ಕಾಲುಬಾಯಿ ರೋಗ ನಿರೋಧಕ ಚಿಕಿತ್ಸೆ
ದೇವದುರ್ಗ: ತಾಲೂಕಿನ ಗಬ್ಬೂರು ಗ್ರಾಮದಲ್ಲಿ ಇತ್ತೀಚೆಗೆ ಜಾನುವಾರುಗಳಿಗೆ ಕಾಲುಬಾಯಿ ರೋಗ ತಡೆಗೆ ರೋಗನಿರೋಧಕ ಲಸಿಕೆ ಹಾಕಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಗಬ್ಬೂರು ಗ್ರಾಮದ ಪಶು ಚಿಕಿತ್ಸಾಲಯದ ಪಶು ವೈದ್ಯಕೀಯ ಪರಿವೀಕ್ಷಕ ಡಾ. ಕೆ.ಆರ್. ಚೌಧರಿ, ಜಾನುವಾರುಗಳಿಗೆ ಪ್ರತಿ ಆರು ತಿಂಗಳಿಗೊಮ್ಮೆ ಎಫ್ಎಂಡಿ ಲಸಿಕೆ ಕಡ್ಡಾಯವಾಗಿ ಹಾಕಿಸುವಂತೆ ಮನವಿ ಮಾಡಿದರು. ಪಶು ವೈದ್ಯ ಸೇವಾ ಇಲಾಖೆ ವತಿಯಿಂದ ಜಾನುವಾರುಗಳಿಗೆ ಉಚಿತ ಲಸಿಕೆ ಹಾಕಲಾಗುತ್ತಿದ್ದು, ರೈತ ಬಾಂಧವರು ಸದ್ಬಳಕೆ ಮಾಡಿಕೊಳ್ಳಬೇಕು. ಜಾನುವಾರುಗಳ ಬಾಯಿಯಲ್ಲಿ ಹುಣ್ಣು, ನಾಲಿಗೆ ಗಾಯ, ಬಾಯಿಯಿಂದ ಸತತವಾಗಿ ಜೊಲ್ಲು ಸುರಿಯುವುದು ಕಂಡುಬಂದಲ್ಲಿ ಹಾಗೂ ಕಾಲುಗಳ ಗೋರಸಿನಲ್ಲಿ ಗಾಯಗಳಾಗಿರುವುದು ಕಂಡುಬಂದರೆ ಜಾನುವಾರು ಕಾಲುಬಾಯಿ ರೋಗದ ಬಾಧೆಯಿಂದ ಬಳಲುತ್ತಿದೆ ಎಂದು ನಿರ್ಧರಿಸಿ ಚಿಕಿತ್ಸೆ ಕೊಡಿಸುವಂತೆ ಸಲಹೆ ನೀಡಿದರು.
ಪಶು ವೈದ್ಯಾಧಿಕಾರಿ ರಶೀದ್ ಇಕ್ಬಾಲ್, ಜಿಪಂ ಸದಸ್ಯರಾದ ಮಾಜಿ ಸದಾಶಿವಯ್ಯ ತಾತ, ಸಿದ್ದಯ್ಯ ತಾತ ಗುರುವಿನ ಮಠ, ಮುಖಯ್ಯ ತಾತ ಗುರುವಿನ್, ಖಾಜಾ ಪಟೇಲ್ ಖಾಜಿ, ಅಬ್ದುಲ್ ಸಲೀಂ, ಗಿರಿರಾಜ, ಸತ್ಯನಾರಾಯಣ, ಜ್ಯೋತಿ, ಮುನ್ನಾ, ರಿಯಾಜ್, ಕಮಲ್ ಪಾಶಾ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

