ಅಧ್ಯಾತ್ಮ, ಧಾರ್ಮಿಕ ಪುಸ್ತಕಗಳ ಖರೀದಿಗೆ ಸಂಘಟನೆ ವಿರೋಧ
ರಾಯಚೂರು: ಮನುವಿನ ವಿಚಾರಧಾರೆ ಮತ್ತು ಮನುಸ್ಮೃತಿಯಲ್ಲಿನ ಮುತ್ತಿನ ಮಾತುಗಳು ಎಂಬ ಪುಸ್ತಕಗಳೂ ಸೇರಿ ಅಧ್ಯಾತ್ಮ ಮತ್ತು ಧರ್ಮಕ್ಕೆ ಸಂಬಂಧಿಸಿದ ನೂರಾರು ಪುಸ್ತಕಗಳನ್ನು ರಾಜ್ಯದ ಪ್ರೌಢ ಶಾಲಾ ಗ್ರಂಥಾಲಯಗಳಿಗೆ ಸರಬರಾಜು ಮಾಡಲು ಕರ್ನಾಟಕ ಸರ್ಕಾರ ಮುಂದಾಗಿರುವುದನ್ನು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಖಂಡಿಸಿದೆ.
ಈ ಕುರಿತು ಪ್ರಕಟಣೆ ನೀಡಿರುವ ಸಂಘಟನೆಯ ಜಿಲ್ಲಾ ಸಮಿತಿಯ ಅಧ್ಯಕ್ಷೆ ಚೇತನಾ ಬನಾರೆ, ಮಹಿಳೆಯರ ಸ್ವಾತಂತ್ರ್ಯ, ಸಮಾನತೆ, ಘನತೆಗೆ ತದ್ವಿರುದ್ಧ ವಾದವನ್ನು ಪ್ರತಿಪಾದಿಸುವ ಲಿಂಗ ಸಮಾನತೆ ವಿರೋಧಿ ಮನುವಿನ ವಿಚಾರಧಾರೆ ಪ್ರತಿಪಾದಿಸುವ ಪುಸ್ತಕಗಳು ಎಳೆಯ ಬಾಲಕ-ಬಾಲಕಿಯರಿಗೆ ಬೋಧಿಸುವುದು ಸರಿಯಲ್ಲ ಎಂದಿದ್ದಾರೆ.
ದೌರ್ಜನ್ಯ: ಮಹಿಳೆಯರು ಪುರುಷರಿಗಿಂತ ಕೀಳು, ಮಹಿಳೆಯರು ಭೋಗದ ವಸ್ತುಗಳು ಮುಂತಾದ ಪುರುಷ ಪ್ರಧಾನ ಆಲೋಚನೆಗಳು ಇನ್ನೂ ಪ್ರಚಲಿತ ಇರುವುದರಿಂದಲೇ ಇಂದು ಮಹಿಳೆಯರ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಲಿಂಗ ಸೂಕ್ಷ್ಮತೆಯನ್ನು ಸಮಾಜದ ಎಲ್ಲಾ ಸ್ತರಗಳಿಗೆ ಸೇರಿದ ಸ್ತ್ರೀ- ಪುರುಷರಲ್ಲಿ ಬೆಳೆಸಬೇಕಾದ ತುರ್ತು ಅಗತ್ಯ ಇರುವ ಈ ಸಂದರ್ಭದಲ್ಲಿ ಇಂತಹ ಪುಸ್ತಕಗಳಿಗೆ ಅವಕಾಶ ನೀಡಿರುವುದು ಅನಾಗರಿಕ ವ್ಯವಸ್ಥೆಗೆ ದೂಡುವುದರಲ್ಲಿ ಸಂಶಯವಿಲ್ಲ ಎಂದು ಆರೋಪಿಸಿದ್ದಾರೆ.
ಪ್ರಗತಿಪರ ವಿಚಾರ ಪ್ರತಿಪಾದಿಸಲು ನೆರವಾಗುವಂತಹ ನವೋದಯ ವಿಚಾರಗಳನ್ನು ಎತ್ತಿ ಹಿಡಿಯುವಂತಹ ಕೃತಿಗಳನ್ನು ಮಕ್ಕಳಿಗೆ ನೀಡಬೇಕಿದೆ. ಪುಸ್ತಕಗಳ ಆಯ್ಕೆ ಮತ್ತು ಖರೀದಿ ವಿಚಾರದಲ್ಲೂ ಕೂಡ ಅಸಮಾಧಾನ ಬಂದಿರುವುರಿಂದ ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಮತ್ತು ಪುಸ್ತಕಗಳ ಸರಬರಾಜು ತಕ್ಷಣವೇ ಕೈಬಿಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

