ರಾಯಚೂರು

ಪ.ಪಂ. ಮುಖ್ಯಾಧಿಕಾರಿಗೆ ಮುತ್ತಿಗೆ

Published On :

ಮುದಗಲ್: ಪಟ್ಟಣದಲ್ಲಿನ ತಾರ್ ರ್ರಸ್ತೆಗಳು ಮಾಯವಾಗಿ ಮಣ್ಣು ಮಿಶ್ರಿತಗೊಂಡ ರಸ್ತೆಗಳಿಂದ ಧೂಳಿನ ಪ್ರಮಾಣ ಹೆಚ್ಚಾಗಿ ಜನಸಾಮಾನ್ಯರಿಗೆ, ವ್ಯಾಪಾರಸ್ಥರಿಗೆ ತೊಂದರೆಯಾಗಿರುವುದನ್ನು ವಿರೋಧಿಸಿ ಪಟ್ಟಣದ ವ್ಯಾಪಾರಸ್ಥರು ಕೆಲ ದಿನಗಳಂದಷ್ಟೇ ಪ.ಪಂ.ಮುಖ್ಯಾಧಿಕಾರಿ ಎಂ. ವಿಜಯಲಕ್ಷ್ಮೀ ಅವರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಕಳೆ ವಾರ ಪ್ರತಿಭಟನೆ ನಡೆಸಿದರು ಪ್ರಯೋಜನವಾಗದ ಹಿನೆಲೆಯಲ್ಲಿ ಕಚೇರಿ ಆರಂಭವಾಗುತ್ತಿದ್ದಂತೆ ವ್ಯಾಪಾರಸ್ಥರು ಪಪಂಗೆ ಮುತ್ತಿಗೆ ಹಾಕಿ ಟ್ಯಾಂಕರರ್ನೀರು ಪೂರೈಸಲೇಬೆಕೆಂದು ಪಟ್ಟು ಹಿಡಿದಾಗ ಪ್ರತಿಭಟನೆಗೆ ಮಣಿದ ಮುಖ್ಯಾಧಿಕಾರಿಗಳು ಟ್ಯಾಂಕರ್ ನೀರು ಪೂರೈಸಿದ ಘಟನೆ ಜರುಗಿದೆ.
ಪ.ಪಂ.ಗೆ ಸರಕಾರಗಳಿಂದ ಕೋಟಿ, ಕೋಟಿ ಅನುದಾನ ಹರಿದು ಬಂದರು ಪಟ್ಟಣದ ರಸ್ತೆಗಳು ಅಭಿವೃದ್ದಿಯಾಗಿಲ್ಲ. ಪೊಲೀಸ್ ಠಾಣೆಯಿಂದ ಮಸ್ಕಿ ಕ್ರಾಸ್‌ಗೆ ಸಂಪರ್ಕ ಕಲ್ಪಿಸುವ ರಸ್ತೆ, ಚಾಚಡಿಯಿಂದ ಹಳೆಪೇಟೆಗೆ ಹೋಗುವ ರಸ್ತೆ, ಗಣೇಶ ಕೇಫೆ ರಸ್ತೆಗಳು ಸೇರಿದಂತೆ ಪಟ್ಟಣದ ಹಲವು ರಸ್ತೆಗಳಲ್ಲಿ ಡಾಂಬರ ಮಾಯವಾಗಿ ಮಣ್ಣು ತುಂಬಿಹೋಗಿವೆ. ಧೂಳಿನಿಂದ ರಕ್ಷಿಸುವಂತೆ ವ್ಯಾಪಾರಸ್ಥರು ಮನವಿ ಮಾಡಿದರೂ ಮೇಡಂ ಸಮಸ್ಯಗೆ ಸ್ಪಂದಿಸಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.  ಟ್ಯಾಂಕರ್ ನೀರು ಪೂರೈಸಿದ ನಂತರವೇ ವ್ಯಾಪಾರಸ್ಥರು ಪ್ರತಿಭಟನೆಯನ್ನು ಕೈಬಿಟ್ಟರು. ಕೊನೆಗೂ ಪ್ರತಿಭಟನೆಗೆ ಪ.ಪಂ. ಮುಖ್ಯಾಧಿಕಾರಿ ಮಣಿದು ನಾಗರೀಕರ ಸಮಸ್ಯಗೆ ಸ್ಪಂದಿಸಿದರು. ಈ ಸಂದರ್ಭದಲ್ಲಿ ವ್ಯಾಪಾರಸ್ಥರಾದ ಮಲ್ಲಯ್ಯ ಜೀಡಿ, ಶ್ರೀಧರ ಜೀಡಿ, ಸಂಜೀವ್ ಸೇಠ, ರಜ್ಜಬ್ ಅಲಿ, ಕರಿಯಪ್ಪ ಕವಡಿಮಟ್ಟಿ, ಪ್ರಕಾಶ ಪಾನಗಂಟಿ, ಸೇರಿದಂತೆ ನೂರಾರು ವ್ಯಾಪಾರಸ್ಥರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.