ರಾಯಚೂರು

ನೂತನ ಅಧ್ಯಕ್ಷರಿಂದ ಇಂದು ಪದಗ್ರಹಣ

Published On :

ಕ.ಪ್ರ. ವಾರ್ತೆ   ರಾಯಚೂರು   ಜ.3
ಜೆಸಿಐ ಸಂಸ್ಥೆಯು ಆರೋಗ್ಯ, ಶಿಕ್ಷಣ, ವ್ಯಾಪಾರ ಮತ್ತಿತರ ಕ್ಷೇತ್ರಗಳ ಪ್ರಗತಿಗೆ ಪೂರಕವಾಗಿ ಮತ್ತು ಸಮಾಜದ ಸಮಗ್ರ ಹಿತಕ್ಕಾಗಿ ನಿರಂತರ ಕಾರ್ಯಕ್ರಮ ಆಯೋಜಿಸುತ್ತದೆ ಎಂದ ಜೆಸಿಐ ವಕ್ತಾರ ಎನ್. ಮಧು, ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ನಗರದಲ್ಲಿ ಜ.4ರಂದು ಆಯೋಜಿಸಲಾಗಿದೆ ಎಂದು ತಿಳಿಸಿದರು.
ನಗರದಲ್ಲಿ ಶುಕ್ರವಾರ ಜೆಸಿಐನಿಂದ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ವರ್ಷ ಅಧಿಕಾರದಲ್ಲಿದ್ದ ಜೆಸಿಐ ಸಂಸ್ಥೆಯ ಪದಾಧಿಕಾರಿಗಳು ಅನೇಕ ರೀತಿಯಲ್ಲಿ ಸಮಾಜದ ಏಳಿಗೆಗೆ ಶ್ರಮಿಸಿದ್ದಾರೆ. 2014ನೇ ವರ್ಷಕ್ಕೆ ಹೊಸದಾಗಿ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಲಿದ್ದು, ಈ ಹಿನ್ನೆಲೆಯಲ್ಲಿ ಜ.4ರಂದು ಸಂಜೆ ಅಧಿಕಾರ ಪದಗ್ರಹಣ ಸಮಾರಂಭ ಆಯೋಜಿಸಲಾಗಿದೆ ಎಂದು ಹೇಳಿದರು.
ಸಮಾಜಮುಖಿ ಕಾರ್ಯಕ್ರಮ: ಅಧಿಕಾರ ಪದಗ್ರಹಣ ಸಮಾರಂಭದ ಮುಖ್ಯ ಅತಿಥಿಯಾಗಿ ಸಹಾಯಕ ಆಯುಕ್ತೆ ಮಂಜುಶ್ರೀ ಅವರು ಪಾಲ್ಗೊಳ್ಳಲಿದ್ದು, ಪಾರಸಮಲ್ ಬೊಹರಾ, ವಲಯ ಅಧ್ಯಕ್ಷ ಚಂದ್ರಶೇಖರ್, ಅನಿಲ್ ಮಾಲ್ಪನಿ, ರಮಾಕಾಂತ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.
ಸಮಾರಂಭದಲ್ಲಿ 2014ನೇ ಸಾಲಿಗೆ ನೂತನ ಜೆಸಿಐ ಸಂಸ್ಥೆಯ ಅಧ್ಯಕ್ಷರಾಗಿ ವಿನೀತ್ ಬೊಹರಾ ಮತ್ತು ತಂಡದವರು ಅಧಿಕಾರ ಸ್ವೀಕರಿಸಲಿದ್ದಾರೆಂದು ಹೇಳಿದ ಅವರು, ಮುಂದಿನ ವರ್ಷದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಅಂಗವಿಕಲರಿಗೆ ಉಚಿತ ತ್ರಿಚಕ್ರ ವಾಹನ ನೀಡಿಕೆ, ರಾಷ್ಟ್ರೀಯ ಮಟ್ಟದ ಪ್ರತಿಭಾ ಪುರಸ್ಕಾರ ವಿತರಣೆ, ಕಣ್ಣಿನ ಚಿಕಿತ್ಸೆ ಶಿಬಿರಗಳಿಗೆ ನೆರವಾಗುವುದು, ಬಡವರಿಗೆ ಬ್ಲಾಂಕೆಟ್ ವಿತರಣೆ ಸೇರಿದಂತೆ ವಿವಿಧ ಸಮಾಜಮುಖಿ ಕಾರ್ಯಕ್ರಮ ಆಯೋಜಿಸಲಾಗುತ್ತದೆ ಎಂದು ತಿಳಿಸಿದರು.
ಮತದಾರರಲ್ಲಿ ಜಾಗೃತಿ: ಗ್ರಾಮೀಣ ಭಾಗದಲ್ಲಿನ ನಿವಾಸಿಗಳ ಆರೋಗ್ಯದ ಕಾಳಜಿ, ಶೈಕ್ಷಣಿಕ ಕ್ಷೇತ್ರದ ಗುಣಮಟ್ಟ ಸುಧಾರಣೆ ನಿಟ್ಟಿನಲ್ಲಿ ಪೂರಕ ಕಾರ್ಯಕ್ರಮಗಳ ಆಯೋಜನೆ, ವ್ಯಾಪಾರ ವಹಿವಾಟಿನಲ್ಲಿ ನವಯುವಕರಿಗೆ ತರಬೇತಿ ಮತ್ತು ಸಲಹೆ ನೀಡಿಕೆ, ಪರಿಸರ ಸಂರಕ್ಷಣೆ ಕ್ರಮವಾಗಿ ಸಸಿಗಳ ನೆಡುವಿಕೆ, ಮತದಾನದ ಸಂದರ್ಭದಲ್ಲಿ ಮತದಾರರ ಜಾಗೃತಿ ಕಾರ್ಯಕ್ರಮಗಳನ್ನೂ ಆಯೋಜಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಜನವರಿಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಅವುಗಳಲ್ಲಿ ಗೋ ರಕ್ಷಣೆ ಜಾಗೃತಿ ಕಾರ್ಯಕ್ರಮ, ಜ.5ರಂದು ವ್ಹೀಲ್ ಚೇರ್ ವಿತರಣೆ, ಜ.7ರಂದು ಬಡವರಿಗೆ ಬೆಚ್ಚನೆಯ ಹೊದಿಕೆ ನೀಡಿಕೆ, ಜ.14ರಂದು ಸಂಕ್ರಾಂತಿ ಅಂಗವಾಗಿ ಗಾಳಿಪಟ ಹಾರಿಸುವ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಜ.16ರಂದು ಮಾಣಿಕಪ್ರಭು ಅಂಧ ಮಕ್ಕಳ ಶಾಲೆಯಲ್ಲಿ ಅಂಧ ಮಕ್ಕಳಿಗೆ ಶಾಲಾ ಬ್ಯಾಗ್ ವಿತರಣೆ ಜ.26ರಂದು ಗಣರಾಜ್ಯೋತ್ಸವ ದಿನಾಚರಣೆಯಂಥ ಕಾರ್ಯಕ್ರಮಗಳನ್ನು ವಿಶೇಷವಾಗಿ ಆಚರಿಸಲಾಗುತ್ತದೆ ಎಂದು ತಿಳಿಸಿದರು.
ನಿಕಟಪೂರ್ವ ಅಧ್ಯಕ್ಷ ರಮಾಕಾಂತ್, ನೂತನ ಅಧ್ಯಕ್ಷ ವಿನೀತ್ ಬೊಹರಾ, ಪ್ರವೀಣ ಕೊಠಾರಿ, ವಿನೋದ್, ವಿನೋದ್ ಧೋಕಾ, ವಿಕಾ ಮೂಥಾ ಸೇರಿ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.