ಅಂದಿನ ಅನುಭವ ಮಂಟಪ, ಇಂದಿನ ಪಾರ್ಲಿಮೆಂಟ್
ಮುದಗಲ್: ಅಂದಿನ ಅನುಭವ ಮಂಟಪ ಇಂದಿನ ಪಾರ್ಲಿಮೆಂಟ್, ವಿಶ್ವಸಂಸ್ಥೆ, ಮುಕ್ತ ವಿಶ್ವವಿದ್ಯಾನಿಲಯಗಳು ಎಂದು ಬಸವ ಧರ್ಮ ಪ್ರವಚನಕಾರ ಡಾ. ಈಶ್ವರ ಮಂಟೂರು ಹೇಳಿದರು.
ಸ್ಥಳೀಯ ವಿಜಯಮಹಾಂತೇಶ್ವರ ಮಠದಲ್ಲಿ ಏರ್ಪಡಿಸಿದ್ದ ಬಸವ ಧರ್ಮ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿ, ಅಂದಿನ ಅನುಭವ ಮಂಟಪವನ್ನು ಕಲ್ಲು, ಕಟ್ಟಿಗೆ, ಇಟ್ಟಿಗೆಯಿಂದ ನಿರ್ಮಿಸಿದ್ದಲ್ಲ ಅದೊಂದು ಬಯಲು ಮಂಟಪವಾಗಿತ್ತು. ಭಾವನಾತ್ಮಕ, ಆಧ್ಯಾತ್ಮೀಕ, ಶಿವಮಂಟಪವಾಗಿತ್ತು. ಶೂನ್ಯ ಪೀಠದಲ್ಲಿ 770 ಜನ ಅಮರ ಗಣಗಂಗಳು ಆಧ್ಯಾತ್ಮ ಬಲ್ಲವರಾಗಿದ್ದು, ಲಕ್ಷದ ಮೇಲೆ ತೊಂಬತ್ತಾರು ಜನರಿಗೆ ಪ್ರತಿ ನಿತ್ಯ ಪ್ರಸಾದ ನೀಡುತ್ತಿದ್ದರು ಎಂದರು.
ಮತ ಪವಿತ್ರವಾದದು: ಮತ ಪವಿತ್ರವಾದುದು ಅದನ್ನು ಹಣಕ್ಕೆ, ಹೆಂಡ, ಸಾರಾಯಿಗೆ ಮಾರಾಟ ಮಾಡಿಕೊಳ್ಳಬಾರದು. ಮತ ದಾನ ಮಾಡಬೇಕು, ಆಗಲೇ ಚುನಾಯಿತ ಜನಪ್ರತಿನಿಧಿಗಳ ಬಳಿ ಅಭಿವೃದ್ಧಿ ಕೆಲಸಗಳ ಬಗ್ಗೆ ಕೇಳುವ ನೈತಿಕತೆ, ಹಕ್ಕು ಉಳಿಯುತ್ತದೆ. ಚುನಾವಣೆಯಲ್ಲಿ ನಿಷ್ಠಾವಂತರನ್ನ, ಜನರ ನೋವು, ನಲಿವಿಗೆ ಸ್ಪಂದಿಸುವವರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದರು.
ಮನುಷ್ಯ ಮಾನವಿಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು, ಯುವಕರು ದುಶ್ಚಟಗಳನ್ನು ಬಿಟ್ಟು ಉತ್ತಮ ಆರೋಗ್ಯವಂತರಾಗಿ ದೇಶದ ಪ್ರಗತಿಗೆ ಶ್ರಮಿಸಬೇಕು. ಅಂದಾಗಲೇ ಶಿವ ಶರಣರ ತತ್ವ ಆದರ್ಶಗಳು ಸಾಕಾರವಾಗುತ್ತವೆ. ಇಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ಆರ್ಥಪೂರ್ಣವಾಗಿರುತ್ತವೆ ಎಂದರು.
ವಿಧವೆಯರಿಗೆ ಸೀರೆ: ಮಾ.8 ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಾಗಿದ್ದರಿಂದ ಕಾರ್ಯಕ್ರಮದಲ್ಲಿ 21 ಜನ ವಿಧವೆಯರಿಗೆ ಮತ್ತು ಮುತೈದೆಯರಿಗೆ ಸೀರೆ, ವಿಭೂತಿ, ಶರಣರ ವಚನ ಪುಸ್ತಕಗಳನ್ನು ಡಾ.ಈಶ್ವರ ಮಂಟೂರು ವಿತರಿಸಿದರು.
ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷ ಅಮರೇಗೌಡ ಪಾಟೀಲ್, ಸುರೇಂದ್ರಗೌಡ ಪಾಟೀಲ್, ಮಹಾಂತೇಶ ಪಾಟೀಲ್, ಗುರುಬಸಪ್ಪ ಸಜ್ಜನ್, ಚನ್ನಬಸನಗೌಡ ಕನ್ನಾಳ, ಶಿವಪ್ಪ ಸುಂಕದ್, ಚಂದ್ರಣ್ಣ ಗಂಗಾವತಿ, ವಿರುಪಾಕ್ಷಪ್ಪ ನಾಗಲೀಕರ, ಯೋಗೇಶಪ್ಪ ಗೌರಿಪೂರ, ನಿಂಗಪ್ಪ ಹಣಗಿ, ನ್ಯಾಮತ್ ಖಾದ್ರಿ, ಎಲ್.ಟಿ. ನಾಯಕ್, ರಾಜು ಮಾಲೀಪಾಟೀಲ್ ಮುಂತಾದವರು ಉಪಸ್ಥಿತರಿದ್ದರು.
'ಶೋಷಣೆ ನಿಲ್ಲಲಿ'
ಸಿಂಧನೂರು: ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆಯರ ಸ್ಥಿತಿ ಚಿಂತಾಜನಕವಾಗಿದೆ. ಕಾರ್ಪೋರೇಟ್ ಜಗತ್ತಿನಲ್ಲೂ ಅವರ ಶೋಷಣೆ ತಪ್ಪಿಲ್ಲ ಎಂದು ಉಪನ್ಯಾಸಕ ನಾರಾಯಣ ಬೆಳಗುರ್ಕಿ ವಿಷಾದ ವ್ಯಕ್ತಪಡಿಸಿದರು. ನಗರದ ಮೆಟ್ರಿಕ್ ನಂತರದ ಮಹಿಳಾ ಹಾಸ್ಟೆಲ್ನಲ್ಲಿ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಸವರಾಜ ಬಾದರ್ಲಿ, ಬಸವರಾಜ ಹಳ್ಳಿ ಮಾತನಾಡಿದರು. ಶಿಲ್ಪಾ, ವೇದಾ, ಎಚ್.ಎನ್. ಬಡಿಗೇರ, ಮಂಜುನಾಥ, ಪತ್ರಕರ್ತ ಬಸವರಾಜ ಹಳ್ಳಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

