ಮರುಮದುವೆ ತಡೆದ ಮಹಿಳಾ ಒಕ್ಕೂಟ
ಸಿಂಧನೂರು: ಗಂಗಾವತಿ ತಾಲೂಕಿನಲ್ಲಿ ಮರುಮದುವೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದವನನ್ನು ತಡೆದು ಬುದ್ಧಿ ಹೇಳಿ ಮದುವೆಯನ್ನು ನಿಲ್ಲಿಸಿರುವುದಾಗಿ ಭಾರತ ರಾಷ್ಟ್ರೀಯ ಮಹಿಳಾ ಒಕ್ಕೂಟದ ಜಿಲ್ಲಾ ಕಾರ್ಯದರ್ಶಿ ಎಂ.ಸಿ.ಸೀತಮ್ಮ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಗಂಗಾವತಿಯ ಸೋಮನಾಥ ತಂ.ಬಸಪ್ಪ ಈಗಾಗಲೇ ಶ್ರೀದೇವಿ ಎಂಬ ಯುವತಿಯ ಜೊತೆಗೆ ಈಗಾಗಲೇ ಮದುವೆಯಾಗಿದ್ದಾನೆ. ಸೋಮನಾಥ ಸಿಂಧನೂರಿನ ಗೋಪಾಲನಗರದ ಶಾಂತಾ ಎನ್ನುವ ಯುವತಿಯ ಜೊತೆಗೆ ಮರುಮದುವೆಯಾಗಲು ಹೊರಟಿದ್ದಾನೆ ಎನ್ನುವ ವಿಷಯ ಶ್ರೀದೇವಿಗೆ ಗೊತ್ತಾಗಿ ಭಾರತ ರಾಷ್ಟ್ರೀಯ ಮಹಿಳಾ ಒಕ್ಕೂಟದ ಸಹಾಯದಿಂದ ಗಂಗಾವತಿಯ ವಕೀಲ, ಪಿಎಸ್ಐ ಪೊಲೀಸರ ನೇತೃತ್ವದಲ್ಲಿ ಮರುಮದುವೆಯಾಗಲು ಹೊರಟಿರುವ ಸೋಮನಾಥನಿಗೆ ದೂರವಾಣಿ ಮುಖಾಂತರ ಮಾತನಾಡಿ, ಬುದ್ಧಿ ಹೇಳಿ ಮದುವೆ ತಡೆಯಲಾಗಿದೆ. ಸಮಾಜದಲ್ಲಿ ಇಂತಹ ಮರುಮದುವೆಗಳನ್ನು ಸಂಘ-ಸಂಸ್ಥೆಗಳು ತಡೆದು ಸಮಾಜದ ಸ್ವಾಸ್ಥ್ಯ ಕಾಪಾಡಬೇಕೆಂದು ತಿಳಿಸಿದ್ದಾರೆ.
ಸಮರ್ಪಕ ರಸಗೊಬ್ಬರ ಪೂರೈಸಲು ಮನವಿ
ಸಿಂಧನೂರು: ರಾಜ್ಯದಲ್ಲಿ ಮುಂಗಾರು ಕ್ಷೀಣಿಸುತ್ತಿದೆ. ರೈತಾಪಿ ವರ್ಗ ಮೋಡದ ಕಡೆ ಮುಖಮಾಡಿ ಕುಳಿತಿದೆ. ಮಳೆ ಬಂದ ತಕ್ಷಣ ಗೊಬ್ಬರಕ್ಕಾಗಿ ಅಲೆದಾಡುವ ಸ್ಥಿತಿ ರೈತರಿಗೆ ಒದಗಬಾರದು. ರೈತರಿಗೆ ರಸಗೊಬ್ಬರ ಸಮರ್ಪಕವಾಗಿ ಪೂರೈಸಬೇಕೆಂದು ಎಂದು ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಈರೇಶ ಇಲ್ಲೂರು ಅವರು ಕೇಂದ್ರ ರಸಗೊಬ್ಬರ ಸಚಿವ ಅನಂತಕುಮಾರ್ ಅವರಿಗೆ ಮನವಿ ಮಾಡಿದರು.
ಅವರು ಬೆಂಗಳೂರಿನ ಅವರ ನಿವಾಸದಲ್ಲಿ ಭೇಟಿಯಾಗಿ ಸಿಂಧನೂರು ತಾಲೂಕು ವಿಶೇಷವಾಗಿ ಬತ್ತದ ಕಣಜ ಎಂಬ ಖ್ಯಾತಿಯಲ್ಲಿದೆ. ಈ ಭಾಗದ ರೈತರ ಪ್ರಮುಖ ಬೆಳೆ ಬತ್ತವಾಗಿದೆ. ಆದ್ದರಿಂದ ರಸಗೊಬ್ಬರಗಳನ್ನು ಕೇಂದ್ರ ಸರ್ಕಾರ ಸಮರ್ಪಕವಾಗಿ ಪೂರೈಕೆ ಮಾಡಿ ರೈತರ ಬೆಳೆಗೆ ಸಹಕರಿಸಬೇಕು ಎಂದು ಮನವಿ ಮಾಡಿದ್ದಾಗಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

