ರಾಯಚೂರು

ಪೋರ್ಜರಿ ಸಹಿ ಮಾಡಿ ಜಮೀನು ಮಾರಿದ ಪತಿ

Published On :

ಸಿಂಧನೂರು: ನಗರದ ಪಿಡಬ್ಲ್ಯೂಡಿ ಕ್ಯಾಂಪಿನ ನಿವಾಸಿ ಲಕ್ಷ್ಮೀದೇವಿ ಎಂಬವರು ತನ್ನ ಪತಿ ಅಶೋಕ ಅವರು 7 ಎಕರೆ ಜಮೀನನ್ನು ತನ್ನ ಒಪ್ಪಿಗೆಯಿಲ್ಲದೆ ಖೊಟ್ಟಿ ಸಹಿ ಮಾಡಿ ಮಾರಾಟ ಮಾಡಿ ವಂಚಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಕುರಿತು ಮಂಗಳವಾರ ಪತ್ರಿಕಾ ಹೇಳಿಕೆ ನೀಡಿದ ಅವರು, ಮಾನವಿ ತಾಲೂಕಿನ ಬಸಾಪುರ ಗ್ರಾಮದ ಸರ್ವೆ ನಂ.53/1/ಇ ಅಡಿಯ 7 ಎಕರೆ ಜಮೀನು ತನ್ನ ಗಂಡ ಅಶೋಕನ ಹೆಸರಿನಲ್ಲಿದ್ದು ಜೀವನ ನಡೆಸಲು ಇದೇ ಆಧಾರವಾಗಿದೆ. ಆದರೆ ತಾನು ಹೆರಿಗೆಗೆ ಸಿಂಧನೂರಿನ ತವರು ಮನೆಗೆ ಬಂದ ವೇಳೆ ತನ್ನ ಸಹಿಯನ್ನು ಬೇರೊಬ್ಬರಿಂದ ಮಾಡಿಸಿ ಹೊಲವನ್ನು ತೋರಣದಿನ್ನಿ ಗ್ರಾಮದ ಯಲ್ಲಪ್ಪ ತಿಮ್ಮಯ್ಯ ಎನ್ನುವವರಿಗೆ 1.95 ಲಕ್ಷಕ್ಕೆ ಮಾರಾಟ ಮಾಡಿದ್ದಾನೆ ಎಂದು ಲಕ್ಷ್ಮೀದೇವಿ ಆರೋಪಿಸಿದ್ದಾರೆ.
ಇದ್ದ ಅಲ್ಪ ಭೂಮಿಯಲ್ಲಿ ಬೆಳೆ ಬೆಳೆದು ಇಬ್ಬರು ಮಕ್ಕಳೊಂದಿಗೆ ಹೇಗೋ ಜೀವನ ಸಾಗಿಸುತ್ತಿದ್ದೆವು. ಆದರೆ ನನ್ನ ಪತಿ ಅಶೋಕ ಕುಡಿತಕ್ಕೆ ಬಲಿಯಾಗಿ ಸಾಲ ಮಾಡಿಕೊಂಡಿದ್ದಾನೆ. ಇದನ್ನು ತೀರಿಸುವ ಸಲುವಾಗಿ ನನ್ನ ಸಮ್ಮತಿ ಇಲ್ಲದಿದ್ದರೂ ನಕಲಿ ಸಹಿ ಮಾಡಿಸಿ ಮಾರಾಟ ಮಾಡಿ ನನ್ನ ಹಾಗೂ ನನ್ನ ಮಕ್ಕಳನ್ನು ಬೀದಿಗೆ ತಂದಿದ್ದಾನೆ ಎಂದು ತನ್ನ ಅಳಲು ತೋಡಿಕೊಂಡಿದ್ದಾರೆ. ಈ ಕುರಿತು ಲಕ್ಷ್ಮೀದೇವಿ ಅವರು ಮಾನವಿ ತಹಸೀಲ್ದಾರರಿಗೆ ತಕರಾರು ಅರ್ಜಿ ಸಲ್ಲಿಸಿ ಭೂಮಿಯನ್ನು ಖರೀದಿದಾರರ ಹೆಸರಿಗೆ ನೋಂದಣಿ ಮಾಡಿ ವರ್ಗಾಯಿಸದೆ ಭೂಮಿಯನ್ನು ತಮಗೆ ವಾಪಸ್ ಕೊಡಿಸುವಂತೆ ಕೋರಿದ್ದಾರೆ.
ರಾಮದೇವ ಹೇಳಿಕೆಗೆ ಬಿಎಸ್ಪಿ ಆಕ್ರೋಶ
ಸಿಂಧನೂರು: ಎಐಸಿಸಿ ಉಪಾಧ್ಯಕ್ಷ ರಾಹುಲ್‌ಗಾಂಧಿ ಅವರು ದಲಿತರ ಕೇರಿಗಳಿಗೆ ಹನಿಮೂನ್‌ಗಾಗಿ ಹೋಗುತ್ತಾರೆ ಎಂದು ಯೋಗಗುರು ಬಾಬಾ ರಾಮದೇವ ನೀಡಿರುವ ಅವಹೇಳನಕಾರಿ ಹೇಳಿಕೆ ಖಂಡಿಸಿ ಬಹುಜನ ಸಮಾಜ ಪಾರ್ಟಿಯ ಮುಖಂಡರು ನಗರದ ಗಾಂಧೀಜಿ ವೃತ್ತದಲ್ಲಿ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಹಿಂದುತ್ವವಾದಿಗಳ ಗುಲಾಮನಾಗಿರುವ ಬಾಬಾ ರಾಮದೇವ ಹತಾಶೆಗೊಂಡಿರುವ ಬಿಜೆಪಿಯಿಂದ ಪ್ರೇರಿತರಾಗಿ ಈ ಹೇಳಿಕೆ ನೀಡಿ ದಲಿತ ಸಮುದಾಯಕ್ಕೆ ಅಪಮಾನ ಮಾಡಿರುವುದು ಖಂಡನಾರ್ಹ. ಬಿಜೆಪಿಯ ಏಜೆಂಟ್‌ನಂತೆ ವರ್ತಿಸುತ್ತಿರುವ ಬಾಬಾ ರಾಮದೇವ ನಡೆಸುತ್ತಿರುವ ಅಕ್ರಮ ದಂಧೆಗಳಿಗೆ ಕಡಿವಾಣ ಹಾಕಬೇಕು, ಆತ ನಡೆಸುತ್ತಿರುವ ಯೋಗಾಶ್ರವುಗಳಿಗೆ ಬೀಗ ಜಡಿಯಬೇಕೆಂದು ತಹಸೀಲ್ದಾರರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ಒತ್ತಾಯಿಸಿದರು. ಹನುಮಂತಪ್ಪ ಕಲಶೆಟ್ಟಿ, ಭೀಮಪ್ಪ ಕವಿತಾಳ, ವೆಂಕಟೇಶ ಗಿರಿಜಾಲಿ, ಎಚ್. ಸೂಲಂಗಿ, ಚಿಟ್ಟಿಬಾಬು, ನಾಗರಾಜ, ಭೀಮೇಶ, ಈರಣ್ಣ ಸುಲ್ತಾನಪುರ, ಹುಸೇನಪ್ಪ ಮುದ್ದಾಪುರ, ನಿರುಪಾದಿ ನಾಗಲಾಪುರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.