'ಸರ್ದಾರ್ ಪಟೇಲರ ಛಲ ಮೈಗೂಡಿಸಿಕೊಳ್ಳಿ'
ಸಿಂಧನೂರು: ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅನೇಕರು ಪ್ರಾಣ ತ್ಯಾಗ ಮಾಡಿದರು. ಅವರಲ್ಲಿ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯಿ ಪಟೇಲ್ರೂ ಒಬ್ಬರು. ಅವರ ದೃಢಮನಸ್ಸು, ಕೆಚ್ಚೆದೆಯ ಹೋರಾಟ ಎಲ್ಲರಲ್ಲೂ ಬರಬೇಕೆಂದು ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ ಹೇಳಿದರು.
ನಗರದ ಕಮ್ಮವಾರಿ ಭವನದಲ್ಲಿ ಮಂಗಳವಾರ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ನಗರ ವ್ಯಾಪ್ತಿಯ ಲೋಹ ಸಂಗ್ರಹಣ ಅಭಿಯಾನವನ್ನು ಉದ್ದೇಶಿಸಿ ಮಾತನಾಡಿ, ದೇಶದಲ್ಲಿ ಸುಮಾರು 563 ರಾಜ ಮಹಾರಾಜರು ಆಳ್ವಿಕೆ ನಡೆಸುತ್ತಿದ್ದಾಗ ಅದರಲ್ಲೂ ವಿಶೇಷವಾಗಿ ಹೈ-ಕ ಭಾಗವನ್ನು ನಿಜಾಮರು ತಮ್ಮ ಕಪಿಮುಷ್ಟಿಯಲ್ಲಿ ಇಟ್ಟುಕೊಂಡು ಸ್ವಾತಂತ್ರ್ಯ ನೀಡುವಲ್ಲಿ 13 ತಿಂಗಳು ಸತಾಯಿಸಿದಾಗ ಅಂತಿಮವಾಗಿ ಪಟೇಲರ ಗಟ್ಟಿಯಾದ ನಿಲುವಿನಿಂದ ಸೆ.17, 1948ರಂದು ಸ್ವಾತಂತ್ರ್ಯ ಲಭಿಸಿತು. ಪಟೇಲರಿಗೆ ಪ್ರಧಾನಿಯಾಗುವ ಎಲ್ಲ ಅವಕಾಶಗಳಿದ್ದರೂ ಅವರು ನೆಹರು ಅವರಿಗೆ ಪ್ರಧಾನಿ ಹುದ್ದೆ ಬಿಟ್ಟುಕೊಟ್ಟು ಗೃಹ ಮಂತ್ರಿಗಳಾಗಿ ಕಾರ್ಯನಿರ್ವಹಿಸಿದ್ದು ಅವರ ದೊಡ್ಡತನಕ್ಕೆ ಸಾಕ್ಷಿಯಾಗಿದೆ ಎಂದು ಬಣ್ಣಿಸಿದರು.
ವಿಶ್ವದಲ್ಲೇ ಎತ್ತರದ ಮೂರ್ತಿ: ಮುಖಂಡ ಕೊಲ್ಲಾ ಶೇಷಗಿರಿರಾವ್ ಮಾತನಾಡಿ, ಪಟೇಲರ ಮೂರ್ತಿ ಪ್ರತಿಷ್ಠಾಪನೆಗೆ ದೇಶಾದ್ಯಂತ ಲೋಹವನ್ನು ಸಂಗ್ರಹಿಸಲಾಗುತ್ತಿದೆ. ಚೈನಾದಲ್ಲಿ 153 ಮೀ. ಎತ್ತರದ ಬುದ್ಧನ ಮೂರ್ತಿಯನ್ನು ಚೀನಾದಲ್ಲಿ ಪ್ರತಿಷ್ಠಾಪಿಸಲಾಗಿದೆ. ಈಗ ಅದನ್ನು ಮೀರಿಸುವಂತೆ ಗುಜರಾತ್ ಸಿಎಂ ನರೇಂದ್ರ ಮೋದಿಯವರು ಪ್ರತಿಜ್ಞೆ ಮಾಡಿ, 182 ಮೀ. ಎತ್ತರದ ಮೂರ್ತಿಯನ್ನು ನರ್ಮದಾ ನದಿ ದಂಡೆಯ ಪಕ್ಕದಲ್ಲಿ ಪ್ರತಿಷ್ಠಾಪಿಸಲು ನಿರ್ಣಯಿಸಿ ಲೋಹ ಸಂಗ್ರಹಿಸಲಾಗುತ್ತಿದೆ.
ಬಿಜೆಪಿ ನಗರಘಟಕದ ಅಧ್ಯಕ್ಷ ಮಧ್ವರಾಜ್ ಆಚಾರ್ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಕ್ಷದ ತಾಲೂಕಾಧ್ಯಕ್ಷ ದೇವೆಂದ್ರಪ್ಪ ಯಾಪಲಪರ್ವಿ ವಹಿಸಿದ್ದರು. ಬಿಜೆಪಿ ರಾಜ್ಯ ಸಮಿತಿ ಸದಸ್ಯ ಅಮರೇಗೌಡ ವಿರುಪಾಪುರ, ಈರೇಶ ಇಲ್ಲೂರು, ಜಿಲ್ಲಾ ಉಪಾಧ್ಯಕ್ಷ ಎನ್. ಶಿವನಗೌಡ ಗೊರೇಬಾಳ, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಅಶೋಕ ಉಮಲೂಟಿ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಮಹಿಬೂಬಸಾಬ ಬೂತಲದಿನ್ನಿ, ಮುಖಂಡರಾದ ಪ್ರೇಮಾ ಸಿದ್ದಾಂತಿಮಠ, ಮಮತಾ ಹಿರೇಮಠ, ಜಿಪಂ ಮಾಜಿ ಸದಸ್ಯರಾದ ದೊಡ್ಡ ಬಸವರಾಜ, ಆರ್. ಬಸನಗೌಡ, ಕಲ್ಲೂರ ಬಸಪ್ಪ, ಹನುಮೇಶ ನಾಯಕ, ನಗರಸಭೆ ಸದಸ್ಯ ಗ್ಯಾನಪ್ಪ ಗಿರಿಜಾಲಿ, ತಾಪಂ ಸದಸ್ಯ ವೆಂಕೋಬ ಮತ್ತಿತರರು ಉಪಸ್ಥಿತರಿದ್ದರು. ಶ್ರೀನಿವಾಸರಡ್ಡಿ ಅವರು ಕಾರ್ಯಕ್ರಮ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

