ರಾಯಚೂರು

ಸದಾಶಿವ ಆಯೋಗ ವರದಿ ಜಾರಿಗೆ ವಿರೋಧ

Published On :

ಕ.ಪ್ರ. ವಾರ್ತೆ, ಲಿಂಗಸ್ಗೂರು, ಜ.5
ನ್ಯಾ. ಎ.ಜೆ. ಸದಾಶಿವ ಆಯೋಗ ವರದಿ ಅವೈಜ್ಞಾನಿಕವಾಗಿದ್ದು, ಶಾಸನ ಸಭೆಯಲ್ಲಿ ಅನುಷ್ಠಾನಗೊಳಿಸಬಾರದು ಎಂದು ಒತ್ತಾಯಿಸಿ ಸದಾಶಿವ ಆಯೋಗ ವಿರೋಧಿ ಒಕ್ಕೂಟದಿಂದ ಸಚಿವ ಡಾ. ಶರಣಪ್ರಕಾಶ ಪಾಟೀಲರಿಗೆ ಮನವಿ ಸಲ್ಲಿಸಲಾಯಿತು.
ಸರ್ಕಾರ ಸಂವಿಧಾನಬದ್ಧವಾಗಿ ಅನುಸೂಚಿತ ಜಾತಿಗಳಡಿ ಎಲ್ಲ ರಂಗಗಳಲ್ಲೂ ಹಿಂದುಳಿದ 101 ಜಾತಿಗಳನ್ನು ಪರಿಶಿಷ್ಟ ಜಾತಿಗಳೆಂದು ಗುರುತಿಸಿ ಮೂಲ ಸೌಲಭ್ಯ ಕಲ್ಪಿಸಲು ಶೇ 15 ರಷ್ಟು ಮೀಸಲಾತಿ ನೀಡಿ ಸಬಲೀಕರಣಗೊಳಿಸಲು ಅನುಕೂಲ ಕಲ್ಪಿಸಿದೆ. ಆದರೆ ಇತ್ತೀಚೆಗೆ ನ್ಯಾ. ಎ.ಜೆ. ಸದಾಶಿವ ಆಯೋಗದ ಮೂಲಕ ಮೀಸಲಾತಿ ವರ್ಗೀಕರಣಕ್ಕೆ ಆದೇಶಿಸಿದಂತೆ ಭೋವಿ, ತಾಂಡಾ, ಕೊರಮ, ಕೊರಚ, ಭಜಂತ್ರಿ ಸೇರಿದಂತೆ ಕಾಲೋನಿಗಳಿಗೆ ತೆರಳಿ ಕೂಲಂಕಷವಾಗಿ ಅಧ್ಯಯನ ನಡೆಸದೆ ಎಲ್ಲೋ ಕುಳಿತು ಕೆಲವರು ಕೊಟ್ಟ ಸಲಹೆಯಂತೆ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ.
99 ಜಾತಿಗಳಿಗೆ ಅನ್ಯಾಯ: ಇದರಿಂದ 101 ಪರಿಶಿಷ್ಟ ಜಾತಿಗಳಿಗೆ ನೀಡಿದ ಶೇ.15ರಷ್ಟು ಮೀಸಲಾತಿಯಲ್ಲಿ ಮಾದಿಗ, ಛಲವಾದಿ ಜನಾಂಗಕ್ಕೆ ಶೇ.11ರಷ್ಟು ಉಳಿದ ಜಾತಿಗಳಿಗೆ ಕೇವಲ ಶೇ.4ರಷ್ಟು ಮೀಸಲಾತಿ ನಿಗದಿಪಡಿಸಿ ಜಾರಿಗೊಳಿಸಲು ಆಯೋಗದ ವರದಿ ಹೇಳುತ್ತದೆ. ಇಂತಹ ತಾರತಮ್ಯದಿಂದ ಎರಡು ಜಾತಿಗಳವರು ಕಸಿದುಕೊಳ್ಳಲು ನಡೆಸಿದ ಹುನ್ನಾರವಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುವ ವಿಷಯವಾಗಿದೆ.
ಕಾರಣ ಅವೈಜ್ಞಾನಿಕತೆಯಿಂದ ಕೂಡಿದ ಹಾಗೂ 99 ಜಾತಿಗಳಿಗೆ ಅನ್ಯಾಯವಾಗುವಂತಹ ಸದಾಶಿವ ಆಯೋಗ ವರದಿ ಯಾವುದೇ ಕಾರಣಕ್ಕೆ ಶಾಸನ ಸಭೆಯಲ್ಲಿ ಅನುಷ್ಠಾನಗೊಳಿಸಬಾರದು. ಜಾರಿಗೊಳಿಸಿದರೆ ರಾಜ್ಯಾದ್ಯಂತ 99 ಜಾತಿಗಳಿಂದ ಬೃಹತ್ ಪ್ರತಿಭಟನೆ ನಡೆಸಬೇಕಾಗುತ್ತದೆಂದು ಮನವಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಒಕ್ಕೂಟದ ಮುಖಂಡರಾದ ಹುಲಗಪ್ಪ ಕಸಬಾಲಿಂಗಸ್ಗೂರು, ಶಿವಕುಮಾರ, ಭೀಮಣ್ಣ ಹಿರೇಮನಿ, ಗದ್ದೆಪ್ಪ ಪವಾರ, ಗುಂಡಪ್ಪ ಭಜಂತ್ರಿ, ಹುಲಗಪ್ಪ ಪೈದೊಡ್ಡಿ, ಹನುಮಂತ ಕನ್ನಾಳ, ಗದ್ದೆಪ್ಪ ಮರಗಂಟನಾಳ, ಹನುಮಂತಪ್ಪ ಮದರಿ, ಹನುಮಂತ ಇಲಕಲ್, ಬಸವರಾಜ ನಿಲೋಗಲ್, ಹನುಮಂತ ಗೆಜ್ಜಲಗಟ್ಟಾ, ಭೀಮರಾಯ ರೋಡಲಬಂಡಾ ಸೇರಿದಂದೆ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.