಬ ಘೋಷಣೆಯೊಂದಿಗೆ ಕಾರ್ಯಕ್ರಮಗಳು ಪ್ರಾರಂಭಿಸಿದೆ. ಬದಲಾಗುತ್ತಿರುವ ಪ್ರತಿಕುಲ ವಾತಾವರಣದಲ್ಲಿ ಮುಂಜಾಗೃತಿಯನ್ನು ವಹಿಸಿದರೆ ಮಾತ್ರ ಕಾಲರ, ಮಲೇರಿಯಾ, ರಕ್ತದ ಒತ್ತಡ, ಸಿಹಿ ಮೂತ್ರ, ಮುಂತಾದ ಸಾಂಕ್ರಾಮಿಕ ರೋಗಗಳಿಂದ ಮುಕ್ತಿ ಪಡೆಯಬಹುದು ಎಂದು ಅಭಿಪ್ರಾಯ ಪಟ್ಟರು.
ಸೊಸೈಟಿಯ ಕಾರ್ಯದರ್ಶಿ ಎಂ.ಎಂ. ಶಿರಹಟ್ಟಿ ಜಾಗೃತಿ ಕಾರ್ಯಕ್ರಮದ ಉಪನ್ಯಾಸಕರಾಗಿ ಭಾಗವಹಿಸಿ ಮಾತನಾಡಿ, ಹೆಚ್ಚುತ್ತಿರುವ ತಾಪಮಾನದಿಂದ ಆರೋಗ್ಯವನ್ನು ಸಂರಕ್ಷಿಸಲು ಅನುಸರಿಸಬೇಕಾದ ಮುಂಜಾಗೃತ ಕ್ರಮಗಳ ಬಗ್ಗೆ ವಿವರಿಸಿದರು. ಸನಾತನ ಆಹಾರ ಪದ್ಧತಿ ಎಂದರೆ ಪ್ರತಿನಿತ್ಯ ಆಹಾರದಲ್ಲಿ ರಾಗಿ, ಜೋಳ, ಗೋದಿ, ಸಜ್ಜೆ, ನವಣೆ ಮುಂತಾದ ಧಾನ್ಯಗಳನ್ನು ಬಳಸುವಂತೆ ಸಲಹೆ ನೀಡಿದರು. ಸಮತೋಲನ ಆಹಾರ ಸೇವನೆಯಿಂದ ಹಲವಾರು ರೋಗಗಳನ್ನು ನಿಯಂತ್ರಿಸಬಹುದು ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಜೈಕಿಸಾನ್ ಠಾಕೂರ ವಹಿಸಿದ್ದರು. ಕ್ಷೇತ್ರ ಪ್ರಚಾರ ಸಹಾಯಕ ಎನ್.ರಾಮಕೃಷ್ಣ ಪ್ರಾಸ್ತಾವಿಕ ಮಾತನಾಡಿದರು. ಪ್ರಿಯದರ್ಶಿನಿ ಸೇವಾ ಸಂಸ್ಥೆಯ ಕಾರ್ಯದರ್ಶಿ ಶಿವಶರಣ ತಳವಾರ ವಂದನಾರ್ಪಣೆ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

