ಕಠಿಣ ಪರಿಶ್ರಮ ಪಟ್ಟರೆ ಕನಸು ನನಸು
ಕ.ಪ್ರ. ವಾರ್ತೆ ಸಿಂಧನೂರು ಫೆ.18
ಕುಟುಂಬ ಮತ್ತು ಸಮಾಜಕ್ಕೆ ಒಳಿತನ್ನು ಬಯಸುವ ವಿಶಿಷ್ಟ, ವಿಭಿನ್ನ ಕನಸುಗಳನ್ನು ಕಾಣಬೇಕು. ಅಂತಹ ಕನಸುಗಳನ್ನು ನನಸು ಮಾಡಲು ಸತತ ಪರಿಶ್ರಮ ಪಡಬೇಕೆಂದು ವಿದ್ಯಾರ್ಥಿಗಳಿಗೆ ಬಂಡಾಯ ಸಾಹಿತಿ ಪೀರಬಾಷಾ ಸಲಹೆ ನೀಡಿದರು.
ನಗರದ ಕರ್ನಾಟಕ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಹಾಗೂ ದ್ವಿತೀಯ ಪಿಯು ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ವಿದ್ಯಾಭ್ಯಾಸ ಮಾಡಿದ ಕಾಲೇಜು ಮತ್ತು ಅಲ್ಲಿನ ಸಹಪಾಠಿಗಳನ್ನು ಉನ್ನತ ಅಧ್ಯಯನದ ಸಂದರ್ಭದಲ್ಲಿ ಬೇರ್ಪಡುವುದು ಸಹಜ ಪ್ರಕ್ರಿಯೆ. ಅದೆಲ್ಲ ಮರೆತು ಪಾಲಕರು ಮತ್ತು ಅಧ್ಯಯನ ನಡೆಸಿದ ಸಂಸ್ಥೆಗೆ ಕೀರ್ತಿ ತರುವ ಹಿನ್ನೆಲೆಯಲ್ಲಿ ಏಕಾಗ್ರತೆ ಮತ್ತು ದೃಢಚಿತ್ತದಿಂದ ವ್ಯಾಸಂಗ ಮಾಡುವಂತೆ ತಿಳಿಸಿದರು.
ಮೆಲಿಕ ಶಿಕ್ಷಣ ಅಗತ್ಯ: ಕ್ಷಣ ಕ್ಷಣಕ್ಕೂ ಬದಲಾಗುತ್ತಿರುವ ಪರಿಸ್ಥಿತಿಗೆ ಹೊಂದಿಕೊಳ್ಳಲು ಮತ್ತು ಅದನ್ನು ಸಮರ್ಥವಾಗಿ ಎದುರಿಸಲು ಮೌಲಿಕ ಶಿಕ್ಷಣ ಬೇಕೇ ಬೇಕು. ಸಮಯ ಪ್ರಜ್ಞೆಯೊಂದಿಗೆ ಅದನ್ನು ವಿದ್ಯಾರ್ಥಿಗಳು ಸಾಧಿಸಬೇಕು ಎಂದರು.
ಯಾವುದೇ ದೇಶದ ಅಭಿವೃದ್ಧಿಯಲ್ಲಿ ಶೈಕ್ಷಣಿಕ ಗುಣಮಟ್ಟ ಮಹತ್ವದ ಪಾತ್ರ ವಹಿಸುತ್ತದೆ. ಅಭಿವೃದ್ಧಿಶೀಲ ಮತ್ತು ಅಭೃವದ್ಧಿ ಹೊಂದಿದ ದೇಶಗಳಲ್ಲಿ ಶೈಕ್ಷಣಿಕ ಕ್ಷೇತ್ರದ ಬೆಳವಣಿಗೆ ವಿಭಿನ್ನವಾಗಿದೆ. ಅಮೆರಿಕದಂತಹ ಮುಂದುವರಿದ ದೇಶದಲ್ಲಿ ಶೇ.20ರಷ್ಟು ಜನ ಕನಿಷ್ಠ ತಿಳಿವಳಿಕೆಯನ್ನೂ ಹೊಂದಿಲ್ಲ ಎನ್ನುವುದನ್ನು ಮಾಧ್ಯಮಗಳೇ ಬಹಿರಂಗಪಡಿಸಿವೆ. ಕಾಲಾನಂತರ ಬದಲಾವಣೆಗಳು ಆಗುತ್ತಲೇ ಇರಬೇಕು ಎಂದರು. ಸಿಡಿಪಿಒ ಯೋಗಿತಾಬಾಯಿ, ಸೇಂಟ್ಜಕಾರಿ ಪ್ರೌಢಶಾಲೆಯ ಮುಖ್ಯಗುರು ರುದ್ರಪ್ಪ, ಒಳಬಳ್ಳಾರಿ ಸರ್ಕಾರಿ ಪ್ರೌಢಶಾಲೆ ಮುಖ್ಯಗುರು ಬಸಲಿಂಗಪ್ಪ, ವೆಂಕಟೇಶ್ವರ ಪ್ರೌಢಶಾಲೆ ಮುಖ್ಯಗುರು ಗಂಗನಗೌಡ, ರೆಡ್ಡಿ ಪ್ರೌಢಶಾಲೆ ಮುಖ್ಯಗುರು ನಾಗೇಶ ಹೇರೂರು ಮಾತನಾಡಿದರು. ಗುಂಜಳ್ಳಿ ಸರ್ಕಾರಿ ಪ್ರೌಢಶಾಲೆ ಮುಖ್ಯಗುರು ಶೋಭಾ ಅಧ್ಯಕ್ಷತೆ ವಹಿಸಿದ್ದರು.
ಸನ್ಮಾನ: ಎಂಎಸ್ಸಿ ಸ್ನಾತ್ತಕೋತ್ತರ ಪದವಿಯಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ ಪಡೆದು ಏಳು ಚಿನ್ನದ ಪದಕಗಳನ್ನು ತನ್ನದಾಗಿಸಿಕೊಂಡಿರುವ ಹುಸೇನ್ ಬಾಷಾ, ಇನ್ನೋರ್ವ ಚಿನ್ನದ ಪದಕ ವಿಜೇತೆ ಸುಮಂಗಲಾ ಎಲೆಕೂಡ್ಲಿಗಿ, ಎಂ.ಬಿ. ಮರಿಯಪ್ಪ ಅವರನ್ನು ಕಾಲೇಜು ವತಿಯಿಂದ ಸನ್ಮಾನಿಸಲಾಯಿತು. ಅಧ್ಯಕ್ಷತೆಯನ್ನು ಟ್ಯಾಲೆಂಟ್ ಎಜುಕೇಷನ್ ಟ್ರಸ್ಟ್ನ ಹಾಜಿಮಸ್ತಾನ್ ಜಾಗೀರದಾರ ವಹಿಸಿದ್ದರು. ಕರ್ನಾಟಕ ಕಾಲೇಜಿನ ನಿರ್ದೇಶಕ ಶಂಕರ ಗುರಿಕಾರ, ಶರಬನಗೌಡ ಪೊಲೀಸ್ ಪಾಟೀಲ್ ಅರಳಹಳ್ಳಿ, ಪ್ರಾಚಾರ್ಯ ಉರುಕುಂದೆಪ್ಪ ತಂಬೂರಿ ಉಪಸ್ಥಿತರಿದ್ದರು. ಹುಲಿಗೇಶ ಸ್ವಾಗತಿಸಿದರು. ಹನುಮೇಶ ಗುಡದೂರು ನಿರೂಪಿಸಿದರು. ಶರಣಪ್ಪ ವಂದಿಸಿದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

