2 ಟನ್ ಕಲ್ಲೆಳೆವ ಸ್ಪರ್ಧೆ: ಬಳ್ಳಾರಿ ಫಸ್ಟ್
ರಾಯಚೂರು: ನಗರದಲ್ಲಿ ಮುನ್ನೂರು ಕಾಪು ಸಮಾಜದಿಂದ ಆಯೋಜಿಸಿರುವ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದ ಎರಡನೇ ದಿನವಾದ ಶನಿವಾರ ನಡೆದ ಎರಡು ಟನ್ ಭಾರದ ಕಲ್ಲೆಳೆಯುವ ಸ್ಪರ್ಧೆಯಲ್ಲಿ ಬಳ್ಳಾರಿಯ ಎತ್ತುಗಳು ಪ್ರಥಮ ಸ್ಥಾನ ಗಳಿಸಿದವು.
ಬಳ್ಳಾರಿಯ ಶ್ರೀಕಾಕುಳಂ ವೆಂಕಟೇಶ್ವರರಾವ್ ಅವರ ಎತ್ತುಗಳು ನಿಗದಿತ 20 ನಿಮಿಷದಲ್ಲಿ 3 ಸಾವಿರ ಅಡಿ ದೂರ ಕಲ್ಲು ಎಳೆದು ಪ್ರಥಮ ಬಹುಮಾನ 60 ಸಾವಿರ ಗಳಿಸಿದವು. ಅದೇ ರೀತಿ ಆಂಧ್ರದ ಕೃಷ್ಣಾ ಜಿಲ್ಲೆಯ ರಾಮಲಿಂಗೇಶ್ವರಸ್ವಾಮಿ ಅವರ ಎತ್ತುಗಳು 2625 ಅಡಿ ಎಳೆದು ದ್ವಿತೀಯ ಸ್ಥಾನದ ಬಹುಮಾನ 45 ಸಾವಿರ ಗಳಿಸಿದವು.
ಆಂಧ್ರದ ಪ್ರಕಾಶಂ ಜಿಲ್ಲೆಯ ಪವಲೂರಿ ವೀರಸ್ವಾಮಿ ಅವರ ಎತ್ತುಗಳು 2409 ಅಡಿ ದೂರ ಎಳೆದು ಮೂರನೇ ಬಹುಮಾನ 35 ಸಾವಿರ, ಕರ್ನೂಲು ಜಿಲ್ಲೆಯ ನವಾಬ್ ಶಮೀರುದ್ದೀನ್ ಅವರ ಎತ್ತುಗಳು 2100 ಅಡಿ ಎಳೆದು ನಾಲ್ಕನೇ ಬಹುಮಾನವಾಗಿ 25 ಸಾವಿರ, ಕರ್ನೂಲಿನ ಯರ್ರಂಶೆಟ್ಟಿ ಕೋಟೇಶ್ವರರಾವ್ ಅವರ ಎತ್ತುಗಳು 1956 ಅಡಿ ಎಳೆದು ಐದನೇ ಬಹುಮಾನ 20 ಸಾವಿರ ಹಾಗೂ ಆರನೇ ಸ್ಥಾನದಲ್ಲಿ ಆಂಧ್ರದ ಮಹೆಬೂಬ್ ನಗರದ ವರುಣತೇಜ್ ಜಂಗತಿ ಅವರ ಎತ್ತುಗಳು 1516 ಅಡಿ ಎಳೆದು 10 ಸಾವಿರ ಬಹುಮಾನ ಗಳಿಸಿದವು. ಶನಿವಾರ ನಡೆದ ಸ್ಪರ್ಧೆಯಲ್ಲಿ ಕರ್ನಾಟಕ ಮತ್ತು ಆಂಧ್ರದ ಒಟ್ಟು ಆರು ಜೋಡಿ ಎತ್ತುಗಳು ಪಾಲ್ಗೊಂಡಿದ್ದವು.
ಬಹುಮಾನ ವಿತರಣೆ: ಸ್ಪರ್ಧೆಯ ವಿಜೇತ ಎತ್ತುಗಳ ಮಾಲಿಕರಿಗೆ ರಾಯಚೂರು ಹಬ್ಬದ ಅಧ್ಯಕ್ಷ ಹಾಗೂ ಮಾಜಿ ಶಾಸಕ ಪಾಪಾರೆಡ್ಡಿ ಹಾಗೂ ಮುನ್ನೂರು ಕಾಪು ಸಮಾಜದ ಅಧ್ಯಕ್ಷ ಬೆಲ್ಲಂ ನರಸರೆಡ್ಡಿ ಮತ್ತಿತರರು ವಿತರಿಸಿದರು. ಮುನ್ನೂರು ಕಾಪು ಸಮಾಜದ ತಿಪ್ಪೇಶ್ವರ ಸ್ವಾಮೀಜಿ, ಚಿಕ್ಕಸೂಗೂರು ಮಠದ ಸಿದ್ದಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

