ಜ್ಞಾನದ ಅರಿವು ಮೂಡಿಸಿದ್ದು ಬಸವ ಧರ್ಮ: ಹವಾಲ್ದಾರ
ಕ.ಪ್ರ. ವಾರ್ತೆ ಬಸವಕಲ್ಯಾಣ ಫೆ.10
ಜ್ಞಾನದೊಂದಿಗೆ ಅರಿವನ್ನು ಮೂಡಿಸುವಂಥದ್ಧು ಬಸವ ಧರ್ಮ ಮಾತ್ರ ಎಂದು ಹುಮನಾಬಾದ್ನ ಸರ್ಕಾರಿ ಶಾಲಾ ಮುಖ್ಯಗುರು ಶರಣಪ್ಪ ಹವಾಲ್ದಾರ ಅಭಿಪ್ರಾಯಪಟ್ಟರು.
ನಗರದ ಬಸವೇಶ್ವರ ದೇವಸ್ಥಾನದಲ್ಲಿ ಮಾಸಿಕ ಶರಣ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿ, ಅನುಭಾವದೊಂದಿಗೆ ಅನುಭವದ ತಳಹದಿಯ ಮೇಲೆ ಬಸವ ಧರ್ಮ ಇದೆ ಎಂದು ತಿಳಿಸಿದರು.
ಬಸವ ಧರ್ಮವನ್ನು ಹೊರತುಪಡಿಸಿ ಎಲ್ಲ ಧರ್ಮಗಳಲ್ಲಿ ಕೇವಲ ಜ್ಞಾನ ಬೋಧನೆಯನ್ನು ಮಾತ್ರ ಕಾಣುವಂತಾಗಿದೆ ಎಂದ ಅವರು, ಅನೇಕ ಧರ್ಮಗಳು ಉದಯಸಿದ್ದರೆ ಈ ನಾಡು ಫಲವತ್ತಾದ ಬಸವ ಭೂಮಿಯಾಗಿದೆ ಎಂದರು.
ಶರಣ ತತ್ವದ ಆಧಾರದಲ್ಲಿ ಜೀವನ ನಡೆಸಿ: ನಾವು ಈ ದಿನಗಳಲ್ಲಿ ಢಂಬಾಚಾರದ ಬದುಕಿಗೆ ಮೊರೆ ಹೋಗುವಂತಿದ್ದು, ಶರಣ ಸಂತತಿಯವರಾದ ನಾವು ಆಡಂಬರ ಭಕ್ತಿಯ ಜೀವನ ನಡೆಸುವುದನ್ನು ಬಿಟ್ಟು ಶರಣರ ತತ್ವಗಳ ಆಧಾರದ ಮೇಲೆ ನಮ್ಮ ಜೀವನ ನಡೆಸಬೇಕೆಂದು ಕರೆ ನೀಡಿದರು.
ಸನ್ಮಾನ ಸ್ವೀಕರಿಸಿದ ಸಂಚಾರ ಠಾಣೆಯ ಪಿಎಸ್ಐ ಉಮೇಶ ಕಾಂಬಳೆ ಮಾತನಾಡಿ, ಮಾನವ ಜೀವನದ ಆರಂಭದಲ್ಲಿ ಇದ್ದ ಶ್ರದ್ಧಾಭಾವ ಕೊನೆಯವರೆಗೂ ಇರುವುದಿಲ್ಲ, ಇದು ಹೀಗಾಗಬಾರದು ಎಂದರು.
ಬೀದರ್ ಬಸವಸೇವಾ ಪ್ರತಿಷ್ಠಾನದ ಅಕ್ಕ ಗಂಗಾಂಬಿಕಾ ಪಾಟೀಲ್ ಮಾತನಾಡಿ, ಫೆ.12ರಿಂದ 14ರವರೆಗೆ ನಡೆಯಲಿರುವ ವಚನ ವಿಜಯೋತ್ಸವದಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳುವಂತೆ ಕರೆ ನೀಡಿದರು.
ಕಲ್ಪನಾ ಶೀಲವಂತ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಲ್ಲಪ್ಪ ಲಾತೂರೆ, ವಿಶ್ವನಾಥಪ್ಪ ಬೇಲೂರೆ, ಕಾಶಪ್ಪ ಸಕ್ಕರಬಾವಿ, ಬಸವರಾಜ ಬಾಲಿಕೀಲೆ, ರಾಜಕುಮಾರ ಚಿರಡೆ ಹಾಗೂ ಅಶೋಕ ನಾಗರಾಳೆ ಉಪಸ್ಥಿತರಿದ್ದರು.
ಜ್ಯೋತಿ ತೂಗಾಂವೆ ನಿರೂಪಿಸಿದರು. ಮಾಯಾ ಮುರಾಳೆ ಸ್ವಾಗತಿಸಿದರೆ ನಿರ್ಮಲಾ ಶೆಟಗಾರ್ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

