ರಾಯಚೂರು

'ಅಧಿಕಾರಿಗಳ ಕಾರ್ಯವೈಖರಿ, ಕಳಪೆ ಸಾಧನೆ'

Published On :

ರಾಯಚೂರು: ಬಡವರು ಮತ್ತು ವಿಕಲಚೇತನರಿಗೆ ನಗರ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಜಾರಿಯಾಗಿರುವ ಯೋಜನೆಗಳ ಅನುಷ್ಠಾನದಲ್ಲಿ ಅಧಿಕಾರಿಗಳು ತೋರಿದ ಅಸಡ್ಡೆಗೆ ಹಾಗೂ ಕಳಪೆ ಸಾಧನೆಗೆ ಅಸಮಾಧಾನಗೊಂಡ ರಾಜ್ಯ ಪೌರಾಡಳಿತ ನಿರ್ದೇಶನಾಲಯ ಬಡತನ ನಿವಾರಣಾ ಕೋಶದ ಯೋಜನಾಧಿಕಾರಿ ಎಚ್.ಪಿ. ನಾಗರಾಜ ಅವರು, ಸಾಧನೆ ಸುಧಾರಣೆಗೆ ಮುಂದಾಗುವಂತೆ ತಾಕೀತು ಮಾಡಿದ ಪ್ರಸಂಗ ಸೋಮವಾರ ನಗರದಲ್ಲಿ ನಡೆಯಿತು.
ನಗರದ ಜಿಪಂ ಸಭಾಂಗಣದಲ್ಲಿ ಕರೆದಿದ್ದ ಗುಲ್ಬರ್ಗ ವಿಭಾಗದ ಜಿಲ್ಲೆಗಳ ನಗರ ಮತ್ತು ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನೆ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗುಲ್ಬರ್ಗ ವಿಭಾಗದ ಎಲ್ಲ  ಜಿಲ್ಲೆಗಳ ಪೌರ ಸಂಸ್ಥೆಗಳಲ್ಲಿ ಎಸ್‌ಜೆಎಸ್‌ಆರ್‌ವೈ, ಶೇ.22.75, ಶೇ.7.25, ನಿರ್ಗತಿಕರು ಮತ್ತು ನಗರ ಯೋಜನೆಗಳನ್ನು ಕೋಶದ ಮುಖಾಂತರ ಜಾರಿ ಮಾಡಿದ್ದು, ತಾಲೂಕುವಾರು ಪ್ರಗತಿಯಲ್ಲಿ ಸಾಧನೆ ಸುಧಾರಿಸಲು ಸೂಚಿಸಿದರು.
ಬಡವರಿಗೆ, ವಿಕಲಚೇತನರಿಗೆ ಸಹಾಯಧನ, ಮನೆ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಅಧಿಕಾರಿಗಳಿಗೆ ಬಡವರ ಮೇಲೆ ಏಕಿಷ್ಟು ನಿರ್ಲಕ್ಷ್ಯ ಎಂಬುದು ತಮಗೆ ಅರ್ಥವಾಗುತ್ತಿಲ್ಲ. ಎಲ್ಲ ಸ್ಥಳೀಯ ಪೌರ ಸಂಸ್ಥೆಗಳಲ್ಲಿ ಯುವಕರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದು ಯಾಕೆ ಬಡವರ ಪರ ಕೆಲಸ ಮಾಡುತ್ತಿಲ್ಲ ಎಂದರು.
ಸಭೆಯಲ್ಲಿ ಗುಲ್ಬರ್ಗ ವಿಭಾಗ ವ್ಯಾಪ್ತಿಯ ಆರು ಜಿಲ್ಲೆಗಳ ಸ್ಥಳೀಯ ಪೌರ ಸಂಸ್ಥೆಗಳ ಅಧಿಕಾರಿಗಳೊಂದಿಗೆ ಜಿಲ್ಲೆವಾರು ಪ್ರತ್ಯೇಕ ಸಭೆ ನಡೆಸಿ ಪಗ್ರತಿಯ ಮಾಹಿತಿ ಪರಿಶೀಲಿಸಿದರು.
ಸಭೆಯಲ್ಲಿ ಆರು ಜಿಲ್ಲೆಗಳ ಪೌರ ಸಂಸ್ಥೆಗಳ ಆಯುಕ್ತರು, ಅಧಿಕಾರಿಗಳು, ಬಿಸಿಎಂ ಇಲಾಖೆ ಅಧಿಕಾರಿಗಳಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.