ಬಾಬಾ ರಾಮದೇವ್ ಹೇಳಿಕೆಗೆ ಖಂಡನೆ
ರಾಯಚೂರು: ದಲಿತರ ಸ್ವಾಭಿಮಾನಕ್ಕೆ ಚ್ಯುತಿ ತಂದಿರುವ ಬಾಬಾ ರಾಮದೇವ ಅವರ ಮೇಲೆ ರಾಜದ್ರೋಹದ ಪ್ರಕರಣ ದಾಖಲಿಸಲು ಮಾದಿಗ ಮೀಸಲಾತಿ ಹೋರಾಟ ಸಮಿತಿ ಆಗ್ರಹಿಸಿದ್ದು, ನಗರದಲ್ಲಿ ಏ. 28ರಂದು ಸಂಘಟನೆಯಿಂದಲೂ ಪ್ರತ್ಯೇಕ ಪ್ರಕರಣ ದಾಖಲಿಸಲಾಗುತ್ತದೆ ಎಂದು ತಿಳಿಸಿದೆ.
ಈ ಕುರಿತು ಪ್ರಕಟಣೆ ನೀಡಿರುವ ಸಂಘಟನೆಯ ಪ್ರಮುಖರಾದ ಅಂಬಣ್ಣ ಅರೋಲಿ ಮತ್ತಿತರರು, ಹಿಂದುತ್ವದ ಉನ್ಮಾದದ ಮೂಲಕ ಫ್ಯಾಸಿಸ್ಟ್ ಪರಿಪಾಲನೆಯ ಪರಂಪರೆಯಲ್ಲಿ ಆರ್ ಎಸ್ ಎಸ್ ಹಾಗೂ ವಿಶ್ವಹಿಂದೂ ಪರಿಷತ್ ನಂಥ ಸಂಘಟನೆಗಳ ಭಾಗವಾಗಿರುವ ಬಾಬಾ ರಾಮದೇವ ಅವರು ಲಕ್ನೋದಲ್ಲಿ ದಲಿತರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದನ್ನು ಖಂಡಿಸಿದ್ದಾರೆ.
ಓಲೈಕೆ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಹನಿಮೂನ್ಗೆ ದಲಿತರ ಕೇರಿಗೆ ತೆರಳುತ್ತಾರೆಂದು ಹೇಳುವ ಮೂಲಕ ಹಿಂದೂಗಳ ಓಲೈಕೆ ಕಾರ್ಯಕ್ಕೆ ಮುಂದಾಗಿದ್ದಾರೆ. ಅವರ ವರ್ತನೆಯನ್ನು ತೀವ್ರ ಖಂಡಿಸಿರುವ ಅವರು, ಬಾಬಾ ರಾಮದೇವ್ ದಲಿತರ ಕೇರಿಗಳನ್ನು ಐಷಾರಾಮಿ ವ್ಯಕ್ತಿಗಳ ತಾಣಗಳೆಂದು ಬಿಂಬಿಸುವ ಮೂಲಕ ತಮ್ಮ ವಿಕೃತ ಆಲೋಚನೆಯನ್ನು ಹೊರಹಾಕಿ ದ್ದಾರೆಂದು ಟೀಕಿಸಿದ್ದಾರೆ.
ಆಧ್ಯಾತ್ಮ, ಯೋಗ, ಆರೋಗ್ಯದ ನೆಪದಲ್ಲಿ ಶೋಷಿತ ಸಮುದಾಯವನ್ನು ನಿರಂತರವಾಗಿ ದಾಸ್ಯಕ್ಕೆ ತಳ್ಳಿದಂಥ ಮನುವಾದದ ಮುಂದುವರಿದ ಭಾಗವಾಗಿರುವ ಬಾಬಾ ರಾಮದೇವ ವಿರುದ್ಧ ರಾಜದ್ರೋಹ ಪ್ರಕರಣ ದಾಖಲಿಸಬೇಕು. ಸರ್ಕಾರ ಕೂಡಲೇ ಈ ನಿಟ್ಟಿನಲ್ಲಿ ಕ್ರಮಕ್ಕೆ ಮುಂದಾಗಬೇಕೆಂದು ಆಗ್ರಹಿಸಿದ್ದಾರೆ.
ಬಾಬಾ ರಾಮದೇವ್ ನೀಡಿದ ವಿವಾದಾತ್ಮಕ ಹೇಳಿಕೆ ಖಂಡಿಸಿ ಹಾಗೂ ಅವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಏ.28ರಂದು ನಗರದಲ್ಲಿ ಸಂಘಟನೆಯು ಪ್ರತ್ಯೇಕ ಪ್ರಕರಣ ದಾಖಲಿಸಲಿದೆ. ಈ ನಿಟ್ಟಿನಲ್ಲಿ ಕಾನೂನು ಹೋರಾಟಕ್ಕೆ ಸಜ್ಜಾಗಿದ್ದು, ವಿವಿಧ ರಾಜಕೀಯ ಪಕ್ಷಗಳಲ್ಲಿರುವ ದಲಿತ ಮುಖಂಡರು ಮತಾಂಧರ ವಿರುದ್ಧದ ಹೋರಾಟದಲ್ಲಿ ಪಕ್ಷಬೇಧ ಮರೆತು ಪಾಲ್ಗೊಂಡು ಬೆಂಬಲಿಸುವಂತೆ ಕರೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

