ದಲಿತ ಮಹಾಸಭಾ ಹೋಬಳಿ ಘಟಕ ಉದ್ಘಾಟನೆ
ಸಿಂಧನೂರು: ದಲಿತ ಮಹಾಸಭಾದ ಕಾರ್ಯಕರ್ತರು ದಲಿತರ ಹಕ್ಕುಗಳ ರಕ್ಷಣೆ ಮಾಡಿ ಸಾಮಾಜಿಕ ಅಸಮಾನತೆಯ ವಿರುದ್ಧ ಹೋರಾಡಬೇಕು ಎಂದು ದಲಿತ ಮಹಾಸಭಾ ಜಿಲ್ಲಾ ಘಟಕ ಅಧ್ಯಕ್ಷ ಕೆ.ಇ. ಕುಮಾರ ಕರೆ ನೀಡಿದರು. ತಾಲೂಕಿನ ಜಾಲಿಹಾಳ ಗ್ರಾಮದಲ್ಲಿ ದಲಿತ ಮಹಾಸಭಾ ಹೋಬಳಿ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಅಧ್ಯಕ್ಷತೆ ವಹಿಸಿ ತಾ. ಘಟಕ ಅಧ್ಯಕ್ಷ ಗುಡದೇಶ ಬೇರಿಗಿ ಮಾತನಾಡಿದರು. ಲಗುಮಪ್ಪ ಗೊರೇಬಾಳ, ವೀರೇಶ ಕೆ. ಹಂಚಿನಾಳ, ಗವಿಸಿದ್ದಪ್ಪ ಮಧ್ಯ ಕ್ಯಾಂಪ್, ಶಂಕರಪ್ಪ ತುರ್ವಿಹಾಳ, ನಾಗಲಿಂಗಪ್ಪ ತುರ್ವಿಹಾಳ, ಮಾನಪ್ಪ ತುರ್ವಿಹಾಳ ಮತ್ತಿತರರು ಇದ್ದರು.
ಹೋಬಳಿ ಘಟಕದ ಪದಾಧಿಕಾರಿಗಳು: ಹನುಮೇಶ (ಗೌರವಾಧ್ಯಕ್ಷ), ಶಂಕ್ರಪ್ಪ (ಅಧ್ಯಕ್ಷ), ಮೌಲಪ್ಪ (ಉಪಾಧ್ಯಕ್ಷ), ಪರಶುರಾಮ (ಖಜಾಂಚಿ), ಪಂಪಾಪತಿ ಹನುಮಂತ (ಕಾರ್ಯದರ್ಶಿ), ದೇವಪ್ಪ, ಹನುಮಂತ, ರಾಮಣ್ಣ, ರಮೇಶ, ಪಂಪಾಪತಿ ಹುಲಗಪ್ಪ, ಹನುಮೇಶ ನಾಗಪ್ಪ, ಬಸವರಾಜ, ಮೌಲಪ್ಪ ಯಲ್ಲಮ್ಮ, ನಾಗರಾಜ, ಹನುಮೇಶ ಭೀಮಮ್ಮ, ಪಂಪಾಪತಿ ಗಂಗಮ್ಮ ಅವರನ್ನು ನೇಮಕ ಮಾಡಲಾಯಿತು.
ಸರ್ಕಾರಿ ಪದವಿ ಕಾಲೇಜಿಗೆ ನೂತನ ಪ್ರಾಂಶುಪಾಲರು
ಸಿಂಧನೂರು: ನಗರದ ಕುಷ್ಟಗಿ ರಸ್ತೆಯಲ್ಲಿರುವ ಸರ್ಕಾರಿ ಪದವಿ ಮಹಾವಿದ್ಯಾಲಯದ ನೂತನ ಪ್ರಾಂಶುಪಾಲರಾಗಿ ಡಾ. ಮುನಿನಾರಾಯಣಪ್ಪ ಅಧಿಕಾರ ವಹಿಸಿಕೊಂಡರು. ಈ ಹಿಂದೆ ಮಾಲೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ಶಾಸ್ತ್ರದ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿ, ಸೇವಾ ಜೇಷ್ಠತೆ ಆಧಾರದಲ್ಲಿ ಬಡ್ತಿ ಪಡೆದು ಸಿಂಧನೂರಿನ ಪದವಿ ಕಾಲೇಜು ಪ್ರಾಂಶುಪಾಲರಿಗೆ ನಿಯುಕ್ತಿಗೊಂಡಿದ್ದಾರೆ. ಅಧಿಕಾರ ಸ್ವೀಕರಿಸಿದ ಬಳಿಕ ಉಪನ್ಯಾಸಕರು, ಸಿಬ್ಬಂದಿರೊಂದಿಗೆ ಚರ್ಚಿಸಿ ಸಹಕಾರ ಕೋರಿದರು.
ಅರ್ಜಿ ಆಹ್ವಾನ: ಪ್ರಸಕ್ತ ಸಾಲಿನ ಎಂ.ಎ (ಇತಿಹಾಸ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ರಾಜ್ಯಶಾಸ್ತ್ರ), ಎಂಕಾಂ ಹಾಗೂ ಎಂಎಸ್ಸಿ (ಗಣಿತಶಾಸ್ತ್ರ, ಗಣಕವಿಜ್ಞಾನ) ವಿಷಯಗಳಿಗೆ ಗುಲ್ಬರ್ಗ ವಿವಿ ಅರ್ಜಿ ಆಹ್ವಾನಿಸಿದೆ. ಜು.14ರಿಂದ ಆ.8ರ ವರೆಗೆ ನಿಗದಿತ ಅರ್ಜಿ ನಮೂನೆಗಳನ್ನು ವಿಶ್ವವಿದ್ಯಾಲಯದ ವೆಬ್ಸೈಟ್ನಿಂದ ಪಡೆದು ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಕಾಲೇಜಿನ ಕಾರ್ಯಾಲಯಕ್ಕೆ ಸಲ್ಲಿಸಲು ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

