ಗೋವುಗಳ ಸಾವು: ವಡ್ಲೂರು ಗ್ರಾಮಸ್ಥರ ಪ್ರತಿಭಟನೆ
ಕ.ಪ್ರ. ವಾರ್ತೆ ್ಣ ರಾಯಚೂರು ್ಣ ಜು. 9
ತಾಲೂಕಿನ ವಡ್ಲೂರು ಗ್ರಾಮದ ಗೋವುಗಳು ಗ್ರಾಮದ ಬಳಿಯ ಶಿಲ್ಪಾ ಮೆಡಿಕೇರ್ ಲಿಮಿಟೆಡ್ ಕಂಪನಿಯು ಹೊರಹಾಕಿದ ರಾಸಾಯನಿಕ ವಿಷಯುಕ್ತ ನೀರು ಸೇವಿಸಿ ಸಾವಿಗೀಡಾಗಿದ್ದು, ಗೋವುಗಳ ಮಾಲೀಕರಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ನಗರದಲ್ಲಿ ಬುಧವಾರ ವಡ್ಲೂರು ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಈ ಕುರಿತು ಅಪರ ಜಿಲ್ಲಾಧಿಕಾರಿ ಎಂ.ಪಿ. ಮಾರುತಿ ಅವರಿಗೆ ಮನವಿ ಸಲ್ಲಿಸಿ, ಕೆಲ ದಿನಗಳಿಂದ ಗ್ರಾಮದ ಬಳಿಯ ಕೋಣ ಹಳ್ಳದ ನೀರು ಕುಡಿದ ಗ್ರಾಮದ ಜಾನುವಾರುಗಳು ಸಾವನ್ನಪ್ಪುತ್ತಿದ್ದು, ಇದಕ್ಕೆ ಶಿಲ್ಪಾ ಮೆಡಿಕೇರ್ ಕಂಪನಿಯು ರಾಸಾಯನಿಕ ವಸ್ತುವನ್ನು ಹಳ್ಳದ ನೀರಿಗೆ ಹರಿಬಿಡುತ್ತಿರುವುದೇ ಕಾರಣ ಎಂದು ಆರೋಪಿಸಿದರು.
ಕೋಣ ಹಳ್ಳದ ನೀರು ಕುಡಿದು ಸಾವು: ಕಳೆದ 15 ದಿನಗಳಿಂದ ಗ್ರಾಮದಲ್ಲಿ ಕೋಣ ಹಳ್ಳದ ನೀರು ಕುಡಿದು ಜಾನುವಾರುಗಳು ನಿಗೂಢವಾಗಿ ಸಾಯುತ್ತಿವೆ. ಜು.6ರಂದು ಶಿಲ್ಪಾ ಮೆಡಿಕೇರ್ ಕಾರ್ಖಾನೆ ಸುತ್ತ ಪರಿಶೀಲಿಸಿದಾಗ ರಾಸಾಯನಿಕ ತ್ಯಾಜ್ಯವನ್ನು ಹಳ್ಳಕ್ಕೆ ಹಾಗೂ ಎಲ್ಲೆಂದರಲ್ಲಿ ಬಿಡುತ್ತಿರುವುದು ಗಮನಕ್ಕೆ ಬಂದಿದೆ. ಗ್ರಾಮದ ಜಾನುವಾರುಗಳು ಈ ನೀರು ಮತ್ತು ತ್ಯಾಜ್ಯ ಸೇವಿಸಿ ಸಾವಿಗೀಡಾಗಿವೆ ಎಂದು ಆರೋಪಿಸಿದರು.
ಈ ಕುರಿತು ಗ್ರಾಮಸ್ಥರು ಕಾರ್ಖಾನೆ ಮಾಲೀಕರನ್ನು ವಿಚಾರಿಸಿದಾಗ ರಾಸಾಯನಿಕ ತ್ಯಾಜ್ಯ ತಮ್ಮದೆಂದು ಒಪ್ಪಿದ್ದಾರೆ. ಪರಿಹಾರ ನೀಡುವುದಾಗಿಯೂ ಭರವಸೆ ನೀಡಿದ್ದಾರೆ. ಆದರೆ ಜು.7ರಂದು ಗ್ರಾಮಸ್ಥರು ಪರಿಹಾರ ಕೇಳಲು ತೆರಳಿದಾಗ ಕಾರ್ಖಾನೆಯ ಕಾರ್ಮಿಕರಿಂದ ತಮ್ಮ ಮೇಲೆ ದೌರ್ಜನ್ಯ ನಡೆಸಲು ಆಡಳಿತ ಮಂಡಳಿತ ಮುಂದಾಯಿತೆಂದು ದೂರಿದರು.
ಕಾರ್ಖಾನೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ: ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಗೆ ಈ ಬಗ್ಗೆ ತಿಳಿಸಿದ್ದು, ವೈದ್ಯಕೀಯ ವರದಿ ಬರುವವರೆಗೆ ಕಾಯುವಂತೆ ಸೂಚಿಸಲಾಗಿದೆ. ಗ್ರಾಮಕ್ಕೆ ಪಶುವೈದ್ಯಾಧಿಕಾರಿಗಳು ಭೇಟಿ ನೀಡಿ ತಪಾಸಣೆ ನಡೆಸಿದ್ದು, ವಿಷಯುಕ್ತ ನೀರು ಸೇವನೆಯಿಂದಲೇ ಸಾವು ಸಂಭವಿಸಿದೆ ಎಂದು ದೃಢಪಡಿಸಿದ್ದಾರೆಂದು ತಿಳಿಸಿದರು.
ಪರಿಹಾರಕ್ಕೆ ಕೋರಲು ಪುನಾ ತೆರಳಿದ ಗ್ರಾಮಸ್ಥರ ವಿರುದ್ಧವೇ ಕಂಪನಿಯ ಆಡಳಿತವು ಪ್ರಕರಣ ದಾಖಲಿಸಿದ್ದಾರೆ. ಕೂಡಲೇ ಈ ಬಗ್ಗೆ ಪರಿಶೀಲಿಸಿ, ಮೃತ ಜಾನುವಾರುಗಳ ಮಾಲೀಕರಿಗೆ ಸೂಕ್ತ ಪರಿಹಾರ ನೀಡಬೇಕು. ಹಳ್ಳಕ್ಕೆ ರಾಸಾಯನಿಕ ತ್ಯಾಜ್ಯ ಹೊರಬಿಡುವ ಕಾರ್ಖಾನೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ವಿಷದಿಂದ ಸುತ್ತಲಿನ ಪರಿಸರ ಹಾನಿಯಾಗುತ್ತಿದ್ದು, ಈ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ವಡ್ಲೂರು ಗ್ರಾಮದ ಮುಖಂಡರಾದ ಮಲ್ಲಪ್ಪ ಸಾಲಿ, ಜಗನ್ನಾಥ ರೆಡ್ಡಿ, ಶಿವರಾಜ, ಭೀಮಣ್ಣ ಯಾದವ, ಶರಣಗೌಡ ಹೊಸೂರು, ಸೂಗನಗೌಡ, ವಿಜಯರೆಡ್ಡಿ, ಕಲ್ಲಪ್ಪ, ಶಿವನಗೌಡ, ಬಸನಗೌಡ, ಅಯ್ಯಪ್ಪಗೌಡ, ವಿಜಯರೆಡ್ಡಿ, ಲಕ್ಷ್ಮೀಕಾಂತ ರೆಡ್ಡಿ, ಮಂಜುನಾಥ ಮೇಟಿ ಮತ್ತಿತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

