ಶಾಸಕ ಪಾಟೀಲ್ರಿಗೆ ಜನರಿಂದ ಘೇರಾವ್
ಆಳಂದ: ಹುತಾತ್ಮ ಪಿಎಸ್ಐ ಮಲ್ಲಿಕಾರ್ಜುನ ಬಂಡೆಯವರ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಗುರುವಾರ ತಾಲೂಕಿನ ಖಜೂರಿಗೆ ತೆರಳಿದ ಶಾಸಕ ಬಿ.ಆರ್. ಪಾಟೀಲ್ಗೆ ಉದ್ರಿಕ್ತ ಜನರ ಗುಂಪು ಘೇರಾವ್ ಹಾಕಿ ಪ್ರತಿಭಟಿಸಿತು.
ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಬಂಡೆ ಗಾಯಗೊಂಡಾಗ ಹಾಗೂ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ಗ್ರಾಮಕ್ಕೆ ಬಂದು ಅವರ ಕುಟುಂಬಕ್ಕೆ ಹಾಗೂ ಗ್ರಾಮಸ್ಥರಿಗೆ ಭೇಟಿ ನೀಡಿ, ಧೈರ್ಯ, ಸಾಂತ್ವನ ಹೇಳಿಲಿಲ್ಲ ಎಂದು ಆರೋಪಿಸಿ ಬಿ.ಆರ್. ಪಾಟೀಲ್ ಅವರ ವಿರುದ್ಧ ಗ್ರಾಮದ ಕೆಲವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಆಸ್ಪತ್ರೆಗೆ ತೆರಳಿದ್ದೆ: ಆದಾಗ್ಯೂ, ಶಾಸಕ ಬಿ.ಆರ್. ಪಾಟೀಲ್ ಮಾತನಾಡಿ, ಪಿಎಸ್ಐ ಬಂಡೆಯವರನ್ನು ನಾನೇ ಖುದ್ದಾಗಿ ಹೈದ್ರಾಬಾದ್ಗೆ ತೆರಳಿ ಅವರ ಆರೋಗ್ಯ ವಿಚಾರಿಸಿದೆ. ಚಿಕಿತ್ಸೆಗಾಗಿ ಸೇನಾ ವೈದ್ಯಾಧಿಕಾರಿಗಳ ಸೇವೆಯನ್ನೂ ಬಳಸಿಕೊಳ್ಳಲು ಆಗ್ರಹಿಸಿದೆ. ಅಷ್ಟೇ ಅಲ್ಲದೇ ಇಂಗ್ಲೆಂಡಿಗೆ ಚಿಕಿತ್ಸೆ ಕೊಡಿಸಲು ಸರ್ಕಾರಕ್ಕೆ ಒತ್ತಾಯಿಸಿದೆ ಎಂದು ವಿವರಿಸಿದರು. ಬಂಡೆಯವರ ಸಹೋದರನ ದುಃಖ ತಡೆಯಲು ಪ್ರಯತ್ನಿಸಿದ ಬಿ.ಆರ್. ಪಾಟೀಲ್ ಅವರು ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಪಿಎಸ್ಐ ಬಂಡೆಯವರ ನಿಧನವು ನಮಗೆ ಆಘಾತ ತಂದಿದೆ. ವೀರ, ಶೂರ ಮತ್ತೊಮ್ಮೆ ಹುಟ್ಟಿ ಬರಲಿ ಎಂದು ಬೇಡಿಕೊಳ್ಳುವುದಾಗಿಯೂ ಅವರು ಹೇಳಿದರು. ಬಂಡೆಗೆ ಶೌರ್ಯ ಪ್ರಶಸ್ತಿಯನ್ನು ಕೊಟ್ಟು ಗೌರವಿಸುವಂತೆ, ಅವರ ಪುತ್ಥಳಿಯನ್ನು ಸ್ಥಾಪಿಸುವಂತೆಯೂ ಪಾಟೀಲ್ ಆಗ್ರಹಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

