ಶೌಚಾಲಯ ನಿರ್ಮಾಣಕ್ಕೆ ಅರಿವು ಮೂಡಿಸಿ: ಮುದುಕಪ್ಪ
ಸಿಂಧನೂರು: ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಗ್ರಾಪಂ ಸದಸ್ಯರು ಅರಿವು ಮೂಡಿಸಬೇಕಿದೆ. ನಿರ್ಮಾಣ ಮಾಡಿರುವ ಫಲಾನುಭವಿಗಳಿಗೆ ಬಾಕಿ ಹಣವನ್ನು ಶೀಘ್ರದಲ್ಲೇ ವಿತರಿಸಲಾಗುವುದು ಎಂದು ಪಿಡಿಒ ಸಿ.ಎಚ್. ಮುದುಕಪ್ಪ ಹೇಳಿದರು.
ತಾಲೂಕಿನ ಬಳಗಾನೂರು ಗ್ರಾಪಂ ಕಾರ್ಯಾಲಯದಲ್ಲಿ ಅಧ್ಯಕ್ಷೆ ಗಿರಿಜಮ್ಮ ಗುತ್ತೇದಾರ್ ಅಧ್ಯಕ್ಷತೆಯಲ್ಲಿ ಜರುಗಿದ ತುರ್ತುಸಭೆಯಲ್ಲಿ ಮಾತನಾಡಿ, ಸಭೆಯಲ್ಲಿ 2014-15ನೇ ಸಾಲಿನ ಇಂದಿರಾ ಆವಾಸ್ ಯೋಜನೆಗಳ ಫಲಾನುಭವಿಗಳನ್ನು ಜು.22ರಂದು ಆಯ್ಕೆ ಮಾಡಲು ನಿರ್ಧರಿಸಲಾಯಿತು.
ಅರ್ಜಿ ಸಲ್ಲಿಸಿರುವ 33ರಲ್ಲಿ ಮೀಸಲು ಪ್ರಕಾರ ಆಯ್ಕೆಗೆ ವಿವರ ತಿಳಿಸಿದರು. 2014-15ನೇ ಸಾಲಿನ ಎನ್.ಆರ್.ಇ.ಜಿ.ಯಲ್ಲಿ 1 ಕೋಟಿವರೆಗೂ ಕ್ರಿಯಾಯೋಜನೆ ಸಿದ್ಧಪಡಿಸಲು ಸಭೆಗೆ ತಿಳಿಸಿದರು.
ಉತ್ತಮ ಪಂಚಾಯತಿ ಪ್ರಶಸ್ತಿ: ಜಿಲ್ಲೆಯಲ್ಲಿ ಉತ್ತಮ ಗ್ರಾಮ ಪಂಚಾಯಿತಿ ಪ್ರಶಸ್ತಿಗೆ ಬಳಗಾನೂರ ಆಯ್ಕೆಯಾಗಿದೆ. ಇದಕ್ಕೆ ರಸ್ತೆ ಅಗಲೀಕರಣ ಸೇರಿದಂತೆ ಗ್ರಾಮಾಭಿವೃದ್ಧಿ ಸದಸ್ಯರ ಸತತ ಪ್ರಯತ್ನದಿಂದ ಆಯ್ಕೆಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಗ್ರಾಮದ ಸಾರ್ವಜನಿಕ ಮಹಿಳಾ ಶೌಚಾಲಯದ ಸ್ಥಳ ಒತ್ತುವರಿ ತೆರವು, ಇನ್ನಿತರ ಸಮಸ್ಯೆಗಳಗೆ ಸಮಗ್ರ ದಾಖಲಾತಿ ಪರಿಶೀಲಿಸಿ ಕ್ರಮ ಕೈಗೊಳ್ಳಲು ಸಭೆ ಒಮ್ಮತ ಸೂಚಿಸಿತು.
ಸಭೆಯಲ್ಲಿ ಉಪಾಧ್ಯಕ್ಷ ಹನುಮೇಶ ಹೂಗಾರ, ಮಾಜಿ ಅಧ್ಯಕ್ಷ ಯಂಕಪ್ಪ ನಾಯಕ ಎಚ್. ಮಹಾಭಳೇಶ್ವರ, ಕೆ. ನಾಗರಾಜ, ಗಣೇಶ ಡಿಶ್, ಮರಿಸ್ವಾಮಿ, ರಾಮಣ್ಣ, ಎಸ್. ಮೌನೇಶ್ ಗೌಡ, ಕುಮಾರಸ್ವಾಮಿ ತಿಪ್ಪಣ್ಣ, ಸಿದ್ದಮ್ಮ ಪೂಜಾರ, ಪಾರ್ವತಮ್ಮ, ಶ್ರೀದೇವಿ ಕಮ್ಮಾರ, ಅನ್ನಪೂರ್ಣ, ನೂರಜಾ ಬೇಗಂ, ಲಕ್ಷ್ಮೀ ನಾಗರಾಜ ಸೇರಿದಂತೆ ಉಪಸ್ಥಿತರಿದ್ದರು. ಪಂಪಾಪತಿ ನಾಯಕ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

