ರಾಯಚೂರು

ಗ್ರಾ.ಪಂ. ವಿವಿಧ ಕಾಮಗಾರಿಗಳ ಪರಿಶೀಲನೆ

Published On :

ಮುದಗಲ್: ಸಮೀಪದ ದೇಸಾಯಿ ಭೋಗಾಪುರ, ತಲೇಖಾನ, ಹಡಗಲಿ, ಹಡಗಲಿ ತಾಂಡಾಗಳಿಗೆ ಪಂಚಾಯತ್ ರಾಜ್ ಎಂಜನಿಯರಿಂಗ್ ಇಲಾಖೆಯ ಕಿರಿಯ ಅಭಿಯಂತರ(ಜೆಇ) ಸತ್ಯದೇವ ನಾಯಕ ಶನಿವಾರ ಭೇಟಿ ನೀಡಿ ನಾನಾ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು.
ಜಿ.ಪಂ.ನ ರು. 3 ಲಕ್ಷ ಅನುದಾನದಲ್ಲಿ ಛತ್ತರ ಗ್ರಾಮದಿಂದ ದೇಸಾಯಿ ಭೋಗಾಪುರ ಡಾಂಬರ್ ರಸ್ತೆ ದುರಸ್ತಿ, ರು. 1.80 ಲಕ್ಷ ವೆಚ್ಚದಲ್ಲಿ ದೇಸಾಯಿ ಭೋಗಾಪುರದಿಂದ ವೇಣ್ಯಪ್ಪನ ತಾಂಡಾದವರೆಗಿನ ರಸ್ತೆ ಅಭಿವೃದ್ಧಿ ಹಾಗೂ ಗ್ರಾಮಸ್ವರಾಜ್ ಯೋಜನೆಯಡಿ  ರು. 5 ಲಕ್ಷದಲ್ಲಿ ಹಡಗಲಿ ಮತ್ತು ತಲೇಖಾನ ವಾಣಿಜ್ಯ ಮಳಿಗೆ ನಿರ್ಮಾಣ, 13ನೇ ಹಣಕಾಸು ಯೋಜನೆಯಡಿ ರು. 7.50 ಲಕ್ಷ ವೆಚ್ಚದಲ್ಲಿ ಶಾಲಾ ಕಾಂಪೌಂಡ್, ಬಿಆರ್‌ಜಿಎಫ್ ಯೋಜನೆಯಡಿ ರು. 4.50 ಲಕ್ಷ ವೆಚ್ಚದಲ್ಲಿ ಅಂಗನವಾಡಿ ಸೇರಿದಂತೆ ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಗಳ ಗುಣಮಟ್ಟ ಹಾಗೂ ನಿವೇಶನ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಕಾಮಗಾರಿ ನಿರ್ವಹಣೆ ಮಾಡುವ ಗುತ್ತಿಗೆದಾರರಿಗೆ ಗುಣಮಟ್ಟತೆ ಕಾಯ್ದುಕೊಳ್ಳಲು ತಾಕೀತು ಮಾಡಿದರು. ಗ್ರಾ.ಪಂ. ಕಾರ್ಯದರ್ಶಿ ಜೆ.ಮಲ್ಲಿಕಾರ್ಜುನ ಸಾಹುಕಾರ, ಸಹಾಯಕ ಎಂಜನಿಯರ್ ಮಹೇಂದರ್, ಗ್ರಾ.ಪಂ. ಸದಸ್ಯರಾದ ಹನುಮಂತ ಗೊಲ್ಲರ, ಅಮರೇಶ ವಿಟ್ಲಾಪೂರ ಹಾಗೂ ಪೂರಪ್ಪ ನಾಯ್ಕ, ಶಂಕ್ರಪ್ಪ, ರಾಮು ಸೇರಿದಂತೆ ಅನೇಕರು ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.