ರಾಯಚೂರು

27ರಂದು ಕ್ಯಾರಿಹಾಳದಲ್ಲಿ ಸಾಮೂಹಿಕ ವಿವಾಹ

Published On :

ಸಿಂಧನೂರು: ಗಂಗಾವತಿ ತಾಲೂಕಿನ ಕ್ಯಾರಿಹಾಳ ಗ್ರಾಮದಲ್ಲಿ ಹಿರೇಲಿಂಗೇಶ್ವರ ಜಾತ್ರಾ ರಥೋತ್ಸವದ ಅಂಗವಾಗಿ ಸಾಮೂಹಿಕ ವಿವಾಹ ಫೆ.27 ರಂದು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದಲ್ಲಿ ಕಾಗಿನೆಲೆ ನಿರಂಜನಾನಂದಪುರಿ, ಕನಕಗುರುಪೀಠದ ಗುಲ್ಬರ್ಗ ವಿಭಾಗದ ಸಿದ್ಧರಾಮಾನಂದಪುರಿ,ಅಂಕಲಿಮಠದ ವೀರಭದ್ರ ಶ್ರೀ, ತುರ್ವಿಹಾಳದ ಮಾದಯ್ಯಗುರುವಿನ್, ಸಿಂಧನೂರಿನ ಹನುಮಂತಯ್ಯ ಗುರುವಿನ್ ಸಾನ್ನಿಧ್ಯ ವಹಿಸುವರು. ಸಣ್ಣ ನೀರಾವರಿ ಸಚಿವ ಶಿವರಾಜ ತಂಗಡಗಿ, ಕೊಪ್ಪಳ ಲೋಕಸಭಾ ಸದಸ್ಯ ಶಿವರಾಮೇಗೌಡ, ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ, ಮಾಜಿ ಸಚಿವ ಸಾಲೋಣಿ ನಾಗಪ್ಪ, ಜಿಪಂ ಸದಸ್ಯೆ ಜ್ಯೋತಿ ಬಿಲ್ಗಾರ್, ಜಿಪಂ ಮಾಜಿ ಸದಸ್ಯ ಕೆ. ಕರಿಯಪ್ಪ, ಬಿಜೆಪಿ ಮುಖಂಡ ಬಸವರಾಜ ದಢೇಸ್ಗೂರು, ತಾಪಂ ಸದಸ್ಯ ಜೂಲೆಪ್ಪ ನಾಯಕ, ನವಲಿ ಗ್ರಾಪಂ ಅಧ್ಯಕ್ಷ ಮರಿರಾಜ ಎಚ್.ಭಜಂತ್ರಿ, ಮಾಜಿ ಅಧ್ಯಕ್ಷ ಜಡಿಯಪ್ಪ ಮುಕ್ಕುಂದಿ ಮತ್ತಿತರರು ಭಾಗವಹಿಸುವರು.
ಇದೇ ಸಂದರ್ಭದಲ್ಲಿ ಸಾಮೂಹಿಕ ವಿವಾಹಗಳನ್ನು ಹಮ್ಮಿಕೊಳ್ಳಲಾಗಿದ್ದು, ಆಸಕ್ತರು ಫೆ.21 ರೊಳಗಾಗಿ ತಮ್ಮ ಹೆಸರುಗಳನ್ನು ನೊಂದಾಯಿಸಬೇಕು. ಬಾಲ್ಯವಿವಾಹ, ಮರುಮದುವೆಗೆ ಅವಕಾಶವಿರುವುದಿಲ್ಲ. ಆಸಕ್ತರು 9902092196, 9986997388 ಗಳಿಗೆ ಸಂಪರ್ಕಿಸಲು ಹಿರೇಲಿಂಗೇಶ್ವರ ದೇವಸ್ಥಾನ ಸಮಿತಿ ಮನವಿ ಮಾಡಿದೆ.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.