ರಾಯಚೂರು

ತರಾತುರಿಯಲ್ಲಿ ವಿವಿ ಕುಲಪತಿ ನೇಮಕಕ್ಕೆ ಎಬಿವಿಪಿ ವಿರೋಧ

Published On :

ಗುಲ್ಬರ್ಗ: ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಕರ್ನಾಟಕದ ಯಾವುದೇ ವಿಶ್ವವಿದ್ಯಾಲಯಗಳ ಕುಲಪತಿಗಳನ್ನು ತರಾತುರಿಯಾಗಿ ನೇಮಕ ಮಾಡದಂತೆ ಒತ್ತಾಯಿಸಿ ಗುರುವಾರ ಎಬಿವಿಪಿ ಯುವ ಕುಟೀರ ಪ್ರತಿಭಟನೆ ನಡೆಸಿತು.
ಕರ್ನಾಟಕಕ್ಕೆ ರಾಜ್ಯಪಾಲರಾಗಿ ಆಗಮಿಸಿದ ಹಂಸರಾಜ ಭಾರದ್ವಾಜ್ ಭ್ರಷ್ಟಾಚಾರದಲ್ಲಿ ತೊಡಗಿಕೊಂಡು ಅನೇಕ ವಿವಿಗಳ ಕುಲಪತಿಗಳು ಮತ್ತು ಸಿಂಡಿಕೇಟ್ ಸದಸ್ಯರನ್ನು ನೇಮಕ ಮಾಡಿ ವಿವಿಗಳು ಕಳಪೆ ದರ್ಜೆಗೆ ತಳ್ಳಲ್ಪಟ್ಟಿವೆ ಎಂದು ಎಬಿವಿಪಿ ಕರ್ನಾಟಕ ಶಾಖೆ ಖಂಡಿಸಿದೆ.
ವಿಶ್ವೇಶ್ವರಯ್ಯ ತಾಂತ್ರಿಕ(ವಿ.ಟಿ.ಯು) ಕುಲಪತಿಗಳ ಮೇಲೆ ಹಲವು ಆರೋಪಗಳಿದ್ದು, ಅವರ ಮೇಲೆ ಮಧ್ಯಪ್ರದೇಶ ನಿವೃತ್ತ ನ್ಯಾಯಾಧೀಶರಿಂದ ತನಿಖೆಗೆ ಆದೇಶ ನೀಡಿದ್ದು, ತನಿಖಾ ವರದಿ ಬಹಿರಂಗಪಡಿಸಿಲ್ಲ. ಮತ್ತೊಮ್ಮೆ ಎರಡು ವರ್ಷಗಳ ಕಾಲ ಮರುನೇಮಕ ಮಾಡಿ ಆದೇಶ ಹೊರಡಿಸಿರುವುದು ಸರಿಯಲ್ಲ. ಅಲ್ಲದೆ ಹಿಂದೆ ಕೋಟ್ಯಂತರ ರುಪಾಯಿ ಭ್ರಷ್ಟಾಚಾರ ನಡೆದಿದೆಯಂದು ಗುಮಾನಿಯಿದೆ ಎಂದು ಆರೋಪಿಸಿದರು.
ಇದರಲ್ಲಿ ನೇರವಾಗಿ ರಾಜ್ಯಪಾಲರು ಭಾಗಿಯಾಗಿದ್ದಾರೆಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ದಾವಣಗೆರೆ ವಿಶ್ವವಿದ್ಯಾಲಯ ಹಿಂದಿನ ಸಿಂಡಿಕೇಟ್ ಸದಸ್ಯ ಉದಯಕುಮಾರ ಸಿಂಗ್ ಹಾಗೂ ವಿಧಾನ ಪರಿಷತ್ತಿನ ಸದಸ್ಯ ಪಿ.ವಿ. ಕೃಷ್ಣಭಟ್ಟ ಸಾಕ್ಷಿಯೊಂದಿಗೆ ಗಂಭೀರ ಆರೋಪ ಮಾಡಿದ್ದಾರೆ.
ಈಗಾಗಲೇ 80 ಲಕ್ಷದಿಂದ ಅ12 ಕೋಟಿವರೆಗಿನ ಬೇರೆ ಬೇರೆ ವಿಶ್ವವಿದ್ಯಾಲಯಗಳ ಕುಲಪತಿಗಳ ನೇಮಕ ಮಾಡಿದರ ಬಗ್ಗೆಯೂ ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೇ ರಾಜ್ಯಪಾಲರ ಅವಧಿ ಜೂ.29ಕ್ಕೆ ಮುಗಿಯುವುದರಿಂದ ರಾಜೀವ್ ಗಾಂಧಿ ಆರೋಗ್ಯ ವಿವಿ ಕುಲಪತಿ ನೇಮಕಕ್ಕಾಗಿ ತರಾತುರಿ ಪ್ರಯತ್ನಗಳು ನಡೆಯುತ್ತಿವೆ. ಅದಕ್ಕಾಗಿ ಆತುರದಲ್ಲಿ ಹೊಸ ಕುಲಪತಿ ಆಯ್ಕೆ ಸಮಿತಿ ರಚಿಸುವುದರ ಹಿಂದೆ ಭಾರಿ ಭ್ರಷ್ಟಾಚಾರ ನಡೆಯುವ ಸಾಧ್ಯತೆಯಿದೆ ಎಂದರು.
ಆದ್ದರಿಂದ ಕೂಡಲೇ ಕೇಂದ್ರ ಸರ್ಕಾರವು ರಾಜ್ಯಪಾಲ ಹಂಸರಾಜ ಹಿಂದಕ್ಕೆ ಕರೆಸಿಕೊಳ್ಳಬೇಕೆಂದು ಎಬಿವಿಪಿ ಆಗ್ರಹಿಸಿದೆ ಎಂದು ನಗರ ಕಾರ್ಯದರ್ಶಿ ಅರುಣ ಪಾಟೀಲ ತಿಳಿಸಿದ್ದಾರೆ.
ನಗರ ಸಹ ಕಾರ್ಯದರ್ಶಿ ವಿದ್ಯಾನಂದ ಕಾಂಬಳೆ, ಆನಂದ ಕಪನೂರ, ನಾಗೇಶ, ಸಚೀನ್ ಸೇರಿದಂತೆ ಮುಂತಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.