ಶ್ರೀಕೃಷ್ಣ ಅಕಾಡೆಮಿಯಿಂದ ಎಸ್ಕೆಇ-36
ರಾಯಚೂರು: 2011ರಲ್ಲಿ ಸ್ಥಾಪಿಸಲ್ಪಟ್ಟ ಶ್ರೀಕೃಷ್ಣ ಅಕಾಡೆಮಿ ಸಂಸ್ಥೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ನುರಿತ ಉಪನ್ಯಾಸಕರಿಂದ ತರಬೇತಿ ವ್ಯವಸ್ಥೆ ಕಲ್ಪಿಸುವ ಮೂಲಕ ಎಸ್ಕೆಎ-36 ನೂತನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಸ್ಥೆ ಅಧ್ಯಕ್ಷ ಬಾಲಕೃಷ್ಣ ಹಾಗೂ ಮಧು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂಸ್ಥೆ ಪ್ರಾರಂಭದಿಂದ ಪಿಯುಸಿ ಪಠ್ಯಕ್ರಮದ ಜೊತೆಗೆ ಸಿಇಟಿ ಬೋಧನೆ ಮಾಡುತ್ತಾ ಬಂದಿದೆ. ಪ್ರತಿ ವರ್ಷ ಜಿಲ್ಲೆಯ ಪಿಯುಸಿ ದ್ವಿತೀಯ ವರ್ಷದ ವಿಜ್ಞಾನ ಓದುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೆ ಅಲ್ಪಾವಧಿ ಬೋಧನೆಯ ಸಿಇಟಿ ತರಬೇತಿ ತರಗತಿ ನಡೆಸಲಾಗುತ್ತದೆ. 2012ರಲ್ಲಿ ಮೂರು ವಿದ್ಯಾರ್ಥಿಗಳು ಹಾಗೂ 2013ರಲ್ಲಿ ಆರು ವಿದ್ಯಾರ್ಥಿಗಳು ಎಂಜಿನೀಯರಿಂಗ್ ಮತ್ತು ವೈದ್ಯಕೀಯದಲ್ಲಿ ರ್ಯಾಂಕ್ ಪಡೆದಿರುತ್ತಾರೆ ಎಂದರು.
ಅದ್ವಿತೀಯ ಕಾರ್ಯಕ್ರಮ: ಅಲ್ಲದೆ ಸಂಸ್ಥೆಯಲ್ಲಿ ಸ್ಪಾರ್ಕ್ ಮತ್ತು ಸ್ಟಾರ್ ಬ್ಯಾಚ್ ಪದ್ಧತಿ ಅಳವಡಿಸಲಾಗಿದ್ದು, 2013ರಲ್ಲಿ ಶೇ 78.27 ರಷ್ಟು ಉತ್ತಮ ಫಲಿತಾಂಶ ಬಂದ ಪ್ರಯುಕ್ತ ಜಿಲ್ಲೆ 2ನೇ ಸ್ಥಾನ ಗಳಿಸಿದೆ. ಎಸ್ಕೆಎ-36 ಹೊಸ ಕಾರ್ಯಕ್ರಮ ಪ್ರಾರಂಭಿಸಲು ಕ್ರಮ ಕೈಗೊಂಡಿದ್ದು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅದ್ವಿತೀಯ ಕಾರ್ಯಕ್ರಮವಾಗಿದೆ. ರಾಷ್ಟ್ರಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಾದ ಐಐಟಿ, ಜೆಇಇ, ಎಐಐಎಂಎಸ್, ಐಎಸ್ಇಇಟಿ, ಎನ್ಇಇಟಿ ಎದುರಿಸಲು ವಿದ್ಯಾರ್ಥಿಗಳು ಸಿದ್ಧಪಡಿಸಲಾಗುತ್ತದೆ.
ಎಸ್ಕೆಎ-36ನಲ್ಲಿ ಸೀಮಿತ ವಿದ್ಯಾರ್ಥಿಗಳ ದಾಖಲಾತಿ, ವಾರಕ್ಕೊಮ್ಮೆ ಸಿಇಟಿ ಪರೀಕ್ಷೆ, ತಿಂಗಳಲ್ಲಿ 2 ಬಾರಿ ಐಐಟಿ-ಜೆಇಇ ಮೇನ್ ಲೆವೆಲ್ ಪರೀಕ್ಷೆ, ಪ್ರತಿ ಭಾನುವಾರ ನುರಿತ ಐಐಟಿ ಉಪನ್ಯಾಸಕರಿಂದ ಬೋಧನೆ, ಸಿಇಟಿ ಪರೀಕ್ಷೆಗೆ ಮುದ್ರಿತ ಸಾಮಗ್ರಿ ಒದಗಿಸಲಾಗುವುದು. ವಿದ್ಯಾರ್ಥಿಗಳ ಬೇಡಿಕೆಗೆ ಅನುಸಾರ ಎಸಿ ಕ್ಲಾಸ್ ರೂಮ್, ಅರೆವಸತಿ ಸೌಲಭ್ಯ ಒದಗಿಸಲಾಗುವುದು. ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯತಿ ನೀಡಲಾಗುವುದು.
ಉತ್ತಮ ಬೋಧನೆ: 2013-14ನೇ ಸಾಲಿನಿಂದ ವಿಶೇಷವಾಗಿ ವಾಣಿಜ್ಯ ವಿದ್ಯಾರ್ಥಿಗಳಿಗೆ ಸಿಎ-ಸಿಪಿಟಿ ಬೋಧನಾ ಪದ್ಧತಿ ಪ್ರಾರಂಭಿಸಲಾಗಿದೆ. ಕಲಿಕಾ, ಬೋಧನಾ ಸೌಲಭ್ಯ ಇರುತ್ತದೆ. ನುರಿತ ಉಪನ್ಯಾಸಕರಿಂದ ಉತ್ತಮ ಬೋಧನೆ ನೀಡಿ ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ದಾರಿದೀಪವಾಗಲು ಸಿದ್ಧವಿದೆ. ಪಾಲಕರು ಮತ್ತು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

