ಗಬ್ಬೂರು ಮಠ ಅಭಿವೃದ್ಧಿಗೆ ರು. 20ಲಕ್ಷ
ದೇವದುರ್ಗ: ಆಡಂಬರದ ಮದುವೆಗಳಿಂದ ಸಾಲಕ್ಕೆ ತುತ್ತಾಗುವ ಬದಲು ಸಾಮೂಹಿಕ ವಿವಾಹಗಳಿಂದ ಸಮಾಜಕ್ಕೆ ಕೊಡುಗೆ ನೀಡುವಂತೆ ಕರೆ ನೀಡಿದ ಶಾಸಕ ವೆಂಕಟೇಶ ನಾಯಕ ಅವರು, ಗಬ್ಬೂರು ಗ್ರಾಮದ ಶ್ರೀಬೂದಿಬಸವೇಶ್ವರ ಮಠದ ಅಭಿವೃದ್ಧಿಗಾಗಿ ರು. 20ಲಕ್ಷ ಅನುದಾನ ನೀಡುವುದಾಗಿ ಭರವಸೆ ನೀಡಿದರು.
ಅವರು ಶನಿವಾರ ತಾಲೂಕಿನ ಗಬ್ಬೂರು ಗ್ರಾಮದಲ್ಲಿ ಶ್ರೀಬೂದಿಬಸವೇಶ್ವರ ಸಂಸ್ಥಾನ ಮಠದಲ್ಲಿ ಜಾತ್ರೆಯ ಅಂಗವಾಗಿ ನಡೆದ 121 ಜೋಡಿ ಸಾಮೂಹಿಕ ವಿವಾಹ ಹಾಗೂ 30ನೇ ತುಲಾಭಾರ ಕಾರ್ಯಕ್ರಮದಲ್ಲಿ ಮಾತನಾಡಿ, ನವದಂಪತಿಗಳು ಚಿಕ್ಕ ಚೊಕ್ಕ ಸಂಸಾರ ಹೊಂದಲು ಗಮನಹರಿಸುವಂತೆ ಮನವಿ ಮಾಡಿದರು.
ಪ್ರತಿ ವರ್ಷ ಮಠದ ಶ್ರೀಗಳು ನೂರಾರು ಸಾಮೂಹಿಕ ವಿವಾಹ ಮಾಡುತ್ತಿರುವ ಕಾರ್ಯ ಶ್ಲಾಘನೀಯವಾಗಿದ್ದು ಮಠದ ಅಭಿವೃದ್ಧಿಗಾಗಿ ರು. 20ಲಕ್ಷ ನೀಡುವುದಾಗಿ ಹೇಳಿದರು.
ತೊಂದರೆ: ಶ್ರೀಮಠದ ಶ್ರೀಬೂದು ಬಸವಶಿವಾಚಾರ್ಯರು ಮಾತನಾಡಿ, ಬಡವರು, ಕಡುಬಡವರು, ರೈತಾಪಿ ವರ್ಗದವರು ತಮ್ಮ ಮಕ್ಕಳ ಮದುವೆಗೆ ಆರ್ಥಿಕ ಸಂಕಷ್ಟದಿಂದ ತೊಂದರೆಗೆ ಸಿಲುಕುವುದರಿಂದ ಸಾಮೂಹಿಕ ವಿವಾಹಗಳು ಅವರಿಗೆ ನೆರವಾಗಲಿವೆ.
ಇಂದಿನ ದಿನಮಾನಗಳಲ್ಲಿ ಜನ ಸಾಮಾನ್ಯರಿಗೆ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರುತ್ತಿರುವಾಗ ಸಾಮೂಹಿಕ ವಿವಾಹದಿಂದ ಪ್ರತಿಯೊಬ್ಬರಿಗೂ ಅನುಕೂಲವಾಗಲಿದೆ ಎಂದರು.
ರಾಯಚೂರಿನ ಕಿಲ್ಲೆ ಬ್ರಹನ್ಮಠದ ಶ್ರೀಶಾಂತಮಲ್ಲ ಶಿವಾಚಾರ್ಯ, ಬಿಚ್ಚಾಲಿ ಮಠದ ವೀರಭದ್ರಸ್ವಾಮಿ ಸಾನ್ನಿಧ್ಯ ವಹಿಸಿದ್ದರು.
ಮುಖ್ಯ ಅಥಿತಿಗಳಾಗಿ ಮಾಜಿ ಎಂಎಲ್ಸಿ ಬಸವರಾಜ ಪಾಟೀಲ್ ಇಟಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮನಗೌಡ ನಾಗಡದಿನ್ನಿ, ತಹಸೀಲ್ದಾರ ಬಸಲಿಂಗಪ್ಪ ನೈಕೋಡಿ, ಯುನಿಸೆಫ್ ಅಧಿಕಾರಿ ಅಜಿತಕುಮಾರ್, ಡಿವೈಎಸ್ಪಿ ಅನಿತಾ ಹದ್ದಣ್ಣವರ, ಸಿಪಿಐ ರಮೇಶ ಮೇಟಿ, ಸಿಡಿಪಿಐ ಯಮನಪ್ಪ ವಾಲ್ಮೀಕಿ, ಮಲ್ಲಿಕಾರ್ಜುನ ಪಾಟೀಲ್, ಶಿವಶರಣಗೌಡ ಸೇರಿ ಅನೇಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

