ನಾಳೆಯಿಂದ ರಂಗ ಸಂಭ್ರಮ
ರಾಯಚೂರು: ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಭಗತ್ ಸಾಂಸ್ಕೃತಿಕ ಸೇವಾ ಸಂಘದ ಸಂಯುಕ್ತಾಶ್ರಯದಲ್ಲಿ ಸಮುದಾಯ ಹಾಗೂ ಜಿಲ್ಲಾ ಕಸಾಪ ಸಹಯೋಗದಲ್ಲಿ ಫೆ.16ರಿಂದ 21ರವರೆಗೆ ರಂಗಸಂಭ್ರಮ ನಾಟಕೋತ್ಸವ ಹಾಗೂ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದು ಸಮುದಾಯ ಸಂಘಟನೆಯ ಪ್ರಮುಖ ವಿ.ಎನ್.ಅಕ್ಕಿ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಫೆ.16ರಂದು ನಗರದ ರಂಗಮಂದಿರದಲ್ಲಿ ಬೆಳಗ್ಗೆ 10.30ಕ್ಕೆ ನಾಟಕೋತ್ಸವವನ್ನು ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಜಿ. ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಸಮುದಾಯ ರಾಜ್ಯ ಸಮಿತಿ ಅಧ್ಯಕ್ಷ ಆರ್.ಕೆ.ಹುಡಿಗಿ ವಹಿಸುವರು. ಮುಖ್ಯ ಅತಿಥಿಗಳಾಗಿ ಜಿಪಂ ಸಿಇಒ ವಿಜಯ ಜೋತ್ಸ್ನಾ, ಡಿಡಿಪಿಐ ರಾಮಾಂಜನೇಯ, ಸಮುದಾಯ ಸಮಿತಿಯ ಕಾರ್ಯದರ್ಶಿ ದೇವೇಂದ್ರಗೌಡ ಪಾಲ್ಗೊಳ್ಳಲಿದ್ದಾರೆಂದು ಹೇಳಿದರು.
ವಿಚಾರ ಸಂಕಿರಣ: ಈ ವೇಳೆ ಆಯೋಜಿಸಿರುವ ವಿಚಾರ ಸಂಕಿರಣದಲ್ಲಿ ವೃತ್ತಿ ರಂಗಭೂಮಿ ಇಂದು ಮತ್ತು ಮುಂದೆ ಎಂಬ ವಿಷಯದ ಕುರಿತು ಇಳಕಲ್ನ ಡಾ. ವಿಶ್ವನಾಥ ವಂಶಾಕೃತಮಠ್, ಸಮಕಾಲೀನ ರಂಗಭೂಮಿ ಸಮಸ್ಯೆಗಳು ಮತ್ತು ಸವಾಲುಗಳು ಎಂಬ ವಿಷಯದ ಕುರಿತು ಗುಲ್ಬರ್ಗದ ಡಾ. ಬಸವರಾಜ ಸಬರದ್ ಹಾಗೂ ಮಕ್ಕಳ ರಂಗಭೂಮಿ ಮಹತ್ವ ಮತ್ತು ವ್ಯಾಪ್ತಿ ಕುರಿತು ಮುಂಡರಗಿಯ ಡಾ. ನಿಂಗೂ ಸೊಲಗಿ ಉಪನ್ಯಾಸ ನೀಡಲಿದ್ದಾರೆಂದರು.
ಪ್ರದರ್ಶನ: ಫೆ.16ರಂದು ನಾಟಕೋತ್ಸವದ ಅಂಗವಾಗಿ ಸಂಜೆ 6.30ಕ್ಕೆ ರಂಗಮಂದಿರದಲ್ಲಿ ಡಾ. ಅಮರೇಶ ನುಗಡೋಣಿ ಅವರ ಕಥೆಯಾಧರಿಸಿದ ನಾಟಕ ಮಂಥನದ ಪ್ರದರ್ಶನ ಆಯೋಜಿಸಲಾಗಿದೆ. ಫೆ.17ರಂದು ಸಂಜೆ 6.30ಕ್ಕೆ ದ.ರಾ. ಬೇಂದ್ರೆಯವರ ಕೃತಿಯ ಆಧರಿಸಿದ ನಾಯಕ ಅಂಧೇರಿ ನಗರ ಚೌಪಟ್ ರಾಜಾ ನಾಟಕ ಹಾಗೂ ಫೆ.18ರಂದು ಡಾ. ಚಂದ್ರಶೇಖರ ಕಂಬಾರರು ರಚಿಸಿದ ಅಲಿಬಾಬಾ ಮತ್ತು ನಲವತ್ತು ಕಳ್ಳರು ನಾಟಕದ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದರು.
ಫೆ.19ರಂದು ಸಂಜೆ 6.30ಕ್ಕೆ ಡಾ. ಚಂದ್ರಶೇಖರ್ ಕಂಬಾರರು ರಚಿಸಿದ ಪುಷ್ಪರಾಣಿ, ಫೆ.20ರಂದು ಗೋ.ರು. ಚನ್ನಬಸಪ್ಪ ಅವರ ಬೆಳ್ಳಕ್ಕಿ ಹಿಂಡು ಬೆದರ್ಯಾವೋ, ಹಾಗೂ ಫೆ.21ರಂದು ಸಂಜೆ 7.30ಕ್ಕೆ ಲಿಯೋ ಟಾಲಸ್ಟಾಯ್ ಅವರ ಕಥೆಯಾಧರಿಸಿದ ಜೀವಸೆಲೆ ನಾಟಕದ ಪ್ರದರ್ಶನ ನಡೆಯಲಿದೆ. ಫೆ.21ರಂದು ಸಂಜೆ 6.30ಕ್ಕೆ ನಡೆಯುವ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ತಾಯಣ್ಣ ಯರಗೇರಾ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಪಂ ಉಪಕಾರ್ಯದರ್ಶಿ ಮುಕ್ಕಣ್ಣ ಕರಿಗಾರ್, ಬಿಇಒ ಮಲ್ಲಿಕಾರ್ಜುನ, ಕಸಾಪ ಜಿಲ್ಲಾಧ್ಯಕ್ಷ ಮಹಾಂತೇಶ್ ಮಸ್ಕಿ ಪಾಲ್ಗೊಳ್ಳಲಿದ್ದಾರೆಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

