ರಾಯಚೂರು

19.58 ಕೋಟಿ ಕ್ರಿಯಾ ಯೋಜನೆಗೆ ಅಂಗೀಕಾರ

Published On :

ಕ.ಪ್ರ. ವಾರ್ತೆ ,  ಹುಮನಾಬಾದ್ ,  ಜೂ.13
ತಾಲೂಕು ಪಂಚಾಯಿತಿಗೆ ಸೌಲಭ್ಯ ಕಲ್ಪಿಸಲು 15 ಲಕ್ಷ ಅವಶ್ಯಕತೆ ಇದ್ದು, ಪಂಚಾಯಿತಿನಿಂದ 10 ಲಕ್ಷ ಒದಗಿಸಿಬೇಕು, ಉಳಿದ 5 ಲಕ್ಷವನ್ನು ಇನ್ನಿತರ ಮೂಲಗಳಿಂದ ಸಂಗ್ರಹಿಸಲಾಗುವುದು ಎಂದು ಶಾಸಕ ರಾಜಶೇಖರ ಪಾಟೀಲ್ ತಿಳಿಸಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಶುಕ್ರವಾರ ತಾಪಂ ಸಾಮಾನ್ಯ ಸಭೆ ಉದ್ದೇಶಿಸಿ ಮಾತನಾಡಿ, ಸಭಾಂಗಣಕ್ಕೆ ವಿವಿಧ ಸೌಲಭ್ಯಗಳು ಒದಗಿಸಿದಲ್ಲಿ  ಜಿಲ್ಲೆಯಲ್ಲಿಯೇ ಉತ್ತಮ ಸಭಾಂಗಣವನ್ನಾಗಿ ಮಾರ್ಪಾಡಾಗಲಿದೆ ಎಂದರು.
ಸಭೆಗೆ ತಾಲೂಕಿನ ಅಧಿಕಾರಿಗಳು ಹಾಜರಾಗುತ್ತಿಲ್ಲ. ಸಭೆಯಲ್ಲಿ ಚರ್ಚಿಸಿದ ವಿಷಯಗಳಿಗೆ ಪಾಲನೆ ಮಾಡುತ್ತಿಲ್ಲ ಎಂದು ಸದಸ್ಯರಾದ ವೆಂಕಟರೆಡ್ಡಿ ಸೇರಿಕಾರ, ಪಾಂಡೊರಂಗ ಖಂಡಗೊಂಡ ಶಾಸಕರ ಗಮನಕ್ಕೆ ತಂದರು.
ಅಧಿಕಾರಗಳ ಮೇಲೆ ತಾಪಂ ಹಿಡಿತವಿಲ್ಲವೆಂದು ಸ್ಪಷ್ಟವಾಗುತ್ತಿದೆ. ತಾಪಂ ಸದಸ್ಯರು ಒಗ್ಗಟ್ಟಾಗಿ ಅಭಿವೃದ್ಧಿಗೆ ಶ್ರಮಿಸುತ್ತಿಲ್ಲ. ಒಗ್ಗಟ್ಟಾಗಿ ಕೆಲಸ ನಿರ್ವಹಿಸಿದ್ದಲ್ಲಿ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಶಾಸಕರು ಸದಸ್ಯರಿಗೆ ಕಿವಿಮಾತು ಹೇಳಿದರು.
ಸದಸ್ಯ ಬಾಬು ಟೈಗರ್ ಮಾತನಾಡಿ, ಆರೋಗ್ಯ ಇಲಾಖೆಯಲ್ಲಿ ಅನುದಾನ ದುರ್ಬಳಕೆಯಾಗುತ್ತಿದ್ದು, ಬಡವರಿಗೆ ಉಚಿತ ಔಷಧಿ ಸೇರಿದಂತೆ ವಿವಿಧ ಸೌಲಭ್ಯ ನೀಡದೆ ವಂಚಿಸುತ್ತಿದ್ದಾರೆ ಎಂದು ಆರೋಪಿಸಿದರು.
ಸದಸ್ಯ ಸಂಜೀವರೆಡ್ಡಿ ಮಾತನಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ನಿತ್ಯ ಮದ್ಯಪಾನ ಮಾಡಿ ಕೆಲಸ ನಿರ್ವಹಿಸುತ್ತಿದ್ದಾರೆ. ಇದರಿಂದ ಮಹಿಳೆಯರು, ಮಕ್ಕಳು ಸೇರಿದಂತೆ ಸಾರ್ವಜನಿಕರು ಸರ್ಕಾರಿ ಆಸ್ಪತ್ರೆಯಿಂದ ದೂರ ಉಳಿಯುವಂತಾಗಿದೆ ಅವರನ್ನು ತಕ್ಷಣ ವರ್ಗಾವಣೆ ಮಾಡಬೇಕೆಂದು ಶಾಸಕರಿಗೆ ಒತ್ತಾಯಿಸಿದರು. ನಿರ್ಣಾ ಆಸ್ಪತ್ರೆ ನನ್ನ ಕ್ಷೇತ್ರದ ವ್ಯಾಪ್ತಿಗೆ ಒಳಪಡಿವುದಿಲ್ಲ. ಅಲ್ಲಿನ ಶಾಸಕರ ಗಮನಕ್ಕೆ ತಂದು ಸೂಕ್ತ ಕ್ರಮ ಜರುಗಿಸಲು ತಿಳಿಸಲಾಗುವುದು ಎಂದು ಭರವಸೆ ನೀಡಿದರು.
ಎನ್‌ಆರ್‌ಎಚ್‌ಎಂ ಯೋಜನೆಯಲ್ಲಿ ಸಾಕಷ್ಟು ಅವ್ಯವಹಾರ ನಡೆದಿದ್ದು, ಇದರ ಸಂಪೂರ್ಣ ಮಾಹಿತಿ ನೀಡಬೇಕು. ಅಲ್ಲದೆ ತಾಲೂಕಿನ ಎಲ್ಲಾ ಆಸ್ಪತ್ರೆಗಳಲ್ಲಿ ಬಡವರಿಗೆ ಸಿಗಬೇಕಾದ ಸೌಲಭ್ಯಗಳು ಸಿಗದಿರುವುದನ್ನು ತಪ್ಪಿಸಬೇಕೆಂದು ಬಾಬು ಟೈಗರ್ ಸಭೆಯ ಗಮನಕ್ಕೆ ತಂದರು.
ಶಾಸಕ ರಾಜಶೇಖರ ಪಾಟೀಲ್ ಮಾತನಾಡಿ, ಯಾವುದೇ ಅವ್ಯವಹಾರ ನಡೆದರೆ ಮುಲಾಜಿಲ್ಲದೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ತಾಪಂ ಅಧ್ಯಕ್ಷ ಜಗದೇವಿ ಪ್ರಕಾಶ ಕಾಡಗೊಂಡ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರೀಶೀಲನೆ ಹಾಗೂ ಹಿಂದಿನ ಸಾಮಾನ್ಯಸಭೆಯಲ್ಲಿ ಕೈಗೊಂಡು ಕಾರ್ಯಕ್ರಮಗಳ ಅನುಷ್ಠಾನದ ಕುರಿತು ಚರ್ಚೆ ನಡೆಸಲಾಯಿತು.
ತಾಪಂ ಉಪಾಧ್ಯಕ್ಷ ನೀಸಾಬಿ, ಸ್ಥಾಯಿ ಸಮಿತಿ ಅಧ್ಯಕ್ಷ ಗಜೇಂದ್ರ ಕನಕಟ್ಟಕರ್, ಇಒ ಪಿ .ನಾಗಪ್ಪ, ಯೋಜನಾಧಿಕಾರಿ ನರಸಪ್ಪ, ಸದಸ್ಯರು ಪಾಲ್ಗೊಂಡಿದರು.
ಶಾಲೆಗಳಿಗೆ 9.14 ಕೋಟಿ
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣಕ್ಕೆ-ಸರ್ಕಾರಿ ಪ್ರಾಥಮಿಕ ಶಾಲೆಗಳ ಸೇರ್ಪಡೆ ಮತ್ತು ಮಾರ್ಪಾಡು, ಸರ್ವ ಶಿಕ್ಷಣ ಅಭಿಯಾನ ಸಂಸ್ಥೆ, ಸರ್ಕಾರೇತರ ಪ್ರಾಥಮಿಕ ಶಾಲೆಗಳ ಸಹಾಯ ಧನ, ಸರ್ಕಾರಿ ಪ್ರೌಢಶಾಲೆ, ರಾಷ್ಟ್ರೀಯ ಮಾದ್ಯಮಿಕ ಶಿಕ್ಷಣ ಅಭಿಯಾನ ಮಾದರಿ ಶಾಲೆಗಳ 9.14 ಕೋಟಿ ನಿಗದಿ ಪಡಿಸಲಾಗಿದೆ. 13ನೇ ಹಣಕಾಸು ಆಯೋಗದ ಯೋಜನೆಗೆ 2013-14ನೇ ಸಾಲಿನ 2ನೇ ೆಹಣಕಾಸು 59.98 ಲಕ್ಷ, 2014- 15ನೇ ಸಾಲಿನ ಅಯವ್ಯಯ 48.38, ಸ್ಟಾಪಂ ಡ್ಯೂಟಿ 18.64 ಲಕ್ಷಗಳ ಕ್ರಿಯಾ ಯೋಜನೆಗೆ ಸಾಮಾನ್ಯ ಸಭೆಯು ಅನುಮೋದನೆ ನೀಡಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.