ಜಿಲ್ಲೆಯ ವಿವಿಧೆಡೆ ಗಣರಾಜ್ಯೋತ್ಸವ
ರಾಯಚೂರು: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಭಾನುವಾರ ಗಣರಾಜ್ಯೋತ್ಸವ ಸಂದರ್ಭ ರಾಷ್ಟ್ರ ಧ್ವಜಾರೋಹಣ ಸಮಾರಂಭ ಆಯೋಜಿಸಲಾಗಿತ್ತು.
ನಗರದ ಜಿಲ್ಲಾ ಲಘು ಮೋಟಾರ್ ವಾಹನ ಚಾಲಕರ ಕ್ಷೇಮಾಭಿವೃದ್ಧಿ ಸಂಘದ ಕಚೇರಿಯಲ್ಲಿ ಆಯೋಜಿಸಿದ್ದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಬಿಜೆಪಿ ಮುಖಂಡ ತ್ರಿವಿಕ್ರಮ್ ಜೋಷಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುವತ್ತ ಎಲ್ಲರೂ ಒಗ್ಗೂಡಿ ಮುಂದುವರಿಯಬೇಕಿದೆ ಎಂದು ಕರೆ ನೀಡಿದರು.
ಈ ವೇಳೆ ಸಂಘದಿಂದ ನೇತಾಜಿ ನಗರದ ಶಾಲೆಯ ಬೋಧಕರು ಮತ್ತು ವಿದ್ಯಾರ್ಥಿಗಳಿಗೆ ಗಣರಾಜ್ಯೋತ್ಸವ ಅಂಗವಾಗಿ ಸಿಹಿ ಹಂಚಲಾಯಿತು. ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಎಂ.ಡಿ. ಹನೀಫ್ ವಹಿಸಿದ್ದರು.
ಜಯಕರ್ನಾಟಕ: ನಗರದ ಮಾವಿನಕೆರೆ ಪ್ರದೇಶದಲ್ಲಿ ಜಯ ಕರ್ನಾಟಕ ಸಂಘಟನೆಯಿಂದ ಗಣರಾಜ್ಯೋತ್ಸವ ಆಚರಿಸಲಾಯಿತು. ಜಿಲ್ಲಾ ಸಂಘಟನೆ ಅಧ್ಯಕ್ಷ ಶಿವುಕುಮಾರ ಯಾದವ್ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಈ ಸಂದರ್ಭ ಸಂಘಟನೆಯ ಪ್ರಮುಖರಾದ ರವಿಕುಮಾರ್ ಬಿಂದಲಬಾವಿ, ಮಹಾದೇವ ಯಾದವ್, ಜಾಫರ್ ಷರೀಫ್ ಸೇರಿ ಅನೇಕರಿದ್ದರು.
ವೀರಶೈವ ವಿವಿಧೋದ್ದೇಶ ನಿಯಮಿತ: ನಗರದ ವೀರಶೈವ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತದಿಂದ ಆಯೋಜಿಸಿದ್ದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಸಂಘದ ಅಧ್ಯಕ್ಷ ಪಿ.ಮಲ್ಲಣ್ಣ ರಾಷ್ಟ್ರಪಿತ ಮಹಾತ್ಮಗಾಂಧಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಸಹಕಾರಿಯ ಹಿರಿಯ ನಿರ್ದೇಶಕ ಶಂಬಣ್ಣ ಪಾಟೀಲ್, ಮಾಣಿಕರೆಡ್ಡಿ, ಬಸವಲಿಂಗಪ್ಪ, ಶರಣಬಸಪ್ಪ, ಬಿ.ಎಸ್. ಸುರಗಿಮಠ ಸೇರಿ ಅನೇಕರಿದ್ದರು.
ನಿರಾಶ್ರಿತರ ಪರಿಹಾರ ಕೇಂದ್ರ: ನಗರದ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಗಣರಾಜ್ಯೋತ್ಸವ ಸಮಾರಂಭ ಆಯೋಜಿಸಲಾಗಿತ್ತು. ಸಮಾರಂಭದಲ್ಲಿ ಇಲಾಖೆ ಅಧಿಕಾರಿ ಎಸ್.ಇ.ಮಹದೇವಯ್ಯ ಧ್ವಜಾರೋಹಣ ನೆರವೇರಿಸಿದರು. ನಿರಾಶ್ರಿತರ ಕೇಂದ್ರದ ಅಧೀಕ್ಷಕ ಕೆ.ಪಿ. ಚಿನ್ನಪಾಲಯ್ಯ, ಜುಮಲಪ್ಪ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ಸುರಕ್ಷಾ ಸಂಸ್ಥೆಯ ಅಧ್ಯಕ್ಷ ಪವನಕಿಶೋರ್ ಪಾಟೀಲ್, ಮಧುಸೂದನ್ ಆರ್ಯ, ರಾಜುಗೌಡ ಮತ್ತಿತರರು ಇದ್ದರು.
ನಗರ ಬಿಜೆಪಿ ಕಚೇರಿ: ಭಾರತೀಯ ಜನತಾ ಪಕ್ಷದ ನಗರ ಘಟಕದಿಂದ ಗಣರಾಜ್ಯೋತ್ಸವ ಸಮಾರಂಭವನ್ನು ನಗರ ಘಟಕದ ಬಿಜೆಪಿ ಕಚೇರಿಯಲ್ಲಿ ಆಯೋಜಿಸಲಾಗಿತ್ತು. ನಗರದ ಸತ್ಯನಾಥ ಕಾಲನಿಯಲ್ಲಿರುವ ಭಾರತೀಯ ಜನತಾ ಪಕ್ಷ ನಗರ ಕಾರ್ಯಾಲಯದಲ್ಲಿ ಧ್ವಜಾರೋಣವನ್ನು ನೆರವೇರಿಸಲಾಯಿತು. ಈ ಸಂದರ್ಭ ಜಿಲ್ಲಾ ಹಾಗೂ ನಗರ ಪ್ರಭಾರಿ ತ್ರಿವಿಕ್ರಮ್ ಜೊಷಿ, ನರಸಪ್ಪ ಎಕ್ಲಾಸಪೂರ, ಅರ್.ತಿಮ್ಮಯ್ಯ, ಅಂಜನೇಯ ಎಕ್ಲಾಸಪೂರ, ಬಂಡೇಶ ವಲ್ಕಂದಿನ್ನಿ, ರಮಾನಂದ ಯಾದವ್, ಬಂಗಿನರಸರೇಡ್ಡಿ, ರಾಮು ಕಡಗೋಳ, ವಿ.ಗೋವಿಂದ, ರಮೇಶ ಗುರುಮಿಟ್ಕಲ್, ಚಂದ್ರು,ಪರುಶರಾಮ ವಕೀಲರು,ನಾರಾಯಣರಾವ ಪೂರತಿಪ್ಲಿ, ಮಾಧ್ಯಮ ಕಾರ್ಯದರ್ಶಿ ಅಶ್ವಥ್ ರಾಜಪುರೋಹಿತ್ ಇದ್ದರು.
ಫೆಡರಲ್ ಪಬ್ಲಿಕ್ ಸ್ಕೂಲ್: ನಗರದ ಫೆಡರಲ್ ಪಬ್ಲಿಕ್ ಸ್ಕೂಲ್ನಲ್ಲಿ ಭಾನುವಾರ ಗಣರಾಜ್ಯೋತ್ಸವ ಸಂದರ್ಭ ಫೆಡರಲ್ ಎಜುಕೇಷನ್ ಮತ್ತು ವೆಲ್ಫೇರ್ ಟ್ರಸ್ಟ್ನಿಂದ ಆಯೋಜಿಸಿದ್ದ ಸಮಾರಂಭದ ಅಧ್ಯಕ್ಷತೆ ವಹಿಸಿ ಮಹ್ಮದ್ ಅಬ್ದುಲ್ ಹೈ ಫೈರೋಜ್ ಮಾತನಾಡಿದರು. ಫೆಡರಲ್ ಡಿಇಡಿ ಕಾಲೇಜಿನ ಪ್ರಾಚಾರ್ಯ ಕೆ.ಸತ್ಯನಾರಾಯಣ ಮಾತನಾಡಿದರು. ಫೆಡರಲ್ ಪಿಯು ಕಾಲೇಜಿನ ಪ್ರಾಚಾರ್ಯ ಮಹ್ಮದ್ ಮುಜಿಬುರ್ ರೆಹಮಾನ್, ಜಾಫರ್ ಅಲಿಖಾನ್ ಸೇರಿ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

