ರಾಯಚೂರು

ಜನರ ನಿಯಂತ್ರಣಕ್ಕೆ ಪೊಲೀಸರ ಹರಸಾಹಸ

Published On :

ಆಳಂದ: ಬಂಡೆ ಅವರ ಪಾರ್ಥಿವ ಶರೀರವನ್ನು ಗುರುವಾರ ಗುಲ್ಬರ್ಗದಿಂದ ಖಜೂರಿಗೆ ಆ್ಯಂಬ್ಯುಲೆನ್ಸ್ ಮೂಲಕ ಸಾಗಿಸುವ ಮಾರ್ಗ ಮಧ್ಯದ ಆಳಂದಕ್ಕೆ ಆಗಮಿಸಿದ್ದಾಗ ಬೃಹತ್ ಸಂಖ್ಯೆಯಲ್ಲಿ ಸೇರಿದ ನಾಗರಿಕರು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ನಮಿಸಿದರು. ಆಳಂದ ಪಟ್ಟಣದಿಂದ 15 ಕಿ.ಮೀ. ಅಂತರದಲ್ಲಿರುವ ಖಜೂರಿ ಹೊರವಲಯದ ಬಂಡೆ ಅವರ ತೋಟದಲ್ಲಿ ಅಂತ್ಯಸಂಸ್ಕಾರಕ್ಕೆ ಭಾರೀ ಸಿದ್ಧತೆ ಮಾಡಿಕೊಳ್ಳಲಾಗಿತು. ಬಸ್ ನಿಲ್ದಾಣ ಮುಂಭಾಗದಲ್ಲಿ ಬಂಡೆ ಅವರ ಭಾವಚಿತ್ರಕ್ಕೆ ಶ್ರದ್ಧಾಂಜಲಿ ಅರ್ಪಿಸಿದರು. ಈ ಸಂದರ್ಭದಲ್ಲಿ ಭಾರೀ ಪ್ರಮಾಣದಲ್ಲಿ ನಿಯೋಜಿಸಲಾದ ಪೊಲೀಸ್ ಸಿಬ್ಬಂದಿ ಜನರನ್ನು ಚದುರಿಸಲು ಕೆಲಕಾಲ ಪರದಾಡಬೇಕಾಯಿತು. ಬಸವ ಕೇಂದ್ರದ ಅಧ್ಯಕ್ಷ ಶ್ರೀಮಂತ ಕಾರಬಾರಿ, ಇಕ್ಬಾಲ ಬಿಲಗುಂದಿ, ಬಂಜಾರ ತರುಣ ಸಂಘದ ಅಧ್ಯಕ್ಷ ಶಿವಾಜಿ ರಾಠೋಡ, ಶ್ರೀಶೈಲ ಬಂಗರಗಿ, ನ್ಯಾ. ಬಾಬಾಸಾಹೇಬ ಪಾಟೀಲ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲಣ್ಣಾ ನಾಗೂರೆ, ಮಾಜಿ ಅಧ್ಯಕ್ಷ ಮೋಹನಗೌಡ ಪಾಟೀಲ, ಪುರಸಭೆ ಸದಸ್ಯ ರಾಮ ಹತ್ತರಕಿ, ಸಿದ್ಧಣ್ಣ ಝಳಕಿ, ತಡಕಲ್‌ದ ಸಿ.ಜಿ.ಕಲಶೆಟ್ಟಿ, ಪಂಡಿತ ಬಳಬಟ್ಟಿ, ಡಾ. ಎಸ್.ಎಂ. ಹಿರೇಮಠ, ಮಡ್ಡೆ, ಪಂಡಿತ ಶೇರಿಕಾರ ಭಾಗವಹಿಸಿದ್ದರು. ಈ ಮಧ್ಯೆ ಸಿಪಿಐ ಕರಿಯಪ್ಪ ಹಟ್ಟಿ, ಮಾಲಗತಿ ಒಳಗೊಂಡ ನಿಯೋಜಿತ ಪೊಲೀಸ್ ಸಿಬ್ಬಂದಿ ತಂಡವು ಸಾರ್ನಜನಿಕರ ಗುಂಪುಗಾರಿಕೆಯನ್ನು ನಿಯಂತ್ರಿಸಲು ಹರಸಹಾಸ ಪಡಬೇಕಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.