ಬಿಜೆಪಿ ಅಭ್ಯರ್ಥಿಗೆ ಬೆಂಬಲ ನೀಡಬೇಡಿ
ರಾಯಚೂರು: ಈಶಾನ್ಯ ಶಿಕ್ಷಕರ ಕ್ಷೇತ್ರಕ್ಕೆ ಬಿಜೆಪಿಯಿಂದ ಸ್ಪರ್ಧಿಸಿರುವ ನಮೋಶಿ ಅವರು ಸಂವೇದನಾ ರಹಿತ ಹಾಗೂ ಭ್ರಷ್ಟಾಚಾರದಲ್ಲಿ ತೊಡಗಿದ ವ್ಯಕ್ತಿಯಾಗಿದ್ದು, ಅಂಥವರನ್ನು ಪ್ರಸಕ್ತ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ತಿರಸ್ಕರಿಸುವಂತೆ ಜನಸಂಗ್ರಾಮ ಪರಿಷತ್ ರಾಜ್ಯ ಕಾರ್ಯಾಧ್ಯಕ್ಷ ರಾಘವೇಂದ್ರ ಕುಷ್ಟಗಿ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇದುವರೆಗೆ ಶಶಿಲ್ ನಮೋಶಿ ಹೈದ್ರಾಬಾದ್ ಕರ್ನಾಟಕ ಭಾಗದ ಜಿಲ್ಲೆಗಳನ್ನು ಕಡೆಗಣಿಸುತ್ತಲೇ ಬಂದಿದ್ದಾರೆ. ಸದ್ಯ ಅವರೇ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಶಿಕ್ಷಕರು ಅಂಥ ಭ್ರಷ್ಟಾಚಾರದ ಆರೋಪ ಹೊತ್ತಿರುವ ವ್ಯಕ್ತಿಯನ್ನು ಬೆಂಬಲಿಸದಂತೆ ಮನವಿ ಮಾಡಿದರು.
ತಕ್ಕಪಾಠ ಕಲಿಸಿ: ಹೈ.ಕ. ಭಾಗದ ಜಿಲ್ಲೆಗಳು, ಇಲ್ಲಿನ ಮತದಾರರ ಬಗ್ಗೆ ಅವರಿಗೆ ಯಾವುದೇ ರೀತಿಯ ಸಂವೇದನೆಯಿಲ್ಲ. ಶಿಕ್ಷಕರ ಸಮಸ್ಯೆಗಳಿಗೆ ಅವರೆಂದೂ ಸ್ಪಂದಿಸಿಲ್ಲ. ಹೈ.ಕ. ಭಾಗದಲ್ಲಿ ಶಿಕ್ಷಕರ ಸಮಸ್ಯೆಗಳೂ ಸೇರಿದಂತೆ ಹತ್ತಾರು ವಿಚಾರಗಳು ಪ್ರಮುಖವಾಗಿದ್ದರೂ ಅವುಗಳ ಬಗ್ಗೆ ಅವರು ತಮ್ಮ ಮೂರು ಅವಧಿಯಲ್ಲಿಯೂ ಎಂದಿಗೂ ಚಕಾರವೆತ್ತಲಿಲ್ಲ. ಅಂಥವರೇ ಮರು ಆಯ್ಕೆ ಕೋರಿ ಸ್ಪರ್ಧಿಸಿದ್ದು ಮತದಾರರು ಅಂಥವರಿಗೆ ತಕ್ಕ ಪಾಠ ಕಲಿಸಬೇಕಿದೆ ಎಂದು ಹೇಳಿದರು. ಶಶಿಲ್ ನಮೋಶಿ ಅವರು ತಮಗೆ ದೊರೆತ ಅನುದಾನದ ಹಂಚಿಕೆಯಲ್ಲಿ ಜಿಲ್ಲೆಗೆ ಅನ್ಯಾಯ ಮಾಡಿದ್ದಾರೆ. ತಮ್ಮ ಅನುದಾನದ 2 ಕೋಟಿಯನ್ನು ಒಂದೇ ಜಿಲ್ಲೆಗೆ ನೀಡಿ ತಾರತಮ್ಯ ಮಾಡಿದ್ದಾರೆ. ಹೈ.ಕ.ಶಿಕ್ಷಣ ಸಂಸ್ಥೆಯ ವೈದ್ಯಕೀಯ ಕಾಲೇಜಿನಲ್ಲಿ ಎನ್‌ಆರ್‌ಐಗಳ ಸೀಟುಗಳನ್ನು ಅಕ್ರಮವಾಗಿ ಮಾರಾಟ ಮಾಡಿದ ಆರೋಪ ಎದುರಿಸುತ್ತಿದ್ದು, ಈ ಪ್ರಕರಣ ಸದ್ಯ ನ್ಯಾಯಾಲಯದಲ್ಲಿದೆ. ಇಂಥ ಭ್ರಷ್ಟಾಚಾರದ ಆರೋಪ ಹೊತ್ತಿರುವ ವ್ಯಕ್ತಿಯನ್ನು ಬೆಂಬಲಿಸಬಾರದೆಂದರು.
ಪರಿಷತ್‌ನಿಂದ ಜಾಗೃತಿ: ಪರಿಷತ್ತು ರಾಜಕೀಯ ಪಕ್ಷವಲ್ಲ. ಆದರೆ ಕಳೆದ ಕೆಲ ಚುನಾವಣೆಗಳ ಸಂದರ್ಭ ಮತದಾರರ ಜಾಗೃತಿ ಕಾರ್ಯ ಮಾಡುತ್ತಿದೆ. ಸೂಕ್ತ ಮತ್ತು ಅರ್ಹರಿಗೆ ಬೆಂಬಲಿಸುವಂತೆ ಸಲಹೆ ನೀಡುತ್ತಿದೆ ಎಂದು ಹೇಳಿದರು.
ಸಂಘಟನೆಯ ಡಾ. ವಿ.ಎ. ಮಾಲಿಪಾಟೀಲ್, ಬಂದಪ್ಪಗೌಡ ಐರೆಡ್ಡಿ, ಅಕ್ಬರ್ ಹುಸೇನ್, ಬಂದೇನವಾಜ್, ಪರಪ್ಪ, ಭೀಮರಾಯ ಸೇರಿದಂತೆ ಅನೇಕರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

