ರಾಯಚೂರು

ಪೇಜಾವರಶ್ರೀ ನಿರ್ಧಾರಕ್ಕೆ ಸ್ವಾಗತ

Published On :

ಸಿಂಧನೂರು: ಉಡುಪಿ ಪೇಜಾವರ ಶ್ರೀಗಳು 800 ವರ್ಷಗಳ ಪರಂಪರೆಯ ಪಲ್ಲಕ್ಕಿ ಏರಿ ಉತ್ಸವ ಆಚರಿಸುವ ವಿಧಾನವನ್ನು ಕೈಬಿಟ್ಟಿರುವುದಕ್ಕೆ ಬಸವಕೇಂದ್ರದ ಅಧ್ಯಕ್ಷ ಗುಂಡಪ್ಪ ಬಳಿಗಾರ, ವೀರಭದ್ರಗೌಡ ಅಮರಾಪುರ, ವೀರಭದ್ರಪ್ಪ ಕುರುಕುಂದಿ, ಎಚ್.ಜಿ. ಹಂಪಣ್ಣ, ಚಂದ್ರಶೇಖರ ಯರದಿಹಾಳ, ಮನುಜಮತ ಬಳಗದ ಬಸವರಾಜ ಬಾದರ್ಲಿ, ಕೆಆರ್ಎಸ್ನ ಎಚ್.ಎನ್. ಬಡಿಗೇರ, ಲಂಕೇಶ ಬಳಗದ ಬಸವರಾಜ ಹಳ್ಳಿ, ಇಮಾಮ್ಹುಸೇನ್ ಎತ್ಮಾರಿ ಸ್ವಾಗತಿಸಿದ್ದಾರೆ.
ಜೇವರ್ಗಿಯಲ್ಲಿ ನಡೆದ ಅಡ್ಡಪಲ್ಲಕ್ಕಿ ಉತ್ಸವಕ್ಕೆ ಅನೇಕ ಪ್ರಗತಿಪರ ಸಂಘಟನೆಗಳ ವಿರೋಧ ವ್ಯಕ್ತವಾಗಿತ್ತು. ಮನುಷ್ಯರನ್ನು ಪಲ್ಲಕ್ಕಿಯಲ್ಲಿ ಕೂಡಿಸಿ ಮನುಷ್ಯರೇ ಹೋರುವುದು ಮಾನವೀಯತೆ ಅಲ್ಲ. ಯಾವುದೇ ಧರ್ಮಕ್ಕೆ ಮಾನವೀಯತೆ, ದಯೆ, ಅಂತಃಕರಣ ಮತ್ತು ಸಮಾನತೆಯ ಅರವಿಗೆ ಬೇಕೆಬೇಕು ಎನ್ನುವುದನ್ನು ಮನಗಂಡು ಪ್ರಗತಿಪರ ವಿಚಾರಗಳನ್ನು ಗೌರವಿಸಿ ಪೇಜಾವರ ಶ್ರೀ ಕೈಗೊಂಡಿರುವ ನಿರ್ಣಯ ಸ್ವಾಗತಾರ್ಹ. ಇಂತಹ ಆಚರಣೆಯ ಬಗ್ಗೆ ಎಲ್ಲ ಧಾರ್ಮಿಕ ಮುಖಂಡರು ಪೇಜಾವರ ಶ್ರೀಗಳನ್ನು ಬೆಂಬಲಿಸಬೇಕು, ಅನುಸರಿಸಬೇಕು ಎಂದು ಕೋರಿದ್ದಾರೆ.
ಮುನ್ನಡೆಗೆ ಆತ್ಮಸ್ಥೈರ್ಯ ಬೇಕು: ಬಸಮ್ಮ
ಸಿಂಧನೂರು: ವಿಕಲಚೇತನ ವ್ಯಕ್ತಿಗಳನ್ನು ಕಾಡುವ ಬಹುದೊಡ್ಡ ಸಮಸ್ಯೆಯೇ ಆತ್ಮವಿಶ್ವಾಸದ ಕೊರತೆ. ಸಮಾಜ ಅವರೊಂದಿಗೆ ವರ್ತಿಸುವ ರೀತಿ ಅವರನ್ನು ಮಾನಸಿಕವಾಗಿ ಕುಗ್ಗುವಂತೆ ಮಾಡುತ್ತದೆ. ಆತ್ಮಸ್ಥೈರ್ಯದೊಂದಿಗೆ ಹೆಜ್ಜೆ ಇಟ್ಟರೆ ಅಸಾಮಾನ್ಯ ವ್ಯಕ್ತಿಗಳಾಗಿ ಬೆಳೆಯಬಹುದು ಎಂದು ಜಿಪಂ ಸದಸ್ಯೆ ಬಸಮ್ಮ ಕುಂಟೋಜಿ ಹೇಳಿದರು.
ತಾಲ್ಲೂಕಿನ ತುರ್ವಿಹಾಳ ಗ್ರಾಮದಲ್ಲಿ ವಿಶ್ವ ಅಂಗವಿಕಲರ ಸ್ವಸಹಾಯ ಸಂಘ ತುರ್ವಿಹಾಳ, ರಾಜ್ಯ ಅಂಗವಿಕಲರ ಒಕ್ಕೂಟ ಸಿಂಧನೂರು, ಎಂಆರ್ಡಬ್ಲ್ಯೂ ಮತ್ತು ವಿಆರ್ಡಬ್ಲ್ಯೂ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಅಂಗವಿಕಲರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸರ್ಕಾರ ವಿಕಲಚೇತನರಿಗಾಗಿ ವಿಶೇಷ ಹಕ್ಕು ಮತ್ತು ಸೌಲಭ್ಯಗಳನ್ನು ಕಲ್ಪಿಸಿದ್ದು ಅವುಗಳ ಸದುಪಯೋಗ ಪಡೆದು ಸ್ವಅಭಿವೃದ್ಧಿ ಸಾಧಿಸಬೇಕು ಎಂದು ಕರೆ ನೀಡಿದರು.
ಅಂಗವಿಕಲರ ಸ್ವಸಹಾಯ ಸಂಘದ ಅಧ್ಯಕ್ಷ ವೀರಭದ್ರಗೌಡ ಪೊ.ಪಾ., ತುರ್ವಿಹಾಳ, ಗ್ರಾಪಂ ಅಧ್ಯಕ್ಷೆ ಕೆಂಪಮ್ಮ, ಉಪಾಧ್ಯಕ್ಷ ಕರಿಯಪ್ಪ ಭಂಗಿ, ಡಾ.ಮಂಜುನಾಥ ಅಣಗೌಡರ್, ಎಂಆರ್ಡಬ್ಲ್ಯೂ, ವಿಆರ್ಡಬ್ಲ್ಯೂ ಒಕ್ಕೂಟದ ಜಿಲ್ಲಾಧ್ಯಕ್ಷ ಮಹ್ಮದ್ ಹುಸೇನ್ ಸಾಬ್, ತಾಲೂಕು ಅಧ್ಯಕ್ಷ ಶರಣಪ್ಪ ರೌಡಕುಂದಾ, ಶಿವಗ್ಯಾನಪ್ಪ ಅತ್ತನೂರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.