ರಾಯಚೂರು

ಮೊಳಕೆ ಬಾರದ ಸೋಯಾಬಿನ್: ಪರಿಹಾರಕ್ಕೆ ಆಳಂದ ರೈತರ ಒತ್ತಾಯ

Published On :

ಆಳಂದ: ತಾಲೂಕಿನ ನೂರಾರು ಎಕರೆ ಪ್ರದೇಶದಲ್ಲಿ ಬಿತ್ತನೆ ಮಾಡಿದ ಸೋಯಾಬಿನ್ ಬೀಜ ಮೊಳಕೆಯೊಡೆಯದೆ ಹಾನಿಯಾಗಿದ್ದು, ಸರ್ಕಾರ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿ ತಹಸೀಲ್ದಾರ್ ಬಸವರಾಜ ಅಂಬರಶೆಟ್ಟಿ ಅವರಿಗೆ ಮನವಿ ಸಲ್ಲಿಸಿದರು. ತೆಲಾಕುಣಿ, ಖಜೂರಿ ಇನ್ನಿತರ ಕಡೆಯ ರೈತರು ತಾವು ಬಿತ್ತನೆ ಮಾಡಿದ್ದ ಸೋಯಾಬಿನ್ ಬೆಳೆ ಮೊಳಕೆಯೊಡೆದಿಲ್ಲ. ಜೂನ್‌ನಲ್ಲಿ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಿಂದ ಕರ್ನಾಟಕ ಬೀಜ ಅಭಿವೃದ್ಧಿ ನಿಗಮದಿಂದ ತಯಾರಿಸಿದ ಸೋಯಾ ಅವರೆ ಬಿತ್ತನೆ ಬೀಜವನ್ನು ಖರೀದಿಸಲಾಗಿದೆ. ಆದರೆ ಬಿತ್ತನೆ ಮಾಡಿ 15-20 ದಿನಗಳಾದರೂ ಸಂಪೂರ್ಣ ನಾಟಿಯಾಗಿಲ್ಲ. ತೆಲಾಕುಣಿ ಗ್ರಾಮದ ಪರಮೇಶ್ವರ ಪಾಟೀಲ, ಸಿದ್ಧಲಿಂಗ ರಾಯೆ, ಗುರುಲಿಂಗಪ್ಪ ಮರಬೆ, ರವೀಂದ್ರ ಪಾಟೀಲ, ಸೂರ್ಯಕಾಂತ ಪಾಟೀಲ, ಸದಾಶಿವ ಏಟೆ ಸೇರಿದಂತೆ ಸೋಯಾಬಿನ್ ಬಿತ್ತನೆ ಕೈಗೊಂಡ 25ಕ್ಕೂ ಹೆಚ್ಚು ರೈತರು ಹಾಜರಿದ್ದರು.
ತಜ್ಞರ ಭೇಟಿ: ಸೋಯಾಬಿನ್ ಬೀಜ ನಾಟಿಯಾಗದಿರುವ ಕುರಿತು 2ನೇ ಸುತ್ತಿನಲ್ಲಿ ತಾಲೂಕಿನ ತೆಲಾಕುಣಿ, ಖಜೂರಿ ಮತ್ತಿತರ ಕಡೆ ಕೃಷಿ ತಜ್ಞರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಘಟನೆಗೆ ತೇವಾಂಶ ಕೊರತೆಯೇ ಪ್ರಮುಖ ಕಾರಣ ಎನ್ನುತ್ತಿದ್ದರಾದರೂ ವಾಸ್ತವದಲ್ಲಿ ರೈತರು ಈ ಮಾತನ್ನು ಒಪ್ಪುತ್ತಿಲ್ಲ. ಸಾಕಷ್ಟು ತೇವಾಂಶದಲ್ಲಿ ಬಿತ್ತನೆಯಾದ ಮೇಲೂ ನಾಟಿಯಾಗಿಲ್ಲ ಎಂದು ರೈತಾಪಿಗಳು ವಾದಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.