ಸುದ್ದಿ ಸಂಕ್ಷೇಪ
ಕಾಲುವೆ ನೀರು ಅಕ್ರಮ ಬಳಕೆ; ಪ್ರಕರಣ ದಾಖಲು
ರಾಯಚೂರು: ಸಿಂಧನೂರು ತಾಲೂಕಿನ ರಂಗಾಪುರ ಗ್ರಾಮದ ಬಳಿ ತುಂಗಭದ್ರಾ ಎಡದಂಡೆ ಕಾಲುವೆಯಿಂದ ಅಕ್ರಮವಾಗಿ ನೀರು ಹರಿಸಿಕೊಳ್ಳುತ್ತಿದ್ದ ವ್ಯಕ್ತಿಯೊಬ್ಬರ ವಿರುದ್ಧ ದೂರು ದಾಖಲಿಸಲಾಗಿದೆ. ಗ್ರಾಮದ ತಿಮ್ಮನಗೌಡ ಗುಡದೂರು ಎಂಬುವವರು ತಮ್ಮ ಹೊಲಕ್ಕೆ ಅಕ್ರಮವಾಗಿ ನೀರು ಪಡೆದುಕೊಳ್ಳುತ್ತಿರುವ ಬಗ್ಗೆ ಕರ್ನಾಟಕ ನೀರಾವರಿ ಕಾಯಿದೆ 1965ರ ಸೆಕ್ಷನ್ 53 ಮತ್ತು 55 ರ ಸ್ಪಷ್ಟ ಉಲ್ಲಂಘನೆ ಮಾಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾನೂನು ಕ್ರಮ ಜರುಗಿಸಲು ನೀರಾವರಿ ಇಲಾಖೆಯ ಮಸ್ಕಿ ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಆರ್.ಕುಮಾರಸ್ವಾಮಿ ಅವರು ಪೊಲೀಸರಿಗೆ ದೂರಿತ್ತಿದ್ದಾರೆ.
ಈ ಬಗ್ಗೆ ಬಳಗಾನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಪಾಧ್ಯಕ್ಷರ ನೇಮಕ
ಮುದಗಲ್: ಬಿಜೆಪಿಯ ಲಿಂಗಸ್ಗೂರು ತಾಲೂಕು ಘಟಕದ ಉಪಾಧ್ಯಕ್ಷರನ್ನಾಗಿ ಮಲ್ಲಪ್ಪ ಹೂಗಾರ ಅವರನ್ನು ನೇಮಕ ಮಾಡಲಾಗಿದೆ ಎಂದು ತಾಲೂಕು ಅಧ್ಯಕ್ಷ ಸಿದ್ದನಗೌಡ ಪೊಲೀಸ್ ಪಾಟೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ಸಮಾರಂಭ
ಸಿಂಧನೂರು: ಸಿಂಧನೂರಿನ ಆದರ್ಶ ಕಾಲೋನಿಯಲ್ಲಿರುವ ಸೃಷ್ಟಿ ಸ್ವತಂತ್ರ ಪ.ಪೂ.ಕಾಲೇಜ್ನ 6ನೇ ವಾರ್ಷಿಕೋತ್ಸವ ಹಾಗೂ ಬೀಳ್ಕೊಡುಗೆ ಸಮಾರಂಭ ಫೆ.18 ರಂದು ಬೆಳಗ್ಗೆ 10ಕ್ಕೆ ಜರುಗಲಿದೆ.ಕಾರ್ಯಕ್ರಮದ ಅಧ್ಯಕ್ಷತೆ ಪ್ರಾಚಾರ್ಯ ಉಮೇಶ ಸಿದ್ರಾಂಪೂರ, ಮುಖ್ಯ ಭಾಷಣಕಾರರಾಗಿ ಕಲ್ಯಾಣ ಕರ್ನಾಟಕ ಬಸವಶ್ರೀ ಪ್ರಶಸ್ತಿ ವಿಜೇತ, ಜನಸ್ನೇಹ ಪರಿವಾರದ ಚೇರ್ಮನ್ ಬಸವರಾಜ ತಮ್ಮಣ್ಣವರ, ವಿ.ಹಿ.ಪಿ. ರಾಜ್ಯ ಸತ್ಸಂಘ ಪ್ರಮುಖರು ಶ್ರೀಶೈಲಪ್ಪ ಪತ್ತಾರ ಗುಡಿಹಾಳ ಭಾಗವಹಿಸುವರು. ಮುಖ್ಯ ಅತಿಥಿಗಳಾಗಿ ಗ್ರಾಮೀಣ ಪೊಲೀಸ್ ಠಾಣೆ ಎಸ್.ಎಂ. ಪಾಟೀಲ್, ಪತ್ರಕರ್ತ ಡಿ.ಎಚ್.ಕಂಬಳಿ, ವೆಂಕಟೇಶ್ವರ ಪ್ರೌಢಶಾಲೆ ನಿವೃತ್ತ ಶಿಕ್ಷಕ ಎಚ್.ಕೆ. ವಟ್ಟಿನ್, ಗುಂಡಾ ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಚಿದಾನಂದ ಗುರುವಿನ್, ರೆಡ್ಡಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ನಾಗೇಶ ಹೆರೂರ ಮತ್ತಿತರರು ಪಾಲ್ಗೊಳ್ಳುವರು. ನಂತರ ತೊಡಕುಸ್ತಿ-ಜಾಡಮಸ್ತಿ ಹಾಸ್ಯ ಕಿರುನಾಟಕ ಹಾಗೂ ಸಾಂಸ್ಕೃತಿಕ ನೃತ್ಯ, ಚುಟುಕು-ಗುಟುಕು ಪುಸ್ತಕ ಬಿಡುಗಡೆ ಕಾರ್ಯಕ್ರಮಗಳು ಜರುಗಲಿವೆ. ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳು, ಪಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಲು ಕಾಲೇಜಿನ ಆಡಳಿತ ಮಂಡಳಿ ಕೋರಿದೆ.
ಗೌರವಧನ: ಸ್ವಾಗತ
ಗುರುಮಠಕಲ್: ಅಂಗನವಾಡಿ ನೌಕರರ ಗೌರವಧನವನ್ನು ಕಾರ್ಯಕರ್ತೆಗೆ ಮಾಸಿಕ 500 ಹಾಗೂ ಸಹಾಯಕಿಗೆ ಮಾಸಿಕ 250 ಹೆಚ್ಚಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಆಲ್ ಇಂಡಿಯಾ ಯುಟಿಯುಸಿಗೆ ಸಂಯೋಜಿತವಾದ ಕರ್ನಾಟಕ ಸಂಯುಕ್ತ ಅಂಗನವಾಡಿ ನೌಕರರ ಸಂಘದ ರಾಜ್ಯ ಸಮಿತಿಯು ಸ್ವಾಗತಿಸುತ್ತದೆ ಎಂದು ಜಿಲ್ಲಾಧ್ಯಕ್ಷರಾದ ಉಮಾದೇವಿ ತಿಳಿಸಿದ್ದಾರೆ. ಅಂಗನವಾಡಿ ನೌಕರರು ಸುಮಾರು ದಿನಗಳಿಂದ ಹೋರಾಟ ನಡೆಸುತ್ತ ಬಂದಿರುವುದರ ಪ್ರತಿಫಲವಾಗಿ ಸರ್ಕಾರ ಗೌರವಧನ ಹೆಚ್ಚಳಕ್ಕೆ ಮುಂದಾಗಿ ಮಾಸಿಕ 500 ಹಾಗೂ ಸಹಾಯಕಿಯರಿಗೆ 250 ಹೆಚ್ಚಳ ಮಾಡಿದ ಸರ್ಕಾರದ ನಿರ್ಧಾರಕ್ಕೆ ಎಲ್ಲಾ ನೌಕರರು ಅಭಿನಂದನೆಗಳನ್ನು ಸಲ್ಲಿಸುತ್ತದೆ ಎಂದರು.
20ರಿಂದ ಬ್ರಹ್ಮೋತ್ಸವ
ರಾಯಚೂರು: ಮಹಾಶಿವರಾತ್ರಿ ಅಂಗವಾಗಿ ಶ್ರೀಶೈಲಂನ ಭ್ರಮರಾಂಬಾ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನದಲ್ಲಿ ಫೆ. 20ರಿಂದ ಮಾ.2ರವರೆಗೆ ಮಹಾಶಿವರಾತ್ರಿ ಬ್ರಹ್ಮೋತ್ಸವ ನಡೆಯಲಿದೆ.ಫೆ. 20ರಂದು ಅಂಕುರಾರ್ಪಣ, ಧ್ವಜಾರೋಹಣ, ಫೆ. 21ಕ್ಕೆ ಹಂಸವಾಹನಸೇವಾ, ಫೆ. 22ರಂದು ಮಯೂರ ವಾಹನ ಸೇವಾ, ಫೆ. 23ರಂದು ಭೃಂಗಿ ವಾಹನ ಸೇವಾ, ಫೆ. 24ರಂದು ರಾವಣ ವಾಹನಸೇವಾ, ಆಂಧ್ರ ಸರ್ಕಾರದಿಂದ ಶೇಷ ವಸ್ತ್ರ ಸಮರ್ಪಣೆ, ಫೆ. 25ರಂದು ಪುಷ್ಪಪಲ್ಲಕ್ಕಿ ಸೇವೆ, ಫೆ. 26ರಂದು ಗಜವಾಹನ ಸೇವೆ, ಫೆ. 27ರಂದು ಮಹಾಶಿವರಾತ್ರಿ ಅಂಗವಾಗಿ ಪ್ರಭೋತ್ಸವಂ, ನಂದಿ ವಾಹನ ಸೇವೆ, ಮಹಾರುದ್ರಾಭಿಷೇಕ, ಕಲ್ಯಾಣೋತ್ಸವ ನೆರವೇರಿಸಲಾಗುತ್ತದೆ.ಫೆ. 28ರಂದು ರಥೋತ್ಸವ ನಡೆಯಲಿದ್ದು, ಮಾ.1 ರಂದು ಪೂರ್ಣಾಹುತಿ, ಭಕ್ತರ ಶಿವದೀಕ್ಷಾ ಮುಕ್ತಾಯ, ಧ್ವಜಾವರೋಹಣ ಹಾಗೂ ಮಾ. 2ರಂದು ಅಶ್ವವಾಹನಸೇವೆ, ಏಕಾಂತಸೇವೆ, ಪುಷ್ಪೋತ್ಸವಂ ಹಾಗೂ ಶಯನೋತ್ಸವ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ದೇವಸ್ಥಾನ ಸಮಿತಿ ಪ್ರಕಟಣೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

