ರಾಯಚೂರು

ಎಂಜಿನಿಯರ್‌ಗೆ ಸಮ್ಮೇಳನಾಧ್ಯಕ್ಷ ಸ್ಥಾನ

Published On :

ಶಹಾಬಾದ್: ಇಲ್ಲಿನ ಅಲ್ಟ್ರಾಂ ಕಾರ್ಖಾನೆಯಲ್ಲಿ ಮೆಕ್ಯಾನಿಕಲ್ ಎಂಜಿನಿಯರಾಗಿ ಸೇವೆ ಸಲ್ಲಿಸುತ್ತ, ಯಂತ್ರಗಳ ನಡುವೆ ಕಾವ್ಯ ಕೃಷಿ ಮಾಡಿ, ಹಲವಾರು ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿರುವ ಮಂಡಲಿಗಿರಿ ಪ್ರಸನ್ನ ಅವರಿಗೆ ಚಿತ್ತಾಪುರ ತಾಲೂಕಿನ ರಾವೂರ ವಲಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನ ಒಲಿದಿರುವದು ಚಿತ್ತಾಪುರ ತಾಲೂಕಿಗೆ ಹೆಮ್ಮೆಯ ವಿಷಯವಾಗಿದೆ.
ಮಕ್ಕಳ ಸಾಹಿತ್ಯವೂ ಸೇರಿದಂತೆ, ಇತರೆ ಕಾವ್ಯ, ಪ್ರಬಂಧಗಳಲ್ಲಿ ಅವರ ಹೆಸರು ಎದ್ದು ಕಾಣುತ್ತದೆ. ಕಾವ್ಯ ಮೊದಲ ಆಸಕ್ತಿ ಎನ್ನುವ ಪ್ರಸನ್ನ ಉತ್ತಮ ಸಂಘಟಕರೂ ಆಗಿದ್ದಾರೆ. ಈಗಾಗಲೇ ಮೂರು ಕವಿತಾ ಸಂಕಲನ, ಐದು ಮಕ್ಕಳ ನಾಟಕ, ಮೂರು ಸಂಪಾದನಾ ಕೃತಿ ರಚಿಸಿರುವ ಅವರು ಅಂಕಣಕಾರರಾಗಿಯೂ ತಮ್ಮ ಬರಹಗಳನ್ನು ಪ್ರಕಟಿಸಿದ್ದಾರೆ. ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಲೆ 10ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಶಹಾಬಾದಿನ ಕನ್ನಡ ಗೆಳೆಯರ ಬಳಗ, ಕನ್ನಡ ಸಾಹಿತ್ಯ ಪರಿಷತ್ತು, ಪ್ರಸ್ತುತ ನೃಪತುಂಗ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಮಾರ್ಗದರ್ಶಕರಾಗಿ ಹಲವು ಯುವ ಕವಿ, ಬರಹಗಾರರಿಗೆ ಮಾರ್ಗದರ್ಶನ ಮಾಡುತ್ತ ಸದಾಕಾಲ ಸ್ಫೂರ್ತಿ ಸೆಲೆಯಾಗಿದ್ದಾರೆ. ಬಿಜಾಪುರ ಜಿಲ್ಲೆಯ ಮಕ್ಕಳ ಸಾಹಿತ್ಯ ರತ್ನ ಪ್ರಶಸ್ತಿ ಪಡೆದಿದ್ದು, ಹಲವು ಸಂಘ, ಸಂಸ್ಥೆಗಳು ಸನ್ಮಾನಿಸಿವೆ. ಜಿಲ್ಲೆಯಲ್ಲಿಯೇ ಪ್ರಥಮ ವಲಯ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನ ದೊರೆತಿರುವುದು ಹೆಮ್ಮೆಯ ವಿಷಯವಾಗಿದೆ.


ನೂತನ ವಿದ್ಯಾಲಯಕ್ಕೆ ಶೇ.84 ಫಲಿತಾಂಶ
ಗುಲ್ಬರ್ಗ: ರಾಜ್ಯ ತಾಂತ್ರಿಕ ಶಿಕ್ಷಣ ಇಲಾಖೆ ನಡೆಸಿದ ಡಿಪ್ಲೊಮಾ ಅಂತಿಮ ವರ್ಷದ ಎಂಜಿನೀಯರಿಂಗ್ ಪರೀಕ್ಷೆಯಲ್ಲಿ ನೂತನ ವಿದ್ಯಾಲಯ ಸಂಸ್ಥೆ ಪಾಲಿಟೆಕ್ನಿಕ್ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಡಿಪ್ಲೋಮಾ ಅಂತಿಮ ವರ್ಷದ ಪರೀಕ್ಷೆಯಲ್ಲಿ 125 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅದರಲ್ಲಿ 45 ಡಿಸ್ಟಿಂಕ್ಷನ್, 49 ಪ್ರಥಮ ದರ್ಜೆ, 104 ವಿದ್ಯಾರ್ಥಿಗಳು ತೇರ್ಗಡೆಹೊಂದಿದ್ದು, ಶೇ.84.44 ಫಲಿತಾಂಶ ದೊರೆತಿದೆ. ಇ ಮತ್ತು ಸಿ ವಿಭಾಗದ ಸ್ವಪ್ನಾ ಜೋಶಿ ಶೇ.87.42, ಮೆಕ್ಯಾನಿಕ್ ವಿಭಾಗದಲ್ಲಿ ಮೆಹಬೂಬ ಶೇ.87.42, ಇ ಮತ್ತು ಇ ವಿಭಾಗದಲ್ಲಿ ಪವನ ಪೊದ್ದಾರ ಶೇ.85.5, ಕಂಪ್ಯೂಟರ್ ವಿಭಾಗದಲ್ಲಿ ಸುಷ್ಮಾ ಶೇ.83, ಸಿವಿಲ್ ವಿಭಾಗದಲ್ಲಿ ನಿಜರೂಪರೆಡ್ಡಿ ಶೇ.82 ಅಂಕ ಪಡೆದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.