ಅಭಿವೃದ್ಧಿ ಕುರಿತು ಚರ್ಚೆಗೆ ಸಿದ್ಧ: ನಾಡಗೌಡ
ಸಿಂಧನೂರು: ನಗರದ ಅಭಿವೃದ್ಧಿಗೆ ಮಾಜಿ ಶಾಸಕ ನಾಡಗೌಡರು ಶ್ರಮಿಸಿಲ್ಲ ಎಂಬ ಶಾಸಕ ಹಂಪನಗೌಡ ಬಾದರ್ಲಿ ಅವರ ಆರೋಪಕ್ಕೆ ಪ್ರತಿಕ್ರಿಯಿಸಿರುವ ಮಾಜಿ ಶಾಸಕ ವೆಂಕಟರಾವ್ ನಾಡಗೌಡ ಅವರು, ಅಭಿವೃದ್ಧಿ ಕಾಮಗಾರಿ ನಡೆದಿರುವುದರ ಬಗ್ಗೆ ದಾಖಲೆಗಳೊಂದಿಗೆ ಬಹಿರಂಗ ಚರ್ಚೆಗೆ ಸಿದ್ಧ ಎಂದು ಪ್ರತಿ ಸವಾಲು ಹಾಕಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾವು ಶಾಸಕರಾಗಿದ್ದ 5 ವರ್ಷದಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದು ಪ್ರಮುಖವಾಗಿ ಪ್ರತಿ ವರ್ಷ 4.5 ಕೋಟಿ ಎಸ್‌ಎಫ್‌ಸಿ ಅನುದಾನ ಒದಗಿಸುವುದಾಗಿ ತಿಳಿಸಿದರು.
ಸಿಎಂ ವಿಶೇಷ ಅನುದಾನದಡಿ 5 ಕೋಟಿ ಮಂಜೂರಾಗಿದ್ದು, ಈ ಪೈಕಿ 1 ಕೋಟಿ ವೆಚ್ಚದಲ್ಲಿ ಬಪ್ಪೂರ ರಸ್ತೆಯ ಚರಂಡಿ ಕಾಮಗಾರಿ, 2 ಕೋಟಿ ವೆಚ್ಚದಲ್ಲಿ ಸಣ್ಣ ಹಳ್ಳದಿಂದ ಮೈಹಿಬೂಬ್ ಕಾಲೋನಿ ಚರಂಡಿ ರಸ್ತೆ, ಗ್ರಂಥಾಲಯ ಕಟ್ಟಡ ಸೇರಿ ಅನೇಕ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಸಾರ್ವಜನಿಕರ ದುಡ್ಡು ದುರ್ಬಳಕೆಯಲ್ಲವೇ?: ನಗರೋತ್ಥಾನ ಯೋಜನೆಯಡಿ ಅಭಿವೃದ್ಧಿ ಕಾಮಗಾರಿಗಳ ಕ್ರಿಯಾ ಯೋಜನೆ ತಯಾರಿಸಿದ ಮೇಲೆ ಮತ್ತೆ ಕ್ರಿಯಾ ಯೋಜನೆಯನ್ನು ತಯಾರಿಸಲು ಅವಕಾಶವಿಲ್ಲ. ಆದರೆ ಶಾಸಕ ಬಾದರ್ಲಿ ಅವರು ಆ ಕೆಲಸದಲ್ಲಿ ತೊಡಗಿದ್ದಾರೆಂದು ಟೀಕಿಸಿದ ಅವರು, ನಗರದ ಗಾಂಧಿ ವೃತ್ತ-ಕೋರ್ಟ್ ಮುಂಭಾಗದಿಂದ-ಮಾರುಕಟ್ಟೆಯವರೆಗಿನ ರಸ್ತೆಯನ್ನು ಪ್ರವಾಹ ಪರಿಹಾರ ನಿಧಿಯಡಿ ಮರಂ ಹಾಕಲಾಗಿದೆ. ಮತ್ತೆ 13ನೇ ಹಣಕಾಸು ಯೋಜನೆಯಡಿ ಮೆಟ್ಲಿಂಗ್ ಕಾಮಗಾರಿ ನಡೆದಿದ್ದು ಅಲ್ಲದೇ ನಗರೋತ್ಥಾನ ಯೋಜನೆಯಡಿ ಅದೇ ರಸ್ತೆಯನ್ನು ಮೆಟ್ಲಿಂಗ್ ಹಾಗೂ ಡಾಂಬರೀಕರಣಕ್ಕೆ ಟೆಂಡರ್ ಕರೆಯಲಾಗಿದೆ. ಹೀಗೆ ಒಂದೇ ರಸ್ತೆಗೆ ಮೂರು ಕಾಮಗಾರಿಗಳು ನಡೆಸಿರುವುದು ಸಾರ್ವಜನಿಕರ ದುಡ್ಡು ದುರ್ಬಳಕೆಯಲ್ಲವೇ ಎಂದು ಪ್ರಶ್ನಿಸಿದರು.
ಅಭಿವೃದ್ಧಿ ಕಾಮಗಾರಿ ಕೈಗೊಂಡಿಲ್ಲ: ಬಾದರ್ಲಿ ಆಯ್ಕೆಯಾಗಿ 8 ತಿಂಗಳಾಗಿದ್ದು, ಯುಜಿಡಿ ಯೋಜನೆ ಕಾಮಗಾರಿ ಯಾವ ಹಂತದಲ್ಲಿದೆ, ಆಯ್ಕೆಯಾದ ಒಂದೇ ತಿಂಗಳಲ್ಲಿ ನಗರಸಭೆಯಲ್ಲಿ ಸಭೆ ನಡೆಸಿ ಪಾರದರ್ಶಕತೆಯಿಂದ ಯುಜಿಡಿ ಟೆಂಡರ್ ಕರೆಯುವುದಾಗಿ ಅವರು ಭರವಸೆ ನೀಡಿದ್ದರು. ಎಂಟು ತಿಂಗಳಾದರೂ ಯೋಜನೆ ಜಾರಿಯಾಗಿಲ್ಲ. ಸರ್ಕಾರದಿಂದ ಒಂದು ಪೈಸೆ ಅನುದಾನ ತಂದು ಅಭಿವೃದ್ಧಿ ಕಾಮಗಾರಿ ಕೈಗೊಂಡಿಲ್ಲ ಎಂದು ಲೇವಡಿ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

