ಮಹಿಳೆ ಸ್ವಾವಲಂಬಿ ಬದುಕು ಸಾಗಿಸಲಿ
ಲಿಂಗಸ್ಗೂರು: ಸ್ವ-ಸಹಾಯ ಚಟುವಟಿಕೆಯಿಂದ ಆರ್ಥಿಕವಾಗಿ ಸಬಲರಾಗುವ ಮೂಲಕ ಮಹಿಳೆಯರು ಸ್ವಾವಲಂಬಿ ಬದುಕು ಸಾಗಿಸಬೇಕೆಂದು ಗುರುಗುಂಟಾ ಸಂಸ್ಥಾನದ ರಾಣಿ ಅರುಣಾದೇವಿ ಗುರುರಾಜ ನಾಯಕ ಕರೆ ನೀಡಿದರು.
ತಾಲೂಕಿನ ಗುರುಗುಂಟಾ ಗ್ರಾಮದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸ್ವ-ಸಹಾಯ ಗುಂಪುಗಳ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸ್ವ-ಸಹಾಯ ಗುಂಪಿನ ಮೂಲಕ ಬ್ಯಾಂಕ್ಗಳಿಂದ ಆರ್ಥಿಕ ನೆರವು ಪಡೆದು ಸ್ವಯಂ ಉದ್ಯೋಗ ಚಟುವಟಿಕೆಯಲ್ಲಿ ತೊಡಗಿ ಸ್ವಾಭಿಮಾನಿ ಜೀವನ ಸಾಗಿಸಬೇಕೆಂದು ಹೇಳಿದರು.
ಸಂಸ್ಥೆಯ ಯೋಜನಾಧಿಕಾರಿ ಭಾಸ್ಕರ್ ಮಾತನಾಡಿ, ಮಹಿಳಾ ಸ್ವ-ಸಹಾಯ ಸಂಘಗಳ ರಚನೆ, ಕಿರು ಆರ್ಥಿಕ ವ್ಯವಹಾರ, ಸ್ವಯಂ ಉದ್ಯೋಗ, ಆರೋಗ್ಯ ವಿಮಾ ಕಾರ್ಯಕ್ರಮ, ಕೃಷಿ ಸಂವರ್ಧನೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ ಎಂದರು. ಸಭೆಯಲ್ಲಿ ಜೀವನ ಜ್ಯೋತಿ ಸ್ವಯಂ ಸಹಾಯ ಗುಂಪಿನ ಮುಖ್ಯಸ್ಥೆ ಪ್ರೇಮಾ ಮಹೇಶಗೌಡ, ಲಕ್ಷ್ಮೀ ಪಾಂಡುರಂಗ, ಅನಿತಾ ತುರ್ವಿಹಾಳ ಇದ್ದರು.
ಹಾಸ್ಟೆಲ್ ಮೇಲ್ವಿಚಾರಕ, ಅಧಿಕಾರಿಗಳಿಗೆ ತರಾಟೆ
ಮುದಗಲ್: ಸ್ಥಳೀಯ ಬಿಸಿಎಂ ಇಲಾಖೆಯ ಮೆಟ್ರಿಕ್ ಪೂರ್ವ ಸರ್ಕಾರಿ ವಸತಿ ನಿಲಯಕ್ಕೆ ತಾಲೂಕು ಪಂಚಾಯಿತಿ ಅಧ್ಯಕ್ಷ ರುದ್ರಗೌಡ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವಸತಿ ನಿಲಯದಲ್ಲಿ ವಿದ್ಯಾರ್ಥಿಗಳಿಗೆ ಕುಡಿಯಲು ಉಪ್ಪು ನೀರು ನೀಡಲಾಗುತ್ತದೆ. ಶೌಚಾಲಯ, ಸರಿಯಾದ ಬೆಳಕಿನ ವ್ಯವಸ್ಥೆ, ಫ್ಯಾನ್ ಸೇರಿದಂತೆ ಇನ್ನಿತರೆ ಮೂಲ ಸೌಲಭ್ಯಗಳಿಲ್ಲದೆ ವಿದ್ಯಾರ್ತಿಗಳು ತೊಂದರೆ ಪಡುತ್ತಿರುವುದನ್ನು ಕಂಡ ಅಧ್ಯಕ್ಷರು ಮೇಲ್ವಿಚಾರಕರಿಗೆ, ತಾಲೂಕು ಬಿಸಿಎಂ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿ ತರಾಟೆಗೆ ತೆಗೆದುಕೊಂಡರು.
ಶಾಲೆಗಳು ಆರಂಭವಾಗಿ ತಿಂಗಳು ಗತಿಸುತ್ತಾ ಬಂದಿದೆ. ಇದುವರೆಗೆ ಕೇವಲ 20 ವಿದ್ಯಾರ್ಥಿಗಳು ಮಾತ್ರ ಬಂದಿದ್ದಾರೆ. ನೂರು ವಿದ್ಯಾರ್ಥಿಗಳ ವಸತಿ ನಿಲಯ ಇದಾಗಿದ್ದು ಸರಿಯಾದ ವ್ಯವಸ್ಥೆ ಇಲ್ಲ ಎಂದರು. ವಸತಿ ನಿಲಯದ ಅಡುಗೆ ಮಾಡುವ ವೀರೇಶ ಎನ್ನುವಾತ ವಾರಕ್ಕೆ ಒಮ್ಮೆ ಬಂದು ಹಾಜರಿ ಹಾಕಿ ಹೋಗುತ್ತಾರೆ, ಇಲ್ಲಿ ಕೆಲಸ ಮಾಡುತ್ತಿಲ್ಲ. ಕೇಳಿದರೆ 'ಖಾಸಗಿಯವರನ್ನು ಇಟ್ಟುಕೊಳ್ಳಿ ಅವರಿಗೆ ನಾನು ವೇತನ ನೀಡುತ್ತೇನೆ' ಎಂದು ಹೇಳುತ್ತಾನೆ ಎಂದು ಅಧ್ಯಕ್ಷರಿಗೆ ವಿದ್ಯಾರ್ಥಿಗಳು ದೂರಿದರು.
ವಸತಿ ನಿಲಯದ ಅವ್ಯವಸ್ಥೆಯನ್ನು ಸರಿಪಡಿಸಬೇಕು. ವಿದ್ಯಾರ್ಥಿಗಳಿಗೆ ಸರ್ಕಾರದಿಂದ ನೀಡುವ ನೋಟ್ಪುಸ್ತಕ, ಸಾಬೂನು, ಎಣ್ಣೆ, ಟ್ರಂಕ್, ಹಾಸಿಗೆಗಳನ್ನು ನೀಡಿಲ್ಲ ಎಂದು ವಿದ್ಯಾರ್ಥಿಗಳು ಅಧ್ಯಕ್ಷರಿಗೆ ದೂರಿದರು. ಕೂಡಲೇ ಸಮಸ್ಯೆ ಸರಿಪಡಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ಮುಖಂಡರಾದ ಡಾ. ಸುರೇಶ ಹೂನೂರು, ಗಂಗನಗೌಡ ವಂದಾಲಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

