ಯುವಜನತೆ ಹಾದಿ ತಪ್ಪಲು ಅಶ್ಲೀಲ ಚಿತ್ರ ಕಾರಣ: ವಿಷಾದ
ಸಿಂಧನೂರು: ಇತ್ತೀಚಿನ ದಿನಗಳಲ್ಲಿ ಅಶ್ಲೀಲ ಚಿತ್ರಗಳ ಹಾವಳಿ ಹೆಚ್ಚುತ್ತಿದ್ದು, ಅವುಗಳನ್ನು ನೋಡಿ ಯುವಕರು ನಿಜ ಜೀವನದಲ್ಲಿ ಅಮಾಯಕ ಹೆಣ ುಮಕ್ಕಳ ಮೇಲೆ ಪ್ರಯೋಗ ಮಾಡುತ್ತಿದ್ದಾರೆ. ನಗ್ನತೆಯ ಅಶ್ಲೀಲ ಚಿತ್ರಗಳಿಂದ ಯುವಜನತೆ ಹಾದಿ ತಪ್ಪುತ್ತಿದೆ ಎಂದು ಜಮಾಅತೆ ಇಸ್ಲಾಮಿ ಹಿಂದ್‌ನ ಮಹಿಳಾ ಘಟಕದ ಅಧ್ಯಕ್ಷೆ, ಶಿಕ್ಷಕಿ ಆಯೀಶಾ ಪೋತ್ನಾಳ ಕಳವಳ ವ್ಯಕ್ತಪಡಿಸಿದರು.
ನಗರದ ಆರ್‌ಜಿಎಂ ಮೈದಾನದಲ್ಲಿ ಗರ್ಲ್ಸ್ ಇಸ್ಲಾಮಿಕ್ ಆರ್ಗನೈಜೇಶನ್(ಜಿಐಒ) ಹಮ್ಮಿಕೊಂಡಿದ್ದ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಕಾರಣಗಳು ಮತ್ತು ಪರಿಹಾರೋಪಾಯಗಳು ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಪಾಶ್ಚಾತ್ಯರ ಅನುಕರಣೆ ನಿಲ್ಲಲಿ: ಹೆಣ ು ಮಕ್ಕಳ ಮಾರಾಟ, ನಾಪತ್ತೆ, ಅತ್ಯಾಚಾರ, ವ್ಯಭಿಚಾರ, ವರದಕ್ಷಣೆ ಕಿರುಕುಳ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚಿತ್ತಿವೆ. ಇದಕ್ಕೆ ಮೂಲ ಕಾರಣ ಪಾಶ್ಚಾತ್ಯರ ಅನುಕರಣೆ. ಫ್ಯಾಶನ್ ಹೆಸರಿನಲ್ಲಿ ನಗ್ನತೆ, ಬಾಯ್ ಫ್ರೆಂಡ್, ಗರ್ಲ್ಸ್ ಫ್ರೆಂಡ್ ಅನುಕರಣೆಯಿಂದ ವಿಚ್ಛೇದನಗಳು ಹೆಚ್ಚುತ್ತಿವೆ. ಇದರಿಂದ ಭಾರತೀಯ ಸಂಸ್ಕೃತಿಯ ಮೇಲೆ ದುಷ್ಪರಿಣಾಮ ಉಂಟಾಗಿದೆ. ಅಶ್ಲೀಲ ಚಿತ್ರಗಳ ಬಿಡುಗಡೆಯನ್ನು ನಿಲ್ಲಿಸಬೇಕೆಂದು ಆಗ್ರಹಿಸಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಜನವಾದಿ ಮಹಿಳಾ ಸಂಘಟನೆಯ ಸರಸ್ವತಿ ಪಾಟೀಲ್, ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಬಿಂಬಿಸುವ ಪ್ರಕ್ರಿಯೆ ಪಾಲಕರಿಂದ ನಡೆಯಬೇಕು. ಲಿಂಗ ತಾರತಮ್ಯ ನಿಲ್ಲಬೇಕೆಂದು ಒತ್ತಾಯಿಸಿದರು.
ರಾಷ್ಟ್ರೀಯ ಮಹಿಳಾ ಒಕ್ಕೂಟದ ಅಧ್ಯಕ್ಷೆ ಎಂ.ಸಿ. ಸೀತಮ್ಮ, ಕಸಾಪ ತಾಲೂಕಾಧ್ಯಕ್ಷೆ ರಮಾದೇವಿ ಶಂಭೋಜಿ ಮಾತನಾಡಿ, ನಮ್ಮಲ್ಲಿನ ಮೂಢನಂಬಿಕೆಯನ್ನು ದೂರಮಾಡಿಕೊಳ್ಳಬೇಕು. ದೌರ್ಜನ್ಯ ತಡೆಯುವ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಹೇಳಿದರು. ಜಿಐಒದ ಅಧ್ಯಕ್ಷೆ ಪರ್ವಿನ್, ಕಾರ್ಯದರ್ಶಿ ನಸ್ರೀನ್ ಮಾತನಾಡಿದರು. ಜೈಬುನ್ನೀಸಾ ನಿರೂಪಿಸಿದರು. ಬುಸ್ರಾ ಪರ್ವಿನ್ ವಂದಿಸಿದರು.
ಶೌಚಾಲಯಕ್ಕೆ ಬೀಗ
ಮುದಗಲ್: ಪಟ್ಟಣ ಸಮೀಪದ ಚಿಕ್ಕಲೆಕ್ಕಿಹಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದ ಮೂಲೆಯಲ್ಲಿ ನಿರ್ಮಿಸಲಾದ ಶೌಚಾಲಯಕ್ಕೆ ನಿರ್ವಹಣೆ ಕೊರತೆಯಿಂದ ಶಾಶ್ವತ ಬೀಗ ಹಾಕಲಾಗಿದೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ. 2008- 09ನೇ ಸಾಲಿನ ನಂಜುಡಪ್ಪ ವರದಿ ಅನುಷ್ಠಾನ ಯೋಜನೆಯಡಿಯಲ್ಲಿ 40 ಸಾವಿರ ವೆಚ್ಚದಲ್ಲಿ ನಿರ್ಮಿಸಲಾದ ಹೆಣ ುಮಕ್ಕಳ ಶೌಚಾಲಯಕ್ಕೆ ನೀರಿನ ಸಂಪರ್ಕವಿಲ್ಲದೆ ಸದಾ ಬೀಗ ಹಾಕಲಾಗಿದ್ದು, ವಿದ್ಯಾರ್ಥಿನಿಯರು ಶೌಚ ಕ್ರಿಯೆಗೆ ಬಯಲನ್ನೇ ಅವಲಂಬಿಸುವಂತಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

