ರಾಯಚೂರು

26ರಂದು ಡಾ. ಅಂಬೇಡ್ಕರ್ ಪಕ್ಷ ಉದ್ಘಾಟನೆ

Published On :

ಕ.ಪ್ರ. ವಾರ್ತೆ    ರಾಯಚೂರು    ಜ.16
ನ್ಯಾಯಮೂರ್ತಿ ಏ.ಜೆ. ಸದಾಶಿವ ಆಯೋಗ ವರದಿ ಶಿಫಾರಸ್ಸಿನ ಪರಿಶಿಷ್ಟ ಜಾತಿ ಒಳಮೀಸಲಾತಿ ಅಸಂವಿಧಾನಿಕ ಎಂದು ಡಾ. ಅಂಬೇಡ್ಕರ್ ಪೀಪಲ್ಸ್ ಪಾರ್ಟಿ ರಾಜ್ಯಾಧ್ಯಕ್ಷ ಮಹೇಂದ್ರ ಕುಮಾರ ಮಿತ್ರ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ, ದೇಶಕ್ಕೆ ಸ್ವಾತಂತ್ರ್ಯ ದೊರತ ನಂತರ ಹೊಸ ಸಂವಿಧಾನ ಬರೆದು ಮನು ಸಂವಿಧಾನದ ಮೇಲ್ಜಾತಿಗಳು ಮತ್ತು ಅಸ್ಪೃಶ್ಯ ಜಾತಿಗಳು ಒಳಗೊಂಡಿದ್ದವು. ಡಾ. ಅಂಬೇಡ್ಕರ್  ಬರೆದ ಸಂವಿಧಾನದಲ್ಲಿ ಮನು ಸಂವಿಧಾನದ ಕೆಲ ಅಂಶಗಳು ಮತ್ತು 1935ರ ಪ್ರಕಾರ ಅಸ್ಪೃಶ್ಯರ ರಾಜಕೀಯ, ಶೈಕ್ಷಣಿಕ, ಉದ್ಯೋಗ, ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ರಂಗಗಳಲ್ಲಿ ಮೀಸಲಾತಿ ಪದ್ಧತಿ ಮಾಡುವ ಮೂಲಕ ಅಸ್ಪೃಶ್ಯರನ್ನು ಸಮಾಜದ ಮುಖ್ಯವಾಹಿನಿಗೆ ಸೇರಲು ಭಾರತ ಸಂವಿಧಾನದ ಪ್ರಸ್ತಾವನೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜ್ಯಾಡಳಿತದ ಬಗ್ಗೆ ಬರೆದ ಸಂವಿಧಾನ, ಮನು ಸಂವಿಧಾನ ರದ್ಧಾಗಿ ಹೊಸ ಸಂವಿಧಾನ ಜ.26, 1950 ರಂದು ಜಾರಿಗೆ ಬಂದ ಪ್ರಯುಕ್ತ ಗಣರಾಜ್ಯವನ್ನಾಗಿ ಆಚರಿಸಲಾಗುತ್ತಿದೆ.
ಸಂವಿಧಾನದ 341(1) ಹಾಗೂ 15(4) ರನ್ವಯ ಪರಿಶಿಷ್ಟ ಜಾತಿ ಎನ್ನುವುದು ಏಕ ಮೀಸಲಾತಿ ಎನ್ನುವ ಉಲ್ಲೇಖಿತವಾಗಿದೆ. ಯಾವುದೇ ಕಾರಣಕ್ಕೂ ಪರಿಶಿಷ್ಟ ಜಾತಿ ಮೀಸಲಾತಿಯನ್ನು ಒಳ ಮೀಸಲಾತಿಗೆ ಅನ್ವಯಿಸಲು ಸಾಧ್ಯವಿಲ್ಲ. ನ್ಯಾ. ಸದಾಶಿವ ಆಯೋಗದ ಶಿಫಾರಸ್ಸು ಅಸಂವಿಧಾನಿಕವಾಗಿದೆ. ಆಂಧ್ರ ಪ್ರದೇಶದಲ್ಲಿ ಒಳ ಮೀಸಲಾತಿ ಜಾರಿಗೊಳಿಸಲಾಗಿದ್ದು, ಸುಪ್ರಿಂ ಕೋರ್ಟ್ ಇದಕ್ಕೆ ಸಂಬಂಧಿಸಿ ಸ್ಪಷ್ಟ ಸಂವಿಧಾನಾತ್ಮಕ ತೀರ್ಪು ನೀಡಿದ ಹಿನ್ನೆಲೆಯಲ್ಲಿ ಅಲ್ಲಿನ ಸರ್ಕಾರ ಒಳ ಮೀಸಲಾತಿ ಹಿಂದಕ್ಕೆ ಪಡೆಯಿತು. ನಂತರ ಪಂಜಾಬ್ ಜಾರಿಯಲ್ಲಿದ್ದ ಒಳ ಮೀಸಲಾತಿ ವ್ಯವಸ್ಥೆಯೂ ರದ್ಧಾಗಿದೆ. ತಮಿಳುನಾಡಿನಲ್ಲಿ ಪ್ರಸ್ತುತ ಪರಿಶಿಷ್ಟ ಜಾತಿಗೆ ಶೇ.15 ಮೀಸಲಾತಿಯೊಂದಿಗೆ ಆರ್ಥಿಕವಾಗಿ ಅತ್ಯಂತ ದುರ್ಬಲರಾದವರಿಗೆ ಶೇ.3 ರಷ್ಟು ಹೆಚ್ಚುವರಿ ಮೀಸಲಾತಿ ನೀಡುವ ಮೂಲಕ ಮೀಸಲಾತಿ ಪ್ರಮಾಣ ಶೇ.18 ರಷ್ಟು ನೀಡಲಾಗಿದೆ. ಅಂದರೆ ತಮಿಳುನಾಡಿನಲ್ಲೂ ಕೂಡ ಒಳಮೀಸಲಾತಿ ಇರುವುದಿಲ್ಲವೆಂದು ಸ್ಪಷ್ಟಪಡಿಸಿದರು.
ಪರಿಶಿಷ್ಟ ಜಾತಿ ಜನಾಂಗದವರು ಸಂವಿಧಾನದ ಸೌಲತ್ತು ಪಡೆದು ಪ್ರಗತಿ ಸಾಧಿಸಲು ರಾಜ್ಯಾದ್ಯಂತ ಅಸ್ಪೃಶ್ಯ ಜನಾಂಗಕ್ಕೆ ರಾಜಕೀಯ ಜಾಗೃತಿ ಮೂಡಿಸುವ ಉದ್ದೇಶದಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ರಂಗಮಂದಿರದಲ್ಲಿ ಜ.26 ರಂದು ಡಾ. ಅಂಬೇಡ್ಕರ್ ಪೀಪಲ್ಸ್ ಪಾರ್ಟಿ ಎಂಬ ರಾಜಕೀಯ ಪಕ್ಷ ಉದ್ಘಾಟನಾ ಸಮಾರಂಭ ಏರ್ಪಡಿಸಲಾಗಿದೆ. ಚುನಾವಣಾ ಆಯೋಗದಿಂದ ಪಕ್ಷದ ಮಾನ್ಯತೆಗೆ ಫೆ.18 ರಂದು 2 ನೇ ವಿಚಾರಣೆ ನಡೆಯಲಿದ್ದು, ಪಕ್ಷಕ್ಕೆ ಅಧಿಕೃತ ಮಾನ್ಯತೆ ದೊರೆಯಲಿದೆ. ಬರುವ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳು ಸ್ಪರ್ಧಿಸುವ ಬಗ್ಗೆ ತೀರ್ಮಾನಿಸಲಾಗುವುದೆಂದು ತಿಳಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.