71 ಕೋಟಿ ನಿರೀಕ್ಷೆ
ಸಿಂಧನೂರು: 2014-15ನೇ ಸಾಲಿನ ರು. 71.72 ಕೋಟಿ ಆದಾಯ ನಿರೀಕ್ಷೆಯ ನಗರಸಭೆ ಬಜೆಟ್ ಅನ್ನು ನಗರಸಭಾಧ್ಯಕ್ಷ ಜಾಫರ ಅಲಿ ಜಾಹಗೀರದಾರ ಮಂಡಿಸಿ, ಅನುಮೋದನೆ ಪಡೆದರು.
ಆದಾಯ ಹೇಗೆ?: ಆಸ್ತಿ ತೆರಿಗೆ 15 ಕೋಟಿ ರೂ., ಟೋಲ್ ಸುಂಕ ರು. 2.60 ಲಕ್ಷ, ಸಾಮಾನ್ಯ ನೀರಿನ ಕರ ರು. 10 ಸಾವಿರ, ಜಾಹಿರಾತು ರು. 2 ಲಕ್ಷ, ಬ್ಯಾಂಕ್ ಬಡ್ಡಿ ರು. 5 ಸಾವಿರ, ನೀರು ಸರಬರಾಜು ತೆರಿಗೆ ರು. 1.5 ಕೋಟಿ, ಆಡಿಟ್ ರಿಕವರಿ ರು. 50 ಸಾವಿರ, ದಿನದ ಸಂತೆ ರು. 8 ಲಕ್ಷ, ವಾರದ ಸಂತೆ ರು. 2.5 ಲಕ್ಷ, ಲೈಸನ್ಸ್ ರು. 10 ಲಕ್ಷ, ಕಟ್ಟಡ ಪರವಾನಿಗೆ ಫೀ ರು. 2 ಕೋಟಿ, ಎಸ್.ಎಫ್.ಸಿ. ವೇತನ ಅನುದಾನ ರು. 4.31 ಕೋಟಿ, ಕರಗಳ ಸಂಗ್ರಹ ಶುಲ್ಕ ರು. 3.90 ಲಕ್ಷ, ವರ್ಗಾವಣೆ ಶುಲ್ಕ ರು. 12 ಲಕ್ಷ, ಮೇಲ್ವಿಚಾರಣೆ ಶುಲ್ಕ ರು. 20 ಲಕ್ಷ, ಹೊಸ ನಳದ ಪರವಾನಿಗೆ ಶುಲ್ಕ ರು. 5 ಲಕ್ಷ, 13ನೇ ಹಣಕಾಸು ಅನುದಾನ ರು. 2 ಕೋಟಿ, ಬೇಸಿಗೆ ನೀರು ಅನುದಾನ ರು. 2 ಕೋಟಿ, ಎಸ್.ಎಫ್.ಸಿ. ಮುಕ್ತ ನಿಧಿ ರು. 5 ಕೋಟಿ, ಎಸ್ಎಫ್ಸಿ ವಿದ್ಯುತ್ ಅನುದಾನ ರು. 75 ಲಕ್ಷ, ಎಸ್ಎಫ್ಸಿ ವಿಶೇಷ ಅನುದಾನ ರು. 5 ಲಕ್ಷ, ಎಸ್.ಜೆ.ಎಸ್.ಆರ್.ವೈ. ಅನುದಾನ ರು. 54.53, ಸಂಸದರ ಅನುದಾನ ರು. 10 ಲಕ್ಷ, ಶಾಸಕರ ಅನುದಾನ ರು. 25 ಲಕ್ಷ, ಹಿಂದುಳಿದ ಪ್ರದೇಶಾಭಿವೃದ್ಧಿ ಅನುದಾನ ರು. 1 ಕೋಟಿ, ಪ್ರಕೃತಿ ವಿಕೋಪ ಅನುದಾನ ರು. 40 ಲಕ್ಷ, ಮಾರಾಟ ತೆರಿಗೆ ರು. 12 ಲಕ್ಷ, ಆದಾಯ ತೆರಿಗೆ ರು. 10 ಲಕ್ಷ, ಆರೋಗ್ಯ ಕರ ರು. 20.25 ಲಕ್ಷ, ಗ್ರಂಥಾಲಯ ಕರ ರು. 8.10 ಲಕ್ಷ, ಶಡ್ಯೂಲ್ ಫೀ ರು. 5 ಲಕ್ಷ, ಜನಗಣತಿ ಅನುದಾನ ರು. 2 ಲಕ್ಷ, ಮುಖ್ಯಮಂತ್ರಿಗಳ ಅನುದಾನ ರು. 85 ಲಕ್ಷ ಸೇರಿದಂತೆ ಅಂದಾಜು ಆದಾಯ ರು. 71,72, 78,000ಗಳು ಆದಾಯ ಬರುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ವೆಚ್ಚದ ಮೂಲಗಳು: ಒಟ್ಟು ಅಂದಾಜು ಖರ್ಚು ರು. 71,70,77,000ಗಳಾಗಿವೆ. ಅಧ್ಯಕ್ಷರ, ಸದಸ್ಯರ ಗೌರವಧನ ರು. 4.44 ಲಕ್ಷ ರೂ., ಕಾರ್ಯಾಲಯ ಸಿಬ್ಬಂದಿ ವೇತನ ರು. 65.85 ಲಕ್ಷ, ದೂರವಾಣಿ ರು. 2 ಲಕ್ಷ, ಸ್ಟೇಷನರಿ ರು. 5 ಲಕ್ಷ, ಮುದ್ರಣ ರು. 5 ಲಕ್ಷ ರೂ., ಪೀಠೋಪಕರಣ ರು. 1 ಲಕ್ಷ, ಜಾಹೀರಾತು ರು. 5 ಲಕ್ಷ, ಕಂದಾಯ ಸಿಬ್ಬಂದಿ ವೇತನ ರು. 21.26 ಲಕ್ಷ, ಕಂದಾಯ ವಿಭಾಗದ ತಾತ್ಕಾಲಿಕ ಸಿಬ್ಬಂದಿ ವೇತನ ರು. 3.5 ಲಕ್ಷ, ವಿದ್ಯುತ್ ಸಾಮಾನು ಖರೀದಿ ರು. 20 ಲಕ್ಷ, ನೀರು ಸರಬರಾಜು ಸಿಬ್ಬಂದಿ ವೇತನ ರು. 51.80 ಲಕ್ಷ, ನೀರು ಸರಬರಾಜು ವಿಭಾಗದ ತಾತ್ಕಾಲಿಕ ಸಿಬ್ಬಂದಿ ವೇತನ ರು. 11 ಲಕ್ಷ, ನೀರು ಸರಬರಾಜು ನಿರ್ವಹಣೆ ರು. 15 ಲಕ್ಷ, ಜನಗಣತಿ ಸಿಬ್ಬಂದಿ ವೇತನ ಗೌರವಧನ ರು. 2 ಲಕ್ಷ, ಹೊಸ ಪೈಪ್ಲೈನ್ ರು. 5 ಲಕ್ಷ, ಜನರೇಟರ್ ಇಂಧನ ರು. 10 ಲಕ್ಷ, ಪೌರ ಕಾರ್ಮಿಕರ ಸಿಬ್ಬಂದಿ ವೇತನ ರು. 2.61 ಕೋಟಿ, ಪೌರ ಕಾರ್ಮಿಕರ ತಾತ್ಕಾಲಿಕ ಸಿಬ್ಬಂದಿ ವೇತನ ರು. 40.72 ಲಕ್ಷ, ಸಮಾನ ಕೆಲಸಕ್ಕೆ ಸಮಾನ ವೇತನ ಸಿಬ್ಬಂದಿ ವೇತನ ರು. 25 ಲಕ್ಷ, ನೈರ್ಮಲ್ಯ ಸಾಮಾಗ್ರಿ ಖರೀದಿ ರು. 10 ಲಕ್ಷ, ಹೊರ ಗುತ್ತಿಗೆ ಪೌರ ಕಾರ್ಮಿಕರ ವೇತನ 7.8 ಲಕ್ಷ ರೂ., ಚರಂಡಿ ದುರಸ್ಥಿ ರು. 20 ಲಕ್ಷ ಹಾಗೂ ಇತರ ಖರ್ಚಿನ ಮೂಲಗಳಾಗಿವೆ.
ಬಜೆಟ್ ಮಂಡಿಸಿದ ನಂತರ, ಒಟ್ಟಾರೆಯಾಗಿ ರು. 2.01 ಲಕ್ಷ ನಿವ್ವಳ ಉಳಿತಾಯದ ಬಜೆಟ್ ಇದಾಗಿದೆ ಎಂದು ಜಹಾಗೀರದಾರ ತಿಳಿಸಿದರು.
ನಗರಸಭೆ ಉಪಾಧ್ಯಕ್ಷೆ ಲಕ್ಷ್ಮೀ ರಮೇಶ, ಪೌರಾಯುಕ್ತ ಬಿ. ಪ್ರಹ್ಲಾದ್, ಎ.ಇ.ಇ. ಗಂಗಾಧರಗೌಡ, ನಗರಸಭೆ ಸದಸ್ಯರು ಭಾಗವಹಿಸಿದ್ದರು. ಲೆಕ್ಕ ಅಧೀಕ್ಷಕ ಅಬ್ದುಲ್ ವರದಿ ವಾಚಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

