ಹುಣಸಗಿ ಹೋಬಳಿ ಬಸ್ ಘಟಕಕ್ಕೆ ಭರವಸೆ
ಸುರಪುರ: ತಾಲೂಕಿನ ಹುಣಸಗಿ ಹೋಬಳಿಯಲ್ಲಿ ಬಸ್ ಘಟಕ ಸ್ಥಾಪಿಸುವ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಸಚಿವ ರಾಮಲಿಂಗಾರೆಡ್ಡಿ ಭರವಸೆ ನೀಡಿದ್ದಾರೆ. ಸದನದಲ್ಲಿ ಶಾಸಕ ರಾಜಾ ವೆಂಕಟಪ್ಪನಾಯಕ ಕೇಳಿದ ಪ್ರಶ್ನೆಗೆ, ಸೂಕ್ತ ಸ್ಥಳ ಒದಗಿಸಿಕೊಟ್ಟಲ್ಲಿ ನಿರ್ಮಾಣಕ್ಕೆ ಯಾವುದೇ ಅಡ್ಡಿಯಿಲ್ಲ. ಸ್ಥಳ ಒದಗಿಸಿದ ತಕ್ಷಣ ಮಂಜೂರಾತಿಗೆ ತಿಳಿಸಿದ್ದಾರೆಂದು ಶಾಸಕರು ಹೇಳಿದ್ದಾರೆ. ಹುಣಸಗಿಯಲ್ಲಿ ಜೆಸ್ಕಾಂ ಇಲಾಖೆ ಉಪ ವಿಭಾಗ ಕಚೇರಿ ಕುರಿತಂತೆ ಇಂಧನ ಸಚಿವ ಡಿ.ಕೆ. ಶಿವಕುಮಾರ ಅವರಿಗೂ ಪ್ರಶ್ನಿಸಿದ್ದು, ಪ್ರಸಕ್ತ ಸಾಲಿನಲ್ಲಿ ಉಪ ವಿಭಾಗ ಕಚೇರಿ ಸ್ಥಾಪಿಸುವುದಾಗಿ ತಿಳಿಸಿದ್ದಾರೆ. ಸುರಪುರ ಪುರಸಭೆ ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸುವುದಕ್ಕೆ ಪೌರಾಡಳಿತ ಸಚಿವ ಖಮರುಲ್ಲಾ ಇಸ್ಲಾಂ ಅವರು ಕರ್ನಾಟಕ ಪೌರಸಭೆಗಳ ಕಾಯ್ದೆ 1964ರ ಅನ್ವಯ ಕ್ರಮ ಜರುಗಿಸಲಾಗುವುದು ಎಂದು ಆಶ್ವಾಸನೆ ನೀಡಿದ್ದಾರೆ ಎಂದರು.
ಬೆಂಗಳೂರಿಗೆ ಕರವೇ ನಿಯೋಗ ಇಂದು
ಯಾದಗಿರಿ: ಹೈ-ಕ ಭಾಗದಲ್ಲಿ ಕೆಎಟಿ ನ್ಯಾಯಲಯ ಸ್ಥಾಪನೆಗೆ ಒತ್ತಾಯಿಸಿ ಕರವೇ ಅಧ್ಯಕ್ಷ ಶರಣು ಗದ್ದುಗೆ ನೇತೃತ್ವದಲ್ಲಿ ಜು.22ರಂದು ನಿಯೋಗವು ಬೆಂಗಳೂರಿಗೆ ತೆರಳಿ ಸಂಬಂಧಪಟ್ಟ ಸಚಿವರಿಗೆ ಮನವಿ ಮಾಡಲಿದೆ. ಕೆಎಟಿ ನ್ಯಾಯಲಯ ಗುಲ್ಬರ್ಗದಲ್ಲಿಯೇ ಆಗಬೇಕು. ಸುರಪುರ ತಾಲೂಕಿನ ಅಗ್ನಿ ಗ್ರಾಮದ ನೇಮಿನಾಥ ಮೂರ್ತಿಯನ್ನು ಬಾಗಲಕೋಟೆಯಿಂದ ವಾಪಸ್ ತಂದು ನೇಮಿನಾಥ ಮಂದಿರವನ್ನು ಅಭಿವೃದ್ಧಿಪಡಿಸಬೇಕು. ಗುಲ್ಬರ್ಗ ಮತ್ತು ಯಾದಗಿರಿಯಲ್ಲಿ ಖಾಲಿಯಾಗಿರುವ ಡಿಡಿಪಿಐ, ಡಿವೈಎಸ್ಪಿ ಹುದ್ದೆ ಶೀಘ್ರವೇ ಭರ್ತಿ ಮಾಡುವಂತೆ ಒತ್ತಾಯಿಸಲಾಗುವುದೆಂದು ತಿಳಿಸಿದ್ದಾರೆ. ಗೋವಾ ಕನ್ನಡಿಗರ ಮೇಲೆ ನಡೆಯುತ್ತಿರುವ ದೌರ್ಜನ್ಯ ಕುರಿತು ಸೂಕ್ತ ತನಿಖೆ ಮಾಡಬೇಕು. ಪಠ್ಯಕ್ರಮದಲ್ಲಿ ಹೈ-ಕ ಇತಿಹಾಸ ಸೇರ್ಪಡೆ ಸೇರಿದಂತೆ ನಾನಾ ಬೇಡಿಕೆ ಈಡೇರಿಕೆಗೆ ಒತ್ತಾಯಿಸಲಾಗುವುದೆಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

