ಸಮಸ್ಯೆಗಳ ಬಗ್ಗೆ ಚಿಂತನೆ ನಡೆದರೆ ಶ್ರಮ ಸಾರ್ಥಕ
ರಾಯಚೂರು: ನಗರದಲ್ಲಿ ಈಚೆಗೆ ಆವಿಷ್ಕಾರ ಸಾಂಸ್ಕೃತಿಕ ವೇದಿಕೆ ಹಾಗೂ ಪಂ. ತಾರಾನಾಥ ಸಾಂಸ್ಕೃತಿಕ ವೇದಿಕೆಗಳ ಆಶ್ರಯದಲ್ಲಿ ಸಾಂಸ್ಕೃತಿಕ ಜನೋತ್ಸವ ಕಾರ್ಯಕ್ರಮದ ಅಂಗವಾಗಿ ಚಿತ್ರನಿರ್ದೇಶಕ ಪಿ. ಶೇಷಾದ್ರಿ ಅವರೊಂದಿಗೆ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು.
ನಿರ್ದೇಶಕ ಪಿ. ಶೇಷಾದ್ರಿಯವರ ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ ಭಾರತ ಸ್ಟೋರ್ಸ್ನ ಪ್ರದರ್ಶನದ ನಂತರ ಜರುಗಿದ ನಿರ್ದೇಶಕರೊಂದಿಗಿನ ಸಂವಾದದಲ್ಲಿ ಮಾತನಾಡಿದ ಪಿ. ಶೇಷಾದ್ರಿ, ಸಮಸ್ಯೆಗಳಿಗೆ ಪರಿಹಾರ ಸೂಚಿಸುವುದು ತಮ್ಮ ಸಿನಿಮಾಗಳ ಉದ್ದೇಶವಲ್ಲ. ಬದಲಿಗೆ ಜನರನ್ನು ಚಿಂತನೆಗೆ ಹಚ್ಚುವುದು ಸಾಧ್ಯವಾದರೆ ಶ್ರಮ ಸಾರ್ಥಕ ಎಂದರು.
ಜನ ಪ್ರೋತ್ಸಾಹಿಸಲಿ: ಸಿನಿಮಾಗಳನ್ನು ಒಳ್ಳೆಯ ಸಿನಿಮಾ ಮತ್ತು ಕೆಟ್ಟ ಸಿನಿಮಾಗಳೆಂದು ಮಾತ್ರ ವರ್ಗೀಕರಿಸಿ ಒಳ್ಳೆಯ ಸಿನಿಮಾಗಳನ್ನು ಜನ ಪ್ರೋತ್ಸಾಹಿಸಬೇಕು. ಮಾಧ್ಯಮಗಳಲ್ಲಿ ರಾಜಕೀಯ ಸಂದೇಶ ಬಂದರೆ ಅವುಗಳನ್ನು ದುರುಪಯೋಗ ಪಡಿಸಿಕೊಳ್ಳುವವರು ಇರುವುದರಿಂದ ನೇರವಾಗಿ ತಮ್ಮ ಚಿತ್ರದಲ್ಲಿ ರಾಜಕೀಯವನ್ನು ಸೇರಿಸಿಲ್ಲ ಎಂದರು. ಮುಖ್ಯ ಅತಿಥಿಯಾಗಿದ್ದ ಆವಿಷ್ಕಾರ ರಾಜ್ಯ ಸಮಿತಿ ಸದಸ್ಯ ಡಾ. ಜಿ.ಎಸ್ ಶಶಿಕುಮಾರ ಮಾತನಾಡಿ, ಪಿ. ಶೇಷಾದ್ರಿಯವರು ಸಾಮಾಜಿಕ ವಿಷಯಗಳನ್ನು ಆಯ್ದುಕೊಂಡು ಸದಭಿರುಚಿ ಚಿತ್ರಗಳನ್ನು ನಿರ್ಮಿಸುತ್ತಿರುವುದು ಶ್ಲಾಘನೀಯ ಎಂದರು. ಅಧ್ಯಕ್ಷತೆಯನ್ನು ಪಂ. ತಾರಾನಾಥ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಶರಣಪ್ಪ ಉದ್ಬಾಳ್ ವಹಿಸಿದ್ದರು. ಆವಿಷ್ಕಾರ ಜಿಲ್ಲಾ ಸಂಚಾಲಕ ಚನ್ನಬಸವ ಜಾನೇಕಲ್ ಉಪಸ್ಥಿತರಿದ್ದರು. ಆವಿಷ್ಕಾರ ತಂಡದ ಕರಿಯಪ್ಪ ಮಾಸ್ತರ್ ಮತ್ತು ಸಂಗಡಿಗರು ಪ್ರಗತಿಪರ ಗೀತೆ ಪ್ರಸ್ತುತ ಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

